For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ರಕುಲ್ ಪ್ರೀತ್ ಸಿಂಗ್‌ಗೆ ಇಡಿ ನೊಟೀಸ್

  |

  ಡ್ರಗ್ಸ್‌ಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ನಟಿ ರಕುಲ್ ಪ್ರೀತ್ ಸಿಂಗ್‌ಗೆ ಕೇಂದ್ರ ಹಣಕಾಸು ಅವ್ಯವಹಾರ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ.

  2017 ಮತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸಮನ್ಸ್ ಜಾರಿ ಮಾಡಲಾಗಿದ್ದು, ಆ ಪ್ರಕರಣದಿಂದ ಬೆಳಕಿಗೆ ಬಂದಿದ್ದ ಹಣಕಾಸು ಅವ್ಯವಹಾರದ ಕುರಿತಾಗಿ ಇಡಿ ತನಿಖೆ ನಡೆಸುತ್ತಿದೆ.

  2017 ರಲ್ಲಿ ಬೆಳಕಿಗೆ ಬಂದಿದ್ದ ತೆಲುಗು ಚಿತ್ರರಂಗದ ಡ್ರಗ್ಸ್ ಪ್ರಕರಣದಲ್ಲಿ ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ ಕೌರ್, ನಟ ರವಿತೇಜ ಸಹೋದರ, ನಟಿ ಮುಮೈತ್ ಖಾನ್ ಇನ್ನೂ ಹಲವರ ಹೆಸರು ಕೇಳಿ ಬಂದಿತ್ತು. ಹಲವರ ವಿಚಾರಣೆ ನಡೆದಿತ್ತು.

  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರದ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದ್ದು, ಈಗಾಗಲೇ ಪುರಿ ಜಗನ್ನಾಥ್, ಚಾರ್ಮಿ ಸೇರಿದಂತೆ ಹಲವರ ವಿಚಾರಣೆ ನಡೆಸಿದೆ. 2021ರ ಸೆಪ್ಟೆಂಬರ್‌ ತಿಂಗಳಲ್ಲಿ ಇದೇ ಪ್ರಕರಣದಲ್ಲಿ ರಕುಲ್ ಅವರನ್ನೂ ವಿಚಾರಣೆ ನಡೆಸಲಾಗಿತ್ತು.

  ರಕುಲ್ ಜೊತೆಗೆ ತೆಲಂಗಾಣ ಶಾಸಕ ಪೈಲೆಟ್ ರೋಹಿತ್ ರೆಡ್ಡಿಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಿರ್ಮಾಪಕ ಶಂಕರ್ ಗೌಡ ನೀಡಿದ್ದ ಪಾರ್ಟಿಯಲ್ಲಿ ಎಂಎಲ್‌ಎಗಳು, ತೆಲುಗಿನ ಹೀರೋ ತನಿಶ್ ಕೆಲವು ಉದ್ಯಮಿಗಳು ಭಾಗವಹಿಸಿದ್ದರು. ಆ ಪಾರ್ಟಿಯಲ್ಲಿ ಸುಮಾರು ನಾಲ್ಕು ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಆ ಪಾರ್ಟಿಯಲ್ಲಿ ಸಿಕ್ಕ ಡ್ರಗ್ಸ್‌ಗೂ ಶಾಸಕ ಪೈಲೆಟ್ ರೋಹಿತ್ ರೆಡ್ಡಿಗೂ ಸಂಬಂಧವಿದೆ ಎಂದು ಇಡಿ ಅನುಮಾನಿಸಿದ್ದು ಪೈಲೆಟ್ ರೋಹಿತ್ ರೆಡ್ಡಿಗೆ ಸಮನ್ಸ್ ಜಾರಿ ಮಾಡಿದೆ.

  ಡ್ರಗ್ಸ್ ಪ್ರಕರಣ ಮಾತ್ರವೇ ಅಲ್ಲದೆ ಶಾಸಕರ ಖರೀದಿ ಪ್ರಕರಣದಲ್ಲಿಯೂ ರೋಹಿತ್ ರೆಡ್ಡಿ ಪಾತ್ರ ಇದ್ದು, ಈ ವಿಷಯವಾಗಿಯೂ ಇಡಿ ವಿಚಾರಣೆ ನಡೆಸಲಿದೆ. ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಶಾಸಕ ಪೈಲೆಟ್ ರೋಹಿತ್ ರೆಡ್ಡಿ ತಮ್ಮ ಬ್ಯಾಂಕ್ ಖಾತೆ ಇನ್ನಿತರೆ ಕೆಲವು ದಾಖಲೆಗಳೊಟ್ಟಿಗೆ ಡಿಸೆಂಬರ್ 19 ರಂದು ಇಡಿ ಮುಂದೆ ಹಾಜರಾಗಬೇಕಿದೆ.

  ಡ್ರಗ್ಸ್ ಪ್ರಕರಣದಲ್ಲಿ ರಕುಲ್ ವಿಚಾರಣೆ ಎದುರಿಸುತ್ತಿರುವುದು ಇದು ಮೊದಲೇನೂ ಅಲ್ಲ. ಸುಶಾಂತ್ ಸಿಂಗ್ ನಿಧನದ ಬಳಿಕ ಹೊರಬಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿಯೂ ಎನ್‌ಸಿಬಿಯು ರಕುಲ್‌ಗೆ ನೊಟೀಸ್ ನೀಡಿ ವಿಚಾರಣೆ ನಡೆಸಿತ್ತು.

  English summary
  Actress Rakul Preet Singh summoned by ED in drug related case. TRS MLA Pailot Rohit Reddy also summoned by ED.
  Friday, December 16, 2022, 16:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X