Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಟಾಕ ಹುಡುಗಿ ನಭಾ ನಟೇಶ್‌ಗೆ ಅಪಘಾತ; ಎಡ ಭುಜಕ್ಕೆ ಪೆಟ್ಟು, ಶಸ್ತ್ರ ಚಿಕಿತ್ಸೆ
'ವಜ್ರಕಾಯ' ಚಿತ್ರದ ಪಟಾಕ ಹುಡುಗಿಯಾಗಿ ಅಬ್ಬರಿಸಿದ ನಭಾ ನಟೇಶ್ ನಂತರ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ತೆಲುಗಿನ ಹಿಟ್ ಸಿನಿಮಾಗಳಲ್ಲಿ ನಟಿಸಿದ ಚೆಲುವೆ ಏಕಾಏಕಿ ಸೈಲೆಂಟ್ ಆಗಿಬಿಟ್ಟಿದ್ದರು. ಅದಕ್ಕೆ ಕಾರಣ ಏನು ಎನ್ನುವುದನ್ನು ನಭಾ ಈಗ ರಿವೀಲ್ ಮಾಡಿದ್ದಾರೆ.
ಅಪಘಾತದಿಂದ ಎಡ ಭುಜಕ್ಕೆ ಪೆಟ್ಟಾಗಿತ್ತು. ಇದು ದೈಹಿಕವಾಗಿ ಮಾನಸಿಕವಾಗಿ ಸಾಕಷ್ಟು ನೋವು ತಂದಿತ್ತು ಎಂದು ನಭಾ ನಟೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಶೀಘ್ರದಲ್ಲೇ ಕಂಬ್ಯಾಕ್ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಕಳೆದ ವರ್ಷ ಪಟಾಕ ಚೆಲುವೆ ಒಂದೇ ಒಂದು ಸಿನಿಮಾದಲ್ಲೂ ನಟಿಸಿರಲಿಲ್ಲ. ಸಾಲು ಸಾಲು ಸೋಲುಗಳಿಂದ ಆಕೆಗೆ ಅವಕಾಶಗಳು ಸಿಕ್ಕಿಲ್ಲ. ಅಥವಾ ಸೋಲಿನಿಂದ ಕಂಗೆಟ್ಟು ಚಿತ್ರರಂಗ ತೊರೆಯುವ ನಿರ್ಧಾರಕ್ಕೆ ನಭಾ ಬಂದಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಸದ್ಯ ಅಪಘಾತದಿಂದ ಚೇತರಿಕೊಂಡಿರುವ ಚೆಲುವೆ ಮತ್ತೆ ನಟಿಸೋಕೆ ಸಿದ್ಧ ಎಂದಿದ್ದಾರೆ.
ದೇವರಕೊಂಡ
ಜೊತೆ
5
ದಿನ
100
ಮಂದಿಗೆ
ಉಚಿತ
ಪ್ರವಾಸ:
ನೀವು
ಆ
ಅದೃಷ್ಟವಂತರಾಗಬಹುದು!
ತಮಗಾದ ಅಪಘಾತ ಹಾಗೂ ಎದುರಿಸಿದ ಕಷ್ಟದ ಬಗ್ಗೆ ನಭಾ ನಟೇಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಹೊಸ ವರ್ಷದಲ್ಲಿ ಹೊಸ ಸಿನಿಮಾ ಕ್ರಾಂತಿ ಮಾಡಲು ಸನ್ನದ್ಧರಾಗಿರುವ ಸುಳಿವು ನೀಡಿದ್ದಾರೆ. ಆಕೆಯ ಪೋಸ್ಟ್ ವೈರಲ್ ಆಗಿದ್ದು, ಕಂಬ್ಯಾಕ್ ಮಾಡುವಂತೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಅಪಘಾತದಲ್ಲಿ ಭುಜಕ್ಕೆ ಪೆಟ್ಟು
"ನಾನು ಕೆಲ ದಿನಗಳಿಂದ ಕಾಣಿಸಿಕೊಂಡಿರಲಿಲ್ಲ. ನಾನು ನಿಮ್ಮನ್ನು ಮಿಸ್ ಮಾಡಿಕೊಂಡಂತೆ ನೀವು ನನ್ನನ್ನು ಮಿಸ್ ಮಾಡಿಕೊಂಡಿದ್ದೀರಿ ಎನ್ನುವುದು ಗೊತ್ತು. ಕಳೆದ ವರ್ಷ ಬಹಳ ಟಫ್ ಆಗಿತ್ತು. ಒಂದು ಅಪಘಾತಕ್ಕೆ ಗುರಿಯಾಗಿದ್ದೆ. ಪರಿಣಾಮ ನನ್ನ ಎಡ ಭುಜದ ಮೂಳೆಗಳಿಗೆ ಪೆಟ್ಟು ಬಿದ್ದಿತ್ತು. ಚಿಕಿತ್ಸೆಯ ಭಾಗವಾಗಿ ಸಾಕಷ್ಟು ಬಾರಿ ಶಸ್ತ್ರ ಚಿಕಿತ್ಸೆ ಮಾಡುವಂತಾಗಿತ್ತು. ಇದು ಮಾನಸಿಕವಾಗಿ ಶಾರೀರಿಕವಾಗಿ ನೋವು ತಂದಿತ್ತು"

"ನಾನು ಸಿದ್ಧಳಾಗಿದ್ದೀನಿ 2023"
"ಈಗ ನಾನು ಚೇತರಿಸಿಕೊಂಡಿದ್ದೇನೆ. ನಾನು ಬಹಳ ಇಷ್ಟಪಡುವ ಸಿನಿಮಾದಲ್ಲಿ ನಟಿಸಲು ಉತ್ಸುಕಳಾಗಿದ್ದೀನಿ. ನಿಮ್ಮ ಪ್ರೀತಿ, ಅಭಿಮಾನ ನನಗೆ ಧೈರ್ಯ ತುಂಬಿದೆ. ನಾನು ಮತ್ತೆ ವಾಪಸ್ ಬರ್ತಿದ್ದೀನಿ. ನಾನು ಮತ್ತೆ ಮೊದಲಿನಂತಾಗಿದ್ದೀನಿ ಎಂದು ಹೇಳಲು ಖುಷಿ ಆಗುತ್ತಿದೆ. ಮೊದಲಿಗಿಂತಲೂ ಸ್ಟ್ರಾಂಗ್ ಆಗಿ ಬರ್ತಿದ್ದೀನಿ. ನಾನು ಸಿದ್ಧಳಾಗಿದ್ದೀನಿ 2023" ಎಂದು ನಭಾ ಪೋಸ್ಟ್ ಮಾಡಿದ್ದಾರೆ.

ನಭಾ ಕೈಯಲ್ಲಿ ಸಿನಿಮಾಗಳಿಲ್ಲ
ನಿತಿನ್ ಜೋಡಿಯಾಗಿ ನಭಾ ನಟೇಶ್ ನಟಿಸಿದ 'ಮೆಸ್ಟ್ರೋ' 2021ರಲ್ಲಿ ಬಂದಿತ್ತು. ಈ ಸಿನಿಮಾ ಥಿಯೇಟರ್ ಬದಲು ನೇರವಾಗಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಆ ನಂತರ ನಭಾ ಮತ್ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಸದ್ಯಕ್ಕೆ ಆಕೆ ಕೈಯಲ್ಲಿ ಯಾವುದೇ ಸಿನಿಮಾ ಕೂಡ ಇಲ್ಲ. ಹಾಗಾಗಿ ಕೆಲವರು ಪಟಾಕ ಹುಡುಗಿ ಸಿನಿ ಕರಿಯರ್ ಮುಗೀತು ಎಂದು ಹೇಳುತ್ತಿದ್ದಾರೆ. ಆದರೆ ಅದನ್ನೆಲ್ಲಾ ಮೆಟ್ಟಿ ವಾಪಸ್ ಬರಲು ಶೃಂಗೇರಿ ಬೆಡಗಿ ಸಿದ್ಧತೆ ನಡೆಸಿದ್ದಾರೆ.

'ಇಸ್ಮಾರ್ಟ್ ಶಂಕರ್' ಹಿಟ್
ಕನ್ನಡದಲ್ಲಿ 'ವಜ್ರಕಾಯ', 'ಲೀ', 'ಸಾಹೇಬ' ಸಿನಿಮಾಗಳಲ್ಲಿ ನಟಿಸಿದ ನಭಾ, ಮುಂದೆ 'ನನ್ನು ದೋಚುಕೊಂದುವಟೆ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. 'ಅದುಗೊ', 'ಇಸ್ಮಾರ್ಟ್ ಶಂಕರ್', 'ಡಿಸ್ಕೋ ರಾಜಾ', 'ಅಲ್ಲುಡು ಅದುರ್ಸ್' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. ಪುರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದರು. ಆ ಸಿನಿಮಾ ಮಾತ್ರ ಹಿಟ್ ಆಗಿ ಒಂದು ರೇಂಜಿಗೆ ಸಕ್ಸಸ್ ತಂದುಕೊಟ್ಟಿತ್ತು. ಉಳಿದಂತೆ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ.