ನಟಿ ರಕುಲ್ ಪ್ರೀತ್ ಸಿಂಗ್‌ಗೆ ಕೊರೊನಾ ವೈರಸ್ ದೃಢ

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್‌ಗೆ ಕೊರೊನಾ ವೈರಸ್ ತಗುಲಿದ್ದು, ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಈ ಕುರಿತು ಸ್ವತಃ ರಕುಲ್ ಸಿಂಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ''ಆರೋಗ್ಯವಾಗಿದ್ದೇನೆ, ವಿಶ್ರಾಂತಿ ಪಡೆಯುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

''ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ'' ಎಂದು ಮನವಿ ಮಾಡಿದ್ದಾರೆ.

''ನಾನು ಕೊರೊನಾ ವೈರಸ್ ಪರೀಕ್ಷೆ ಮಾಡಿದ ವೇಳೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ ಎಂದು ತಿಳಿಸಲು ಬಯಸುತ್ತೇನೆ. ಸದ್ಯ ಕಾರಂಟೈನ್‌ಗೆ ಒಳಗೊಂಡಿದ್ದೇನೆ. ನಾನು ಚೆನ್ನಾಗಿಯೇ ಇದ್ದೇನೆ ಮತ್ತು ಚೆನ್ನಾಗಿ ವಿಶ್ರಾಂತಿ ಪಡೆಯುತ್ತೇನೆ. ಆದಷ್ಟೂ ಬೇಗ ಶೂಟ್‌ಗೆ ಮರಳಬಹುದು. ನನ್ನನ್ನು ಭೇಟಿಯಾದ ಎಲ್ಲರಿಗೂ ವಿನಂತಿಸಿರುವುದೇನಂದರೆ ನೀವೂ ಪರೀಕ್ಷೆಗೆ ಒಳಗಾಗಿ ಮತ್ತು ದಯವಿಟ್ಟು ಸುರಕ್ಷಿತವಾಗಿರಿ'' ಎಂದು ಬರೆದುಕೊಂಡಿದ್ದಾರೆ.

Rakul Preet Singh Tested Positive for Coronavirus

ಅಂದ್ಹಾಗೆ, ಅಜಯ್ ದೇವಗನ್, ಅಮಿತಾಭ್ ಬಚ್ಚನ್ ನಟಿಸುತ್ತಿರುವ 'ಮೇಡೇ' ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ನಾಯಕಿಯಾಗಿದ್ದು, ಇತ್ತೀಚಿಗಷ್ಟೆ ಶೂಟಿಂಗ್ ಆರಂಭಿಸಿದ್ದರು. ಶೂಟಿಂಗ್‌ಗೆ ಸೆಟ್‌ನಿಂದ ಫೋಟೋ ಸಹ ಶೇರ್ ಮಾಡಿಕೊಂಡಿದ್ದರು.

ಕಳೆದ ತಿಂಗಳು ರಕುಲ್ ಪ್ರೀತ್ ಸಿಂಗ್ ಮಾಲ್ಡೀವ್ಸ್‌ಗೆ ತೆರಳಿದ್ದರು. ಮಾಲ್ಡೀವ್ಸ್‌ ಪ್ರವಾಸ ಮುಗಿಸಿ ವಾಪಸ್ ಬಂದ ನಟಿ ಮತ್ತೆ ಚಿತ್ರೀಕರಣ ಆರಂಭಿಸಿದ್ದಾರೆ.

ಅದಕ್ಕೂ ಮುಂಚೆ ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ವಿಚಾರಣೆಗೆ ಒಳಪಟ್ಟಿದ್ದರು.

Recommended Video

ಸೋನು ಸೂದ್ ಬಗ್ಗೆ ಅಚ್ಚರಿಕೆಯ ಹೇಳಿಕೆ ಕೊಟ್ಟ ಚಿರಂಜೀವಿ | Filmibeat Kannada

More from Filmibeat

English summary
South actress Rakul Preet Singh Tested Positive for Coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X