twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳ ಒತ್ತಾಯದ ಮೇರೆಗೆ 'RRR' ಸಿನಿಮಾಕ್ಕೆ ಬದಲಾವಣೆ ತಂದ ರಾಜಮೌಳಿ

    |

    'RRR' ಸಿನಿಮಾದಲ್ಲಿ ಇಬ್ಬರು ಸೂಪರ್ ಸ್ಟಾರ್‌ಗಳಲ್ಲಿ ಹಾಕಿಕೊಂಡಾಗ ರಾಜಮೌಳಿಗೆ ಇದ್ದ ಮೊದಲ ಭಯವೆಂದರೆ ಅಭಿಮಾನಿಗಳದ್ದು. ಒಬ್ಬ ಸ್ಟಾರ್ ನಟನ ಪಾತ್ರ ಮತ್ತೊಬ್ಬರಿಗಿಂತ ತುಸು ಕಡಿಮೆಯಾದರೂ ಅಭಿಮಾನಿಗಳು ರೊಚ್ಚಿಗೇಳುವ ಸಾಧ್ಯತೆ ಇತ್ತು.

    ಈಗ 'RRR' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆದಮೇಲೆ ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಅಭಿಮಾನಿಗಳು ಇಬ್ಬರೂ ಖುಷಿಯಾಗಿದ್ದಾರೆ. ಎಲ್ಲೋ ಕೆಲವರಷ್ಟೆ ಸಣ್ಣ ಪುಟ್ಟ ಅಸಮಾಧಾನಗಳನ್ನು ಹೊರಹಾಕಿದ್ದಾದೆ. ಆದರೆ ಅಸಮಧಾನಿತರ ಪ್ರಮಾಣ ಬಹಳ ಕಡಿಮೆ.

    RRR ಹುಟ್ಟಿದ್ದು ಹೇಗೆ: ಕಥೆಗಾರ ಬಿಚ್ಚಿಟ್ಟ 'RRR' ಕತೆಯ ಕತೆ!RRR ಹುಟ್ಟಿದ್ದು ಹೇಗೆ: ಕಥೆಗಾರ ಬಿಚ್ಚಿಟ್ಟ 'RRR' ಕತೆಯ ಕತೆ!

    ಆದರೆ 'RRR' ಸಿನಿಮಾ ನೋಡಿದ ಅಭಿಮಾನಿಗಳು ಒಂದು ವಿಷಯಕ್ಕೆ ಅಸಮಾಧಾನಗೊಂಡಿದ್ದಾರೆ. ಅದನ್ನು ಬದಲಾಯಿಸುವಂತೆ ರಾಜಮೌಳಿಯನ್ನು ಒತ್ತಾಯಿಸಿದ್ದಾರೆ. ಕೇವಲ ಅಭಿಮಾನಿಗಳಷ್ಟೆ ಅಲ್ಲ, ಸಿನಿಮಾದ ವಿತರಕರು, ಪ್ರದರ್ಶಕರು ಸಹ ರಾಜಮೌಳಿಗೆ ಮನವಿ ಮಾಡಿದ್ದಾರೆ. ಏನದು? ಮುಂದೆ ತಿಳಿಯೋಣ...

    ಮುಂಬೈನಲ್ಲಿ 'RRR' ಟಿಕೆಟ್ ಸಿಗಲಿಲ್ಲ, ಬೆಂಗಳೂರಲ್ಲಿ ನೋಡುವೆ ಎಂದ ನಟಿ ಶ್ರಿಯಾಮುಂಬೈನಲ್ಲಿ 'RRR' ಟಿಕೆಟ್ ಸಿಗಲಿಲ್ಲ, ಬೆಂಗಳೂರಲ್ಲಿ ನೋಡುವೆ ಎಂದ ನಟಿ ಶ್ರಿಯಾ

    ಬ್ರಿಟೀಷ್ ಅಧಿಕಾರಿಗಳ ಇಂಗ್ಲಿಷ್ ‌ ಸಂಭಾಷಣೆ ಬಗ್ಗೆ ತಕರಾರು

    ಬ್ರಿಟೀಷ್ ಅಧಿಕಾರಿಗಳ ಇಂಗ್ಲಿಷ್ ‌ ಸಂಭಾಷಣೆ ಬಗ್ಗೆ ತಕರಾರು

    'RRR' ಸಿನಿಮಾವು ಸ್ವಾತಂತ್ರ್ಯಪೂರ್ವ ಭಾರತದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಹಲವು ಬ್ರಿಟೀಷ್ ಅಧಿಕಾರಿಗಳ ಪಾತ್ರಗಳಿವೆ. ಬ್ರಿಟೀಷ್ ಅಧಿಕಾರಿಗಳ ಪಾತ್ರಗಳು ಇಂಗ್ಲಿಷ್ ‌ನಲ್ಲಿ ಮಾತನಾಡುತ್ತವೆ. ಮೊದಲಾರ್ಧದಲ್ಲಂತೂ ಇಂಗ್ಲಿಷ್ ಡೈಲಾಗ್‌ಗಳು ಹೆಚ್ಚಾಗಿಯೇ ಇವೆ. ಈ ಇಂಗ್ಲಿಷ್ ಡೈಲಾಗ್‌ಗಳು ಎಲ್ಲರಿಗೂ ಸುಲಭಕ್ಕೆ ಅರ್ಥವಾಗದು ಹಾಗಾಗಿ ಇವನ್ನು ಬದಲಸಿ, ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್‌ ಓವರ್ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ.

    ರೇಯ್ ಸ್ಟಿವನ್‌ಸನ್ ಪಾತ್ರಕ್ಕೆ ರಾಣಾ ದಗ್ಗುಬಾಟಿ ಧ್ವನಿ

    ರೇಯ್ ಸ್ಟಿವನ್‌ಸನ್ ಪಾತ್ರಕ್ಕೆ ರಾಣಾ ದಗ್ಗುಬಾಟಿ ಧ್ವನಿ

    ಅಸಲಿಗೆ ಸಿನಿಮಾದಲ್ಲಿ ರೇಯ್ ಸ್ಟಿವನ್‌ಸನ್ ಪಾತ್ರಕ್ಕೆ ರಾಣಾ ದಗ್ಗುಬಾಟಿ ಧ್ವನಿ ನೀಡಿದ್ದಾರೆ. ಆದರೆ ಅವರ ಧ್ವನಿ ಅಲ್ಲಲ್ಲಿ ಮಾತ್ರವೇ ಇದೆ. ಬದಲಿಗೆ ರೇಯ್ ಸ್ಟಿವನ್‌ಸನ್‌ನ ಪೂರ್ತಿ ಪಾತ್ರಕ್ಕೆ ಇಲ್ಲ. ಅಲ್ಲದೆ ರೇಯ್ ಸ್ಟಿವನ್‌ಸನ್ ಪಾತ್ರದ ಹೊರತಾಗಿ ಇನ್ನಾವ ಬ್ರಿಟೀಷ್ ಪಾತ್ರಕ್ಕೂ ಪ್ರಾದೇಶಿಕ ಭಾಷೆಯ ವಾಯ್ಸ್ ಓವರ್‌ ನೀಡಲಾಗಿಲ್ಲ. ಉಳಿದ ಎಲ್ಲ ಬ್ರಿಟೀಷ್ ಪಾತ್ರಗಳು ಇಂಗ್ಲಿಷ್ ‌ನಲ್ಲಿಯೇ ಮಾತನಾಡುತ್ತವೆ. ಜೂ ಎನ್‌ಟಿಆರ್ ಪ್ರೇಯಸಿ ಪಾತ್ರಧಾರಿ ಒಲಿವಿಯಾ ಮೋರಿಸ್ (ಜೆನಿಫರ್ ಪಾತ್ರ) ಸಂಭಾಷಣೆಗಳು ಸಹ ಇಂಗ್ಲಿಷ್ ‌ನಲ್ಲಿಯೇ ಇವೆ.

    ರಾಮ್ ಚರಣ್ ಸಹ ಇಂಗ್ಲಿಷ್ ‌ನಲ್ಲಿ ಮಾತನಾಡುತ್ತಾರೆ

    ರಾಮ್ ಚರಣ್ ಸಹ ಇಂಗ್ಲಿಷ್ ‌ನಲ್ಲಿ ಮಾತನಾಡುತ್ತಾರೆ

    ಬ್ರಿಟೀಷ್ ಪಾತ್ರಗಳು ಮಾತ್ರವೇ ಅಲ್ಲದೆ ಸಿನಿಮಾದ ಕೆಲವು ಕಡೆಗಳಲ್ಲಿ ರಾಮ್ ಚರಣ್ ಸಹ ಇಂಗ್ಲಿಷ್ ‌ನಲ್ಲಿ ಮಾತನಾಡುತ್ತಾರೆ. ಇವಕ್ಕೆಲ್ಲ ತೆಲುಗು ಅಥವಾ ಪ್ರಾದೇಶಿಕ ಭಾಷೆಯ ವಾಯ್ಸ್ ಓವರ್ ಇಲ್ಲ. ಅಲ್ಲದೆ ಸ್ಥಳೀಯ ಭಾಷೆಯಲ್ಲಿ ಸಬ್ ಟೈಟಲ್ಸ್ ಸಹ ಇಲ್ಲ. ಹಾಗಾಗಿ ಹಲವು ಅಭಿಮಾನಿಗಳು ಇದಕ್ಕೆ ತಕರಾರು ವ್ಯಕ್ತಪಡಿಸಿದ್ದು, ಇದನ್ನು ಬದಲಾಯಿಸಲು ಕೇಳಿದ್ದಾರೆ. ಅಂತೆಯೇ ರಾಜಮೌಳಿ, 'RRR' ಸಿನಿಮಾದಲ್ಲಿ ಎಲ್ಲೆಲ್ಲಿ ಇಂಗ್ಲಿಷ್ ಭಾಷೆಯ ಡೈಲಾಗ್‌ಗಳು ಇವೆಯೋ ಅಲ್ಲೆಲ್ಲ ಸ್ಥಳೀಯ ಭಾಷೆಯ ಸಬ್‌ಟೈಟಲ್ ಸೇರಿಸಲಿದ್ದಾರೆ. ಸಬ್ ಟೈಟಲ್ ಸೇರಿಸಿದ ಹೊಸ ಅವತರಣಿಕೆ ಶೀಘ್ರದಲ್ಲಿಯೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

    Recommended Video

    RRR ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕಾರಣ ಕೊಟ್ಟ Alia Bhatt | Rajamouli
    'RRR' ಸಿನಿಮಾಕ್ಕೆ ಇನ್ನಷ್ಟು ದೃಶ್ಯಗಳ ಸೇರಿಕೆ?

    'RRR' ಸಿನಿಮಾಕ್ಕೆ ಇನ್ನಷ್ಟು ದೃಶ್ಯಗಳ ಸೇರಿಕೆ?

    'RRR' ಸಿನಿಮಾದ ಅವಧಿ 3 ಗಂಟೆ 2 ನಿಮಿಷ. ಇದು ಉದ್ದದ ಸಿನಿಮಾ ಅವಧಿ ಎಂದೇ ಹೇಳಬೇಕು. ಸಿನಿಮಾಕ್ಕಾಗಿ ಇನ್ನೂ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಅದನ್ನೆಲ್ಲ ತೆಗೆದರೂ ಸಹ ಸಿನಿಮಾದ ಅವಧಿ ಇಷ್ಟು ಧೀರ್ಘವಾಗಿದೆ. ಆದರೆ 'RRR' ಸಿನಿಮಾವು ಒಟಿಟಿಗೆ ಬಂದಾಗ ಸಿನಿಮಾದಿಂದ ತೆಗೆದಿದ್ದ ದೃಶ್ಯಗಳನ್ನು ಸೇರಿಸುವ ಸಾಧ್ಯತೆ ಇದೆ. ಆಗ ಆಲಿಯಾ ಭಟ್‌ರ ಇನ್ನಷ್ಟು ದೃಶ್ಯಗಳು ವೀಕ್ಷಿಸಲು ಸಿಗಬಹುದು. ಒಲಿವಿಯಾ ಮೋರಿಸ್ ಹಾಗೂ ಜೂ ಎನ್‌ಟಿಆರ್ ನಡುವೆ ಸಹ ಇನ್ನಷ್ಟು ದೃಶ್ಯಗಳು ಸಿಗಬಹುದು ಎನ್ನಲಾಗುತ್ತಿದೆ.

    English summary
    Director Rajamouli adding regional language subtitles to RRR movie in some scenes where actors talk in English.
    Friday, April 1, 2022, 14:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X