For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಮನೆಗೆ ಬಂದ ಹೊಸ ಅತಿಥಿ, ಸದಾ ರಶ್ಮಿಕಾಳ ತೋಳಲ್ಲೆ!

  |

  ನಟಿ ರಶ್ಮಿಕಾ ಮಂದಣ್ಣ ಈಗ ಬ್ಯುಸಿ ನಟಿ, ತೆಲುಗು, ತಮಿಳು, ಹಿಂದಿ ಸಿನಿಮಾ ರಂಗಗಳಲ್ಲಿ ಬಹು ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ಮೂಲ ಮನೆಯಿಂದ ದೂರ ಮುಂಬೈ ಹಾಗೂ ಹೈದರಾಬಾದ್‌ ಎರಡು ನಗರಗಳ ನಡುವೆ ವಾಸ್ತವ್ಯ ಬದಲಿಸುತ್ತಲೂ ಇರುತ್ತಾರೆ.

  ವೃತ್ತಿಯ ಕಾರಣಕ್ಕೆ ಕುಟುಂಬದವರಿಂದ ದೂರ ಇರುವ ನಟಿ ರಶ್ಮಿಕಾ ಮಂದಣ್ಣ ಬಹುತೇಕ ಒಬ್ಬರೇ ಮುಂಬೈ ಹಾಗೂ ಹೈದರಾಬಾದ್‌ನ ನಿವಾಸಗಳಲ್ಲಿ ವಾಸವಿರುತ್ತಾರೆ. ಒಬ್ಬರೇ ಇದ್ದರೂ ರಶ್ಮಿಕಾ ಏಕಾಂಗಿಯಲ್ಲ, ಅದಕ್ಕೆ ಕಾರಣ ಅವರ ನಾಲ್ಕು ಕಾಲಿನ ಗೆಳೆಯರು.

  ರಶ್ಮಿಕಾ ಮಂದಣ್ಣ ಪ್ರಾಣಿ ಪ್ರೇಮಿ, ಅವರ ಬಳಿ ಈಗಾಗಲೇ ಮುದ್ದಾದ ನಾಯಿಗಳಿವೆ. ನಾಯಿಗಳನ್ನು ಬಿಟ್ಟು ರಶ್ಮಿಕಾ ಇರಲಾರರು. ಈಗ ತಮ್ಮ ಮನೆಗೆ ಹೊಸ ಅತಿಥಿಯೊಂದನ್ನು ಕರೆತಂದಿದ್ದಾರೆ ರಶ್ಮಿಕಾ. ಹಾಗೆಂದು ಮತ್ತೊಂದು ನಾಯಿಯನ್ನು ಕರೆದುಕೊಂಡು ಬಂದಿಲ್ಲ ಬದಲಿಗೆ ಬೆಕ್ಕೊಂದನ್ನು ತಂದಿದ್ದಾರೆ.

  ಬೆಕ್ಕು ದತ್ತು ಪಡೆದಿರುವ ರಶ್ಮಿಕಾ

  ಬೆಕ್ಕು ದತ್ತು ಪಡೆದಿರುವ ರಶ್ಮಿಕಾ

  ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಔರಾ ಹೆಸರಿನ ನಾಯಿಯೊಂದನ್ನು ಹೊಂದಿದ್ದಾರೆ. ಈಗ ಮನೆಗೆ ಬೆಕ್ಕೊಂದನ್ನು ತಂದಿದ್ದಾರೆ. ಈ ಬೆಕ್ಕನ್ನು ರಶ್ಮಿಕಾ ದತ್ತು ಪಡೆದಿದ್ದಾರೆ. ಬಿಳಿ ಬಣ್ಣದ ಬೆಕ್ಕಿಗೆ ಅದಕ್ಕೆ ಹೊಂದುವಂತೆ 'ಸ್ನೋ' ಎಂದು ಹೆಸರಿಟ್ಟಿದ್ದಾರೆ. ಸ್ನೋ ಜೊತೆಗೆ ಸೆಲ್ಫಿಯನ್ನು ಸಹ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ

  ವಿಡಿಯೋ ಹಂಚಿಕೊಂಡಿರುವ ರಶ್ಮಿಕಾ

  ಬೆಕ್ಕಿನ ಜೊತೆಗೆ ಚಿತ್ರ ಹಂಚಿಕೊಂಡಿರುವ ರಶ್ಮಿಕಾ, ತಮ್ಮ ಬೆಕ್ಕನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ''ಎಲ್ಲರೂ ಕೇಳಿ, ಸ್ನೋ ಅನ್ನು ನಿಮಗೆ ಪರಿಚಯಿಸುತ್ತಿದ್ದೇನೆ, ಇನ್ನು ಕೆಲವೇ ವರ್ಷಗಳಲ್ಲಿ ನನ್ನ ಮನೆ ಸಣ್ಣ ಕಾಡಾಗಿ ಪರಿವರ್ತನೆಗೊಂಡಲೂ ಅಚ್ಚರಿಯಿಲ್ಲ'' ಎಂದಿದ್ದಾರೆ. ಜೊತೆಗೆ ವಿಡಿಯೋ ಒಂದನ್ನು ರಶ್ಮಿಕಾ ಹಂಚಿಕೊಂಡಿದ್ದು, ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ, ಬೆಕ್ಕು ಸ್ನೋ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಅವರ ನಾಯಿ ಔರಾ ಸಹ ಕ್ಯಾಮೆರಾಗೆ ಫೋಸು ನೀಡಲು ಯತ್ನಿಸುತ್ತಿದೆ. ಈ ವಿಡಿಯೋ ಬಹಳ ಕ್ಯೂಟ್ ಆಗಿದೆ.

  ಶ್ವಾನ ಪ್ರೇಮಿ ರಶ್ಮಿಕಾ ಮಂದಣ್ಣ

  ಶ್ವಾನ ಪ್ರೇಮಿ ರಶ್ಮಿಕಾ ಮಂದಣ್ಣ

  ನಟಿ ರಶ್ಮಿಕಾ ಮಂದಣ್ಣ ಶ್ವಾನ ಪ್ರೇಮಿಯಾಗಿದ್ದು, ತಮ್ಮ ನಾಯಿ ಔರಾ ಅನ್ನು ಎಲ್ಲೆಡೆ ಕರೆದೊಯ್ಯುತ್ತಾರೆ. ಶೂಟಿಂಗ್‌ಗೆ ತೆರಳುವಾಗಲೂ ಔರಾ ಅನ್ನು ಕರೆದುಕೊಂಡು ಹೋಗುವ ಕಾರಣ ನಿರ್ಮಾಪಕರಿಗೆ ಹೆಚ್ಚುವರಿ ಹೊರೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನು ಅಲ್ಲಗಳೆದಿದ್ದ ರಶ್ಮಿಕಾ, ಇನ್ನು ಮುಂದೆ ನಾನು ಶ್ವಾನವನ್ನು ಶೂಟಿಂಗ್‌ಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದರು.

  ಹಿಂದಿಯಲ್ಲಿ ಬಹಳ ಬ್ಯುಸಿ ರಶ್ಮಿಕಾ

  ಹಿಂದಿಯಲ್ಲಿ ಬಹಳ ಬ್ಯುಸಿ ರಶ್ಮಿಕಾ

  ನಟಿ ರಶ್ಮಿಕಾ ಮಂದಣ್ಣ ಈಗ ಬಹಳ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಅವರು ನಟಿಸಿರುವ 'ಗುಡ್ ಬೈ' ಹಾಗೂ 'ಮಿಷನ್ ಮಜ್ನು' ಸಿನಿಮಾಗಳ ಬಿಡುಗಡೆ ಆಗಬೇಕಿದೆ. ಇದರ ನಡುವೆ ರಣ್ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಅದರ ಜೊತೆಗೆ ತಮಿಳಿನಲ್ಲಿ ನಟ ವಿಜಯ್‌ರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ 'ಪುಷ್ಪ 2' ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

  English summary
  Actress Rashmika Mandanna adopts a Cat named it Snow. She shared photo and video of her cat. She already had a dog named Aura.
  Wednesday, July 13, 2022, 8:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X