twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್', 'RRR' ಬಗ್ಗೆ ಆಸಕ್ತಿಕರ ಅಭಿಪ್ರಾಯ ಹಂಚಿಕೊಂಡ ರಾಣಾ ದಗ್ಗುಬಾಟಿ

    |

    ಕೋವಿಡ್ ಬಳಿಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಂಕ್ರಮಣ ಕಾಲ ಶುರುವಾಗಿದೆ. ದಕ್ಷಿಣದ ಸಿನಿಮಾಗಳು ದೈತ್ಯ ಎನಿಸಿಕೊಂಡಿದ್ದ ಬಾಲಿವುಡ್ ಅನ್ನು ಮೀರಿ ಬೆಳೆದಿವೆ. ಬಾಲಿವುಡ್‌ನ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ.

    ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸ್ ಆಫೀಸ್‌ ಲೆಕ್ಕದಲ್ಲಿಯೂ, ಕಂಟೆಂಟ್ ವಿಚಾರದಲ್ಲಿಯೂ ದೊಡ್ಡ ಪ್ರಭಾವವನ್ನು ಭಾರತೀಯ ಸಿನಿಮಾ ಪ್ರೇಕ್ಷಕರ ಮೇಲೆ ಬೀರಿದೆ. ಮಾಸ್ ಅಥವಾ ಕಂಟೆಂಟ್ ಓರಿಯೆಂಟೆಡ್ ಎರಡೂ ಬಗೆಯ ಪ್ರೇಕ್ಷಕರು ಉತ್ತಮ ಸಿನಿಮಾಕ್ಕಾಗಿ ದಕ್ಷಿಣದ ಕಡೆ ನೋಡುತ್ತಿದ್ದಾರೆ.

    ಈ ನಡುವೆ ದಕ್ಷಿಣವೂ ಸೇರಿದಂತೆ ಇಡೀ ಭಾರತದ ಚಿತ್ರಕರ್ಮಿಗಳು ತಮಗೆ ಗೊತ್ತಿರುವ ಸಿನಿಮಾ ಭಾಷೆಯ ಬಗ್ಗೆ ಮತ್ತೊಮ್ಮೆ ಯೋಚಿಸುವಂತಾಗಿದೆ. ಅದಕ್ಕೆ 'ಕೆಜಿಎಫ್' ಹಾಗೂ 'RRR' ಪ್ರಮುಖ ಕಾರಣ ಎನಿಸಿಕೊಂಡಿವೆ. ಈ ಎರಡೂ ಸಿನಿಮಾಗಳು, ಇತರ ಚಿತ್ರೋದ್ಯಮಿಗಳ ಚಿಂತನೆಯಲ್ಲಿ ತಂದ ಬದಲಾವಣೆ ಬಗ್ಗೆ ನಟ ರಾಣಾ ದಗ್ಗುಬಾಟಿ ಗೋವಾ ಸಿನಿಮೋತ್ಸವದಲ್ಲಿ ಮಾತನಾಡಿದ್ದಾರೆ.

    ಜನಪ್ರಿಯ ಸಿನಿಮಾ ವಿಮರ್ಶಕ ಭಾರಧ್ವಜ ರಂಗನ್ ಅವರೊಟ್ಟಿಗೆ ಗೋವಾ ಸಿನಿಮೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಣಾ ದಗ್ಗುಬಾಟಿ, ಸಿನಿಮಾ ಹಾಗೂ ಸಿನಿಮಾವನ್ನು ವೀಕ್ಷಿಸುವ ಜನರ ಮನಸ್ಥಿತಿ, ಅವರ ಬೇಡಿಕೆ, ನಿರೀಕ್ಷೆ ಯಾವ ಮಟ್ಟಿಗೆ ಬದಲಾಗಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ ಕೆಲವು ಆಸಕ್ತಿಗರ ಗಮನಿಕೆಗಳನ್ನು ರಾಣಾ ದಗ್ಗುಬಾಟಿ ಹಂಚಿಕೊಂಡಿದ್ದಾರೆ.

    ಟಾಮ್ ಕ್ರೂಸ್-ಮೆರೆಲ್ ಸ್ಟ್ರೀಪ್ ಉದಾಹರಣೆ

    ಟಾಮ್ ಕ್ರೂಸ್-ಮೆರೆಲ್ ಸ್ಟ್ರೀಪ್ ಉದಾಹರಣೆ

    ''ಟಾಮ್ ಕ್ರೂಸ್ ಅಂಥಹಾ ದೊಡ್ಡ ಸ್ಟಾರ್ ನಟನನ್ನು 'ಮಿಷನ್ ಇಂಪಾಸಿಬಲ್' ಸರಣಿಯ ಸಿನಿಮಾಗಳಲ್ಲಿ ಅಥವಾ ಅದೇ ಮಾದರಿಯ ಸಿನಿಮಾಗಳಲ್ಲಿ ಇದ್ದರಷ್ಟೆ ನೋಡುತ್ತೀವಿ. ಅದೇ ದೊಡ್ಡ ಸ್ಟಾರ್ ನಟ ಟಾಮ್ ಕ್ರೂಸ್, ದೊಡ್ಡ ಸ್ಟಾರ್ ನಟಿ ಮೆರೆಲ್ ಸ್ಟ್ರೀಪ್ ಜೊತೆಗೆ 'ಲಯನ್ಸ್ ಫಾರ್ ಲ್ಯಾಂಬ್ಸ್' ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಎಷ್ಟು ಜನ ಆ ಸಿನಿಮಾ ನೋಡಿದ್ದಾರೆ? ಮೆರೆಲ್ ಸ್ಟ್ರೀಪ್‌ಗಾಗಿಯೂ ನೋಡಿಲ್ಲ, ಟಾಮ್ ಕ್ರೂಸ್‌ಗಾಗಿಯೂ ಆ ಸಿನಿಮಾವನ್ನು ಜನ ನೋಡಿಲ್ಲ'' ಎಂದಿದ್ದಾರೆ ರಾಣಾ ದಗ್ಗುಬಾಟಿ.

    ಸ್ಟಾರ್ ನಟರೂ ಲೆಕ್ಕಕ್ಕಿಲ್ಲದ ಸ್ಥಿತಿ ಬರಲಿದೆ: ರಾಣಾ

    ಸ್ಟಾರ್ ನಟರೂ ಲೆಕ್ಕಕ್ಕಿಲ್ಲದ ಸ್ಥಿತಿ ಬರಲಿದೆ: ರಾಣಾ

    ಸ್ಟಾರ್ ನಟರು ಸಹ ಲೆಕ್ಕಕ್ಕೆ ಬಾರದಂತೆ ಆಗುತ್ತಾರೆ. ಈ ಬದಲಾವಣೆಯನ್ನು ಭಾರತದಲ್ಲಿಯೂ ಸಹ ಶೀಘ್ರದಲ್ಲಿಯೇ ನಾವು ನೋಡಲಿದ್ದೇವೆ. ಈ ವಾರ ಯಾವ ದೊಡ್ಡ ತೆಲುಗು, ತಮಿಳು ಸಿನಿಮಾ ಬಿಡುಗಡೆ ಆಯಿತು ಎಂಬುದನ್ನು ಸಹ ಗಮನಿಸದೆ, ಇತ್ತೀಚೆಗೆ ಬಿಡುಗಡೆ ಆದ 'ವಕಾಂಡಾ ಫಾರೆವರ್' ಸಿನಿಮಾ ನೋಡಲು ಜನ ಮುಗಿಬಿದ್ದರು. ಆಫೀಸ್‌ಗಳಿಗೆ ರಜೆ ಹಾಕಿ ಸಿನಿಮಾ ನೋಡಲು ಹೊರಟರು'' ಎಂದಿರುವ ರಾಣಾ, ಸಿನಿಮಾದ ಬ್ರ್ಯಾಂಡ್ ನೇಮ್‌, ಸ್ಟಾರ್‌ ನಟರ ಬ್ರ್ಯಾಂಡ್‌ಗಿಂತಲೂ ದೊಡ್ಡದಾಗುತ್ತಿದೆ. ಆ ಬದಲಾವಣೆ ಭಾರತದಲ್ಲಿಯೂ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

    'RRR', 'ಕೆಜಿಎಫ್' ಬಗ್ಗೆ ರಾಣಾ ಮಾತು

    'RRR', 'ಕೆಜಿಎಫ್' ಬಗ್ಗೆ ರಾಣಾ ಮಾತು

    ಸಿನಿಮಾಗಳು, ವ್ಯಕ್ತಿಗಿಂತಲೂ ಅಥವಾ ನಟನಿಗಿಂತಲೂ ಹೆಚ್ಚಾಗಿ ಪ್ರೇಕ್ಷಕನ ಮೇಲೆ ಪ್ರಭಾವ ಬೀರುತ್ತಿವೆ. ಸಿನಿಮಾಗಳು ತಮ್ಮ ಪಾತ್ರಗಳು, ತಮ್ಮ ಪರಿಸರದಿಂದ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತಿವೆ. ಜನ ಈಗಲೂ ಸಮಯ ತೆಗೆದು 'ಕೆಜಿಎಫ್', 'RRR' ರೀತಿಯ ಸಿನಿಮಾವನ್ನು ನೋಡುತ್ತಿದ್ದಾರೆಂದರೆ ಅದಕ್ಕೆ ಕಾರಣ ಅವರು ತಮ್ಮ ಸಿನಿಮಾವನ್ನು ಇವೆಂಟ್‌ ರೀತಿ, ಹಬ್ಬದ ರೀತಿ ಪ್ರೆಸೆಂಟ್ ಮಾಡಿದರು'' ಎಂದು ಹೊಗಳಿದ್ದಾರೆ ರಾಣಾ ದಗ್ಗುಬಾಟಿ.

    ಸಿನಿಮಾ ಕರ್ಮಿಗಳು ಭಿನ್ನವಾಗಿ ಯೋಚಿಸಬೇಕಿದೆ: ರಾಣಾ

    ಸಿನಿಮಾ ಕರ್ಮಿಗಳು ಭಿನ್ನವಾಗಿ ಯೋಚಿಸಬೇಕಿದೆ: ರಾಣಾ

    ''ಸಿನಿಮಾ ಕರ್ಮಿಗಳು ಈಗ ಭಿನ್ನವಾಗಿ ಯೋಚಿಸಬೇಕಿದೆ. ನಮ್ಮ ಸಿನಿಮಾಗಳಿಗೆ ಚಿತ್ರಮಂದಿರದ ಅವಶ್ಯಕತೆ ಇದೆಯೇ? ಅಥವಾ ನಮ್ಮ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಯೋಗ್ಯವೆ? ಜನ ಸಮಯ ವ್ಯಯಿಸಿ ಒಂದು ಸಿನಿಮಾ ಅನುಭೂತಿ ಪಡೆಯಲು ಬಂದಾಗ ಅವರ ನಿರೀಕ್ಷೆಯನ್ನು ನಮ್ಮ ಸಿನಿಮಾ ತಲುಪುತ್ತದೆಯೇ? ಎಂದು ಯೋಚಿಸಬೇಕಿದೆ. ಇಲ್ಲವಾದರೆ ಒಟಿಟಿ ಇದೆ ಅಲ್ಲಿ ಬಿಡುಗಡೆ ಮಾಡುವುದು ಸೂಕ್ತ ಎಂಬಂತಾಗಿದೆ'' ಎಂದಿದ್ದಾರೆ ರಾಣಾ ದಗ್ಗುಬಾಟಿ.

    English summary
    Actor and Producer Rana Daggubati talks about what change did RRR and KGF movies bring in movie industry.
    Tuesday, November 29, 2022, 14:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X