For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಮನೆಯಲ್ಲಿ ಪ್ರಶಾಂತ್ ನೀಲ್: ಹೊರಬಿದ್ದಿದೆ ಹೊಸ ಸುದ್ದಿ

  By ರವೀಂದ್ರ ಕೊಟಕಿ
  |

  ದಕ್ಷಿಣಭಾರತದಲ್ಲಿ ಪ್ರಭಾಸ್ ನಂತರ ಹೆಚ್ಚು ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ಫೋಕಸ್ ಮಾಡುತ್ತಿರುವ ಮತ್ತೊಬ್ಬ ನಟ ರಾಮ್ ಚರಣ್ ತೇಜ. ಈಗಾಗಲೇ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ತಮ್ಮ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರ ಅಭಿನಯದ 'ಆಚಾರ್ಯ' ನಿರ್ಮಿಸುತ್ತಿರುವ ಜೊತೆಗೆ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ರಾಮಚರಣ್ ಬಹುನಿರೀಕ್ಷಿತ ಎಸ್ಎಸ್ ರಾಜಮೌಳಿ ಅವರ 'ಆರ್ ಆರ್ ಆರ್ 'ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಹೊರಟಿದ್ದಾರೆ.

  ಕೆಲವರ್ಷಗಳ ಹಿಂದೆ 'ಜಂಜೀರ್' ಚಿತ್ರದ ಮೂಲಕ ಹಿಂದಿಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಆ ಸ್ಟ್ರೈಟ್ ಹಿಂದಿ ಚಿತ್ರ ಹೆಚ್ಚು ಯಶಸ್ಸನ್ನು ಕಾಣಲಿಲ್ಲ. ಆನಂತರ ಹಿಂದಿ ಚಿತ್ರರಂಗದ ಕಡೆಗೆ ಮುಖ ಮಾಡದೆ ತೆಲುಗು ಚಿತ್ರಗಳ ಮೇಲೆ ಕಾನ್ಸಂಟ್ರೇಟ್ ಮಾಡಿದರು. ಇತ್ತೀಚೆಗೆ ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರಗಳು ಬಾಲಿವುಡ್ ಮೇಲೆ ಪ್ಯಾನ್ ಇಂಡಿಯಾ ಹೆಸರಿನಲ್ಲಿ ದಂಡಯಾತ್ರೆ ಮಾಡುತ್ತಿರುವ ಸಮಯದಲ್ಲಿ ರಾಮ್ ಚರಣ್ ಕೂಡ ತಮ್ಮ ಸ್ಪೀಡ್ ಹೆಚ್ಚಿಸಿಕೊಂಡು ಪೂರ್ತಿಯಾಗಿ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ಫೋಕಸ್ ನೆಟ್ಟಿದ್ದಾರೆ. ಹೀಗಾಗಿಯೇ ಪ್ಯಾನ್ ಇಂಡಿಯಾ ಕಥೆಗಳು ಮತ್ತು ನಿರ್ದೇಶಕರುಗಳಿಗೆ ಮಾತ್ರ ಅವರು ಕಾಲ್ ಶೀಟ್ ನೀಡುತ್ತಿದ್ದಾರೆ. ಇದೇ ಕ್ರಮದಲ್ಲಿ ಖ್ಯಾತ ನಿರ್ದೇಶಕ ಶಂಕರ್ ಅವರ 'RC 15' ಚಿತ್ರೀಕರಣ ಭರದಿಂದ ಸಾಗುತ್ತಿದೆ. ದಿಲ್ ರಾಜು ನಿರ್ಮಿಸುತ್ತಿರುವ ಈ ಚಿತ್ರ ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣವಾಗುತ್ತಿದೆ. ಮುಂದಿನ ವರ್ಷದಲ್ಲಿ ಬರಲಿರುವ ದಕ್ಷಿಣ ಭಾರತದ ಅತಿದೊಡ್ಡ ಪ್ರಾಜೆಕ್ಟ್ ಗಳಲ್ಲಿ ಇದು ಒಂದಾಗಿದೆ.

  ಅತ್ತ ಎಸ್ಎಸ್ ರಾಜಮೌಳಿ ಅವರ 'ಆರ್ ಆರ್ ಆರ್', ಶಂಕರ್ ಅವರ 'RC 15' ಮೂಲಕ ಏಕಕಾಲಕ್ಕೆ ಭಾರತದ ಇಬ್ಬರು ಟಾಪ್ ಡೈರೆಕ್ಟರ್ ಗಳ ಸಿನಿಮಾಗಳಲ್ಲಿ ನಟಿಸಿ ನಟಿಸಿರುವ ರಾಮ್ ಚರಣ್ ಈಗ ಮತ್ತೆರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಭಾರತದ ಇಬ್ಬರು ಟಾಪ್ ಡೈರೆಕ್ಟರ್ ಗಳ ಚಿತ್ರಗಳ ನಂತರ ರಾಮ್ ಚರಣ್ ಅವರ ಮುಂದಿನ ಚಿತ್ರ ನಿರ್ದೇಶಿಸುವ ಅವಕಾಶವನ್ನು 'ಜೆರ್ಸಿ' ನಿರ್ದೇಶಕ ಗೌತಮ್ ತಿನ್ನನೂರಿ ಪಡೆದುಕೊಂಡಿದ್ದಾರೆ. ನಾನಿ ನಟಿಸಿದ 'ಜೆರ್ಸಿ' ಚಿತ್ರ ಈಗಾಗಲೇ ಹಿಂದಿಯಲ್ಲಿ ಶಾಹಿದ್ ಕಪೂರ್ ನಟಿಸುತ್ತಿದ್ದು ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ. ಸೂಕ್ಷ್ಮ ಮತ್ತು ಸಂವೇದನಶೀಲ ವಿಷಯಗಳ ಮೇಲೆ ಬೆಳಕುಚೆಲ್ಲುವ ಗೌತಮ್ ಅವರ ಕಥೆಗೆ ರಾಮ್ ಚರಣ್ ಫಿದಾ ಆಗಿದ್ದಾರೆ. ವಿಜಯದಶಮಿ ಶುಭ ಸಂದರ್ಭದಲ್ಲಿ ರಾಮ್ ಚರಣ್ ತೇಜ, ಗೌತಮ್ ತಿನ್ನನೂರಿ ಕಾಂಬಿನೇಷನ್ನಲ್ಲಿ 'RC 16' ಚಿತ್ರದ ಅಧಿಕೃತ ಘೋಷಣೆ ಕೂಡ ಆಗಿದೆ. ಈಗಾಗಲೇ 'ಜೆರ್ಸಿ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಗೌತಮ್ ನಿರ್ದೇಶಿಸಿರುವ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬರಲಿದೆ.

  ಚಿರಂಜೀವಿ ಮನೆಯಲ್ಲಿ ಪ್ರಶಾಂತ್ ನೀಲ್ ಡಿನ್ನರ್

  ಚಿರಂಜೀವಿ ಮನೆಯಲ್ಲಿ ಪ್ರಶಾಂತ್ ನೀಲ್ ಡಿನ್ನರ್

  ಮೆಗಾಪವರ್ ಸ್ಟಾರ್ ರಾಮಚರಣ್ ಸರಣಿ ಸಿನಿಮಾಗಳನ್ನು ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ 'ಆರ್ ಆರ್ ಆರ್' ಚಿತ್ರವನ್ನು ಮುಗಿಸಿರುವ ಚೆರ್ರಿ, ಇತ್ತೀಚೆಗೆ ಶಂಕರ್ ನಿರ್ದೇಶನದಲ್ಲಿ ಚಿತ್ರವನ್ನು ಆರಂಭಿಸಿದರು. ಈಗ ಗೌತಮ್ ತಿನ್ನನೂರಿ ಚಿತ್ರವನ್ನು ಘೋಷಿಸಿದ್ದಾರೆ. ಇವುಗಳ ಜೊತೆಗೆ ಚೆರ್ರಿ ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡಲು ಸಿದ್ಧರಾಗಿದ್ದರು. ವಿಜಯದಶಮಿ ಚರಣ್ ಅವರು ತಮ್ಮ 16 ನೇ ಚಿತ್ರವನ್ನು ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮಾಡುವುದಾಗಿ ಘೋಷಿಸಿದ್ದಾರೆ. UV ಕ್ರಿಯೇಶನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿರುವ ಈ ಚಿತ್ರವು ಖಂಡಿತವಾಗಿಯೂ ಪ್ಯಾನ್ ಇಂಡಿಯಾ ಮೋಡಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈಗ ಚೆರ್ರಿ ಮತ್ತೊಂದು ಚಲನಚಿತ್ರವನ್ನು ಟ್ರ್ಯಾಕ್ ನಲ್ಲಿಡುವಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ ವಿಜಯದಶಮಿ ಶುಭ ಸಂದರ್ಭದಲ್ಲಿ ಚಿರಂಜೀವಿ ಅವರ ಆಹ್ವಾನದ ಮೇರೆಗೆ ನಿರ್ಮಾಪಕ ಡಿವಿವಿ ದಾನಯ್ಯ ಜೊತೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿರಂಜೀವಿ ಮನೆಗೆ ಭೇಟಿ ನೀಡಿ ರಾತ್ರಿಯ ಡಿನ್ನರ್ ಮಾಡಿದ್ದಾರೆ.

  RC 17 ರಾಮ್ ಚರಣ್ ಪ್ರಶಾಂತ್ ನೀಲ್

  RC 17 ರಾಮ್ ಚರಣ್ ಪ್ರಶಾಂತ್ ನೀಲ್

  'RC 17' ಇದನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ರಾಮ್ ಚರಣ್ 17 ನೇ ಚಿತ್ರವನ್ನು ಪ್ಯಾನ್ ಇಂಡಿಯಾ ನಿರ್ದೇಶಕ 'ಕೆಜಿಎಫ್' ಮತ್ತು 'ಸಲಾರ್' ಚಲನಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ರಾಮ್ ಚರಣ್ ಜೊತೆ 'ವಿನಯ ವಿಧೇಯ ರಾಮ' ಮತ್ತು 'ಆರ್ ಆರ್ ಆರ್' ಸಿನಿಮಾಗಳನ್ನು ನಿರ್ಮಿಸಿದ ಡಿವಿವಿ ದಾನಯ್ಯ ಈ ಕ್ರೇಜಿ ಕಾಂಬಿನೇಷನ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಇದೇ ಕ್ರಮದಲ್ಲಿ ನಿನ್ನೆ ರಾತ್ರಿ ವಿಜಯ ದಶಮಿಯ ಸಂದರ್ಭದಲ್ಲಿ, ಮೆಗಾಸ್ಟಾರ್ ಚಿರಂಜೀವಿ ಅವರ ಮನೆಯಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಔತಣಕೂಟವನ್ನು ಆಯೋಜಿಸಿದರು. ಇದರ ಬಗ್ಗೆ ಪ್ರಶಾಂತ್ ನೀಲ್ ಹೀಗೆ "ನಾನು ಇಂದು ದಂತಕಥೆಯನ್ನು ಭೇಟಿಯಾದೆ. ಅದ್ಭುತ ಆತಿಥ್ಯ ನೀಡಿದ ರಾಮ್ ಚರಣ್ ರಿಗೆ ಧನ್ಯವಾದಗಳು. ಚಿರಂಜೀವಿಯನ್ನು ನೋಡುವ ನನ್ನ ಬಾಲ್ಯದ ಆಸೆ ಇಂದು ಈಡೇರಿದೆ " ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಡಿವಿವಿ ದಾನಯ್ಯ ಅವರು, 'ಚಿರಂಜೀವಿ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಅವರೊಂದಿಗೆ ಭೋಜನ ಮಾಡುವುದೇ ಒಂದು ಭಾಗ್ಯ'ಎಂದು ಹೇಳಿಕೊಂಡು ಬಂದಿದ್ದಾರೆ.

  'ಸಲಾರ್' ಸಿನಿಮಾದ ಬಳಿಕ ಚಿತ್ರೀಕರಣ ಪ್ರಾರಂಭ

  'ಸಲಾರ್' ಸಿನಿಮಾದ ಬಳಿಕ ಚಿತ್ರೀಕರಣ ಪ್ರಾರಂಭ

  ಪ್ರಶಾಂತ್ ನೀಲ್ ಈಗ ಪ್ರಭಾಸ್ ಜೊತೆ 'ಸಲಾರ್' ಸಿನಿಮಾ ಮಾಡುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಅವಲೋಕಿಸಿದರೆ, ಅದು ಮುಗಿದ ನಂತರ ರಾಮಚರಣ್ ಚಿತ್ರದ ಸಾಧ್ಯತೆ ಇದೆ ಎಂದು ಅರ್ಥವಾಗುತ್ತದೆ. ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್- 2' ಮುಂದಿನ ವರ್ಷ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಈ ವೇಳೆಗೆ 'ಆರ್‌ಆರ್‌ಆರ್' ಹಾಗೂ 'ಆಚಾರ್ಯ' ಸಿನಿಮಾಗಳು ಬಿಡುಗಡೆ ಆಗಿಬಿಟ್ಟಿರುತ್ತವೆ.

  ತೆಲುಗಿನಲ್ಲಿಯೇ ನೆಲೆ ನಿಲ್ಲಲಿದ್ದಾರೆಯೇ ಪ್ರಶಾಂತ್ ನೀಲ್

  ತೆಲುಗಿನಲ್ಲಿಯೇ ನೆಲೆ ನಿಲ್ಲಲಿದ್ದಾರೆಯೇ ಪ್ರಶಾಂತ್ ನೀಲ್

  'ಉಗ್ರಂ', 'ಕೆಜಿಎಫ್' ಸಿನಿಮಾ ಮೂಲಕ ನಿರ್ದೇಶಕರಾಗಿ ದೊಡ್ಡ ಯಶಸ್ಸು ಗಳಿಸಿದ ಪ್ರಶಾಂತ್ ನೀಲ್, ಪ್ರಸ್ತುತ ಪ್ರಭಾಸ್ ನಟನೆಯ 'ಸಲಾರ್' ತೆಲುಗು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ರಾಮ್ ಚರಣ್ ತೇಜ ಸಿನಿಮಾ ನಿರ್ದೇಶಿಸುವುದು ಖಾತ್ರಿಯಾಗಿದೆ. ಇದಕ್ಕೆ ಮುನ್ನ ಜೂ ಎನ್‌ಟಿಆರ್ ನಟನೆಯ ಸಿನಿಮಾವನ್ನು ನಿರ್ದೇಶಿಸುವ ಮಾತಾಗಿದೆ. ಇದರ ನಡುವೆ ಮೈತ್ರಿ ಮೂವೀಸ್‌ಗಾಗಿ ಸಿನಿಮಾ ನಿರ್ದೇಶಿಸಿಕೊಡಲು ಒಪ್ಪಿಗೆ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಶಾಂತ್ ನೀಲ್ ತೆಲುಗಿನಲ್ಲಿಯೇ ನೆಲೆ ಊರಲಿದ್ದಾರೆಯೇ ಎಂಬ ಅನುಮಾನ ಮೂಡಿದೆ.

  English summary
  Director Prashanth Neel may direct Ram Charan Teja's 17th movie. Prashanth Neel visited Chiranjeevi's house yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X