For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ದೆಸೆಯಿಂದ ಕಣ್ಣೀರು ಹಾಕಿದ್ದರು ನಟಿ ಲಕ್ಷ್ಮಿ ಮಂಚು

  |

  ತೆಲುಗು, ತಮಿಳು ಹಾಗೂ ಕೆಲವು ಇಂಗ್ಲಿಷ್ ಸಿನಿಮಾಗಳಲ್ಲಿ ಸಹ ನಟಿಸಿರುವ ಲಕ್ಷ್ಮಿ ಮಂಚು ನಟನೆಯಿಂದ ಮಾತ್ರವಲ್ಲದೆ ತಮ್ಮ ಬಿಡು-ಬೀಸು ಮಾತುಗಳಿಗೂ ಖ್ಯಾತರು.

  ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಕ್ಷ್ಮಿ ಮಂಚು, ತಾವು ಅಮೀರ್ ಖಾನ್ ಕಾರಣದಿಂದ ಬಿಕ್ಕಿ-ಬಿಕ್ಕಿ ಅತ್ತಿದ್ದನ್ನು ನೆನಪು ಮಾಡಿಕೊಂಡಿದ್ದಾರೆ.

  'ಮಹಾರಾಜ'ನಾಗಿ ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾದ ಆಮೀರ್ ಖಾನ್ ಪುತ್ರ

  'ಅಮೀರ್ ಖಾನ್ ರ ಮದುವೆ ಆದಾಗ ನಾನು ಬಹುಷಃ 4-5 ನೇ ತರಗತಿಯಲ್ಲಿದ್ದೆನೊ ಏನೋ, ಅಮೀರ್ ಖಾನ್ ಮದುವೆ ಆದ ವಿಷಯ ತಿಳಿದ ದಿನ ನಾನು ಯಾವುದೋ ಆಭರಣದ ಅಂಗಡಿಯಲ್ಲಿ ಇದ್ದೆ. ಅಂದು ಬಿಕ್ಕಿ-ಬಿಕ್ಕಿ ಅತ್ತಿದ್ದೆ. ನನಗೆ ವಿಪರೀತ ಬೇಸರವಾಗಿತ್ತು' ಎಂದು ನೆನಪಿಸಿಕೊಂಡಿದ್ದಾರೆ ಲಕ್ಷ್ಮಿ ಮಂಚು.

  'ಆ ನಂತರ ಅಮೀರ್ ಖಾನ್ ಅನ್ನು ಭೇಟಿ ಆಗುವ ಕೆಲವು ಅವಕಾಶಗಳು ಸಿಕ್ಕವು ಆದರೆ ನಾನು ಭೇಟಿ ಮಾಡಲಿಲ್ಲ. ನಾನು ಅಮೀರ್ ಖಾನ್ ಅನ್ನು ನೋಡಿದ ಕೂಡಲೇ ಎಲ್ಲವನ್ನೂ ಮರೆತು ಕುಣಿಯಲು ಪ್ರಾರಂಭಿಸಿಬಿಡುತ್ತೇನೆ ಎಂಬ ಭಯ ನನಗೆ, ಮೂರ್ಖಳಂತೆ ವರ್ತಿಸಿಬಿಡುತ್ತೇನೆ, ಹಾಗಾಗಿ ಅಂಥಹಾ ಪರಿಸ್ಥಿತಿ ಎದುರಾಗುವುದೇ ಬೇಡವೆಂಬ ಕಾರಣಕ್ಕೆ ಅಮೀರ್ ಖಾನ್ ಅನ್ನು ಭೇಟಿಯಾಗಲಿಲ್ಲ' ಎಂದಿದ್ದಾರೆ ಲಕ್ಷ್ಮಿ.

  ಅಮೀರ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ವಿಜಯ್ ಸೇತುಪತಿ

  ಒಮ್ಮೆ ಅಮೀರ್ ಖಾನ್ ಊಟಿಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು, ತಂದೆ ಮೋಹನ್‌ಬಾಬು ಸಹ ಊಟಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಅಮೀರ್ ಖಾನ್ ಇದ್ದ ಹೋಟೆಲ್‌ನಲ್ಲಿಯೇ ನಾವು ತಂಗಿದ್ದೆವು. ಆಗೊಮ್ಮೆ ಅಮೀರ್ ಖಾನ್ ರೂಂ ಎದುರು ಹಾದು ಹೋಗಿದ್ದೆ, ಅಂದು ನನ್ನ ಎದೆ ಬಡಿತ ಜೋರಾಗಿದ್ದು ನನಗೆ ಈಗಲೂ ನೆನಪಿದೆ' ಎಂದು ಹಳೆಯ ನೆನಪುಗಳಿಗೆ ಜಾರಿದ್ದಾರೆ ಲಕ್ಷ್ಮಿ.

  ರೈತರಿಗಾಗಿ ತ್ಯಾಗ ಮಾಡಿದ ಮೋಹಕ ತಾರೆ Ramya | Filmibeat Kannada

  ನಟಿ ಲಕ್ಷ್ಮಿ ಮಂಚು ತೆಲುಗಿನ ಖ್ಯಾತ ನಟ ಮೋಹನ್ ಬಾಬು ಮಗಳು. ನಟಿಯಾಗಿ ಮಾತ್ರವೇ ಅಲ್ಲದೆ ನಿರ್ಮಾಪಕಿ ಆಗಿಯೂ ಹೆಸರು ಮಾಡಿದ್ದಾರೆ ಅವರು.

  English summary
  Actress, producer Lakshmi Manchu opened up about how much she loved Aamir Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X