ಪ್ರಭಾಸ್ ಏಕೆ ನನ್ನ ಆತ್ಮೀಯ ಗೆಳೆಯ: ರಾಜಮೌಳಿ ನೀಡಿದ ಕಾರಣಗಳು
ರಾಜಮೌಳಿ ಮತ್ತು ಪ್ರಭಾಸ್ ಸೂಪರ್ ಹಿಟ್ ಜೋಡಿ ಎಂಬುದರಲ್ಲಿ ಅನುಮಾನವೇ ಇಲ್ಲ. ಈ ಇಬ್ಬರೂ ಜೊತೆಯಾಗಿ ಮಾಡಿರುವ ಮೂರು ಸಿನಿಮಾಗಳೂ ಸಹ ಸೂಪರ್-ಡೂಪರ್ ಹಿಟ್.
Recommended Video
ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಾಯಕ ಹಾಗೂ ನಿರ್ದೇಶಕನ ನಡುವೆ ಹಲವಾರು ಬಾರಿ ಭಾರಿ ಚರ್ಚೆಗಳು, ವಾದಗಳು ನಡೆಯುತ್ತಲೇ ಇರುತ್ತವೆ, ಅವಶ್ಯಕತೆ ಇದೆಯೋ ಇಲ್ಲವೋ ನಾಯಕ-ನಿರ್ದೇಶಕ ಚಿತ್ರೀಕರಣದ ಸಮಯದಲ್ಲಿ ಗೆಳೆಯರಾಗಿರಲೇಬೇಕಾಗುತ್ತದೆ.
ಅಂತೆಯೇ ರಾಜಮೌಳಿ ಹಾಗೂ ಪ್ರಭಾಸ್ ಸಹ ಚಿತ್ರೀಕರಣದ ಸಮಯದಲ್ಲಿ ಗೆಳೆಯರಂತೆಯೇ ಇರುತ್ತಾರೆ. ಆದರೆ ಚಿತ್ರೀಕರಣದ ಹೊರತಾಗಿ ಉಳಿದ ಸಮಯದಲ್ಲೂ ಸಹ ಈ ಇಬ್ಬರೂ ಅತ್ಯಾಪ್ತ ಗೆಳೆಯರು. ಆದರೆ ಪ್ರಭಾಸ್ ಏಕೆ ತಮ್ಮ ಅತ್ಯಾಪ್ತ ಗೆಳೆಯ ಎಂಬುದನ್ನು ವಿವರಿಸಿದ್ದಾರೆ ನಿರ್ದೇಶಕ ರಾಜಮೌಳಿ.

ವೃತ್ತಿ ಬಾಂಧವ್ಯದ ಜೊತೆ-ಜೊತೆಗೆ ಉತ್ತಮ ಗೆಳೆತನ
'ಪ್ರಭಾಸ್ ಮತ್ತು ನಾನು ವೃತ್ತಿ ಬಾಂಧವ್ಯದ ಜೊತೆ-ಜೊತೆಗೆ ಉತ್ತಮ ಗೆಳೆತನವನ್ನೂ ಇಟ್ಟುಕೊಂಡಿದ್ದೇವೆ. ಚತ್ರಪತಿ ಸಿನಿಮಾದ ವೇಳೆ ನಮ್ಮಿಬ್ಬರ ಪರಿಚಯ ಗೆಳೆತನಕ್ಕೆ ತಿರುಗಿತು' ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ ರಾಜಮೌಳಿ.

ನನ್ನ, ಪ್ರಭಾಸ್ ವ್ಯಕ್ತಿತ್ವದಲ್ಲಿ ಸಾಮ್ಯತೆಗಳಿವೆ: ರಾಜಮೌಳಿ
'ನನ್ನ ಹಾಗೂ ಪ್ರಭಾಸ್ ವ್ಯಕ್ತಿತ್ವದಲ್ಲಿ ಹಲವು ಸಾಮ್ಯತೆಗಳಿವೆ. ನಾನೂ ಹಾಗೂ ಪ್ರಭಾಸ್ ಇಬ್ಬರೂ ಸಹ ಸಿನಿಮಾದ ಸಂಖ್ಯೆಗಳನ್ನು ಲೆಕ್ಕ ಇಡುವುದಿಲ್ಲ. ಎಷ್ಟು ಸಿನಿಮಾ ಮಾಡಿದ್ದೇವೆ ಎಂಬುದಕ್ಕಿಂತಲೂ ಎಂಥಹಾ ಸಿನಿಮಾಗಳನ್ನು ಮಾಡಿದ್ದೇವೆ ಎಂಬುದೇ ನಮಗೆ ಮುಖ್ಯ' ಎಂದಿದ್ದಾರೆ ರಾಜಮೌಳಿ.

ಇಬ್ಬರೂ ಒಮ್ಮೆಗೆ ಎರಡು ಸಿನಿಮಾ ಮಾಡುವುದಿಲ್ಲ: ರಾಜಮೌಳಿ
ನಾವಿಬ್ಬರೂ ಸಹ ಒಮ್ಮೆಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ. ನಾವು ಸಿನಿಮಾಕ್ಕಾಗಿ ಎಷ್ಟು ಹಣ ಪಡೆಯುತ್ತಿದ್ದೇವೆ ಎಂಬುದನ್ನು ಲೆಕ್ಕ ಮಾಡುವುದಿಲ್ಲ. ಸಿನಿಮಾದ ಒಟ್ಟು ಗುಣಮಟ್ಟ ಮಾತ್ರವೇ ನಮಗೆ ಮುಖ್ಯವಾಗಿರುತ್ತದೆ. ನಮ್ಮ ಮಾರುಕಟ್ಟೆ ಮೌಲ್ಯ ಇತರೆ ವಿಷಯಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಾಮ್ಯತೆಗಳ ಪಟ್ಟಿಕೊಟ್ಟಿದ್ದಾರೆ ರಾಜಮೌಳಿ.

ಹಲವು ಸಿನಿಮಾಗಳಲ್ಲಿ ತೊಡಿಸಿಕೊಂಡಿರುವ ಪ್ರಭಾಸ್
ಪ್ರಭಾಸ್ ಪ್ರಸ್ತುತ ರಾಧೆ-ಶ್ಯಾಮ್ ಸಿನಿಮಾ ಚಿತ್ರೀಕರಣ ಮುಗಿಸುವುದರಲ್ಲಿದ್ದಾರೆ. ಇದರ ನಂತರ ದೀಪಿಕಾ ಪಡುಕೋಣೆ ನಾಯಕಿ ಆಗಿ ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಪ್ರಾರಂಭ ಆಗಲಿದೆ. ಅದರ ನಂತರ 'ಆದಿಪುರುಷ್' ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ರಾಜಮೌಳಿ ಪ್ರಸ್ತುತ ಆರ್‌ಆರ್‌ಆರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











