For Quick Alerts
  ALLOW NOTIFICATIONS  
  For Daily Alerts

  ಇನ್ನೊಂದು ಮದುವೆ ಆಗ್ತೀರಾ ಅಂದ್ರೆ ಮಂಚು ಮನೋಜ್ ಹೀಗಂದಿದ್ಯಾಕೆ.?

  |

  'ದೊಂಗಾ ದೊಂಗದಿ', 'ರಾಜು ಭಾಯ್', 'ವೇದಂ' ಮುಂತಾದ ಚಿತ್ರಗಳ ಮೂಲಕ ಟಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ನಟ ಮಂಚು ಮನೋಜ್. 2015 ರಲ್ಲಿ ಗೆಳತಿ ಪ್ರಣತಿ ರೆಡ್ಡಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಂಚು ಮನೋಜ್, 2019 ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆಯುವುದಾಗಿ ಘೋಷಿಸಿದರು.

  ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮಂಚು ಮನೋಜ್ ''ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಪರಸ್ಪರ ದೂರ ಆಗಲು ನಿರ್ಧಾರ ಮಾಡಿದ್ದೇವೆ'' ಎಂದಿದ್ದರು.

  ಸಂಸಾರ ಬಂಧದಿಂದ ದೂರವಾದ ಮೇಲೆ ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಮಂಚು ಮನೋಜ್ ಹೆಚ್ಚು ಗಮನ ಹರಿಸುತ್ತಿದ್ದಾರೆ. 'ಎಂ.ಎಂ.ಆರ್ಟ್ಸ್' ಎಂಬ ಸ್ವಂತ ಪ್ರೊಡಕ್ಷನ್ ಹೌಸ್ ತೆರೆದಿರುವ ಮಂಚು ಮನೋಜ್ ತಮ್ಮ ಹೊಸ ಚಿತ್ರದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

  ಹೀಗಿರುವಾಗಲೇ, ಮಂಚು ಮನೋಜ್ ಎರಡನೇ ಮದುವೆ ಮ್ಯಾಟ್ರು ಸದ್ದು ಮಾಡುತ್ತಿದೆ. ಹಾಗಾದ್ರೆ, ಎರಡನೇ ಮದುವೆ ಆಗಲು ಮಂಚು ಮನೋಜ್ ರೆಡಿ ಆಗಿದ್ದಾರಾ ಅಂತ ಕೇಳ್ಬೇಡಿ. ಎರಡನೇ ಮದುವೆ ಬಗ್ಗೆ ಮಂಚು ಮನೋಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ ಅಷ್ಟೇ.!

  ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟ

  ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರು ''ಇನ್ನೊಂದು ಮದುವೆ ಆಗ್ತೀರಾ.?'' ಎಂದು ಮಂಚು ಮನೋಜ್ ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ 'ವಾಮೋ...' ಎಂದು ಮಂಚು ಮನೋಜ್ ಉತ್ತರಿಸಿದ್ದಾರೆ.

  ಮಂಚು ಮನೋಜ್ ಹೀಗ್ಯಾಕಂದ್ರು ಎಂಬುದು ಗೊತ್ತಿಲ್ಲ. ಆದ್ರೆ, ಟ್ವೀಟಿಗರು ಮಾತ್ರ ತಮಗೆ ಬೇಕಾದಂತೆ ಮಂಚು ಮನೋಜ್ ಕೊಟ್ಟಿರುವ ಪ್ರತಿಕ್ರಿಯೆಯನ್ನು ಅರ್ಥೈಸಿಕೊಳ್ಳುತ್ತಿದ್ದಾರೆ.

  ಮಂಚು ಮನೋಜ್ ಕಟ್ಟಾ ಅಭಿಮಾನಿಗಳಂತೂ, ಮದುವೆ ಬಗ್ಗೆ ಮಾತು ಬಿಟ್ಟು ಸಿನಿಮಾ ಮೇಲೆ ಗಮನ ಹರಿಸಿ ಅಂತ ಸಲಹೆ ನೀಡುತ್ತಿದ್ದಾರೆ. ಅಂದ್ಹಾಗೆ, 2017 ರಲ್ಲಿ ಬಿಡುಗಡೆ ಆದ 'ಒಕ್ಕಡು ಮಿಗಿಲಾಡು' ಚಿತ್ರದ ನಂತರ ಯಾವ ಸಿನಿಮಾದಲ್ಲೂ ಮಂಚು ಮನೋಜ್ ಕಾಣಿಸಿಕೊಂಡಿಲ್ಲ.

  English summary
  Tollywood Actor Manchu Manoj has reacted about his second marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X