For Quick Alerts
  ALLOW NOTIFICATIONS  
  For Daily Alerts

  ಜನಪ್ರಿಯ ಹಾಸ್ಯನಟ ಬ್ರಹ್ಮಾನಂದಂ ಆಸ್ತಿ ಎಷ್ಟು ಗೊತ್ತೆ?

  |

  ಹಾಸ್ಯನಟ ಬ್ರಹ್ಮಾನಂದಂ ಹೆಸರು ಸಿನಿಪ್ರೇಮಿಗಳಿಗೆ ಚಿರಪರಿಚಿತ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿಯೂ ಒಂದು ಸಿನಿಮಾದಲ್ಲಿ ನಟಿಸಿರುವ ಬ್ರಹ್ಮಾನಂದಂ ಗೆ ತೆಲುಗಿನಲ್ಲಿ ದೊಡ್ಡ ತಾರಾಪಟ್ಟವಿದೆ.

  1000 ಚಿತ್ರಗಳಿಂದ ಗಳಿಸಿದ್ದು ಕೋಟಿ ಕೋಟಿ ಹಣ | Brahmanandam | Filmibeat Kannada

  ಬ್ರಹ್ಮಾನಂದಂ ಅದೆಷ್ಟು ಬ್ಯುಸಿ ನಟರೆಂದರೆ ಅತಿಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟರ ಪಟ್ಟಿಯಲ್ಲಿ ಮೊದಲಿನಲ್ಲಿದ್ದಾರೆ ಬ್ರಹ್ಮಾನಂದಂ. ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಶ್ವದಾಖಲೆ ಬ್ರಹ್ಮಾನಂದಂ ಹೆಸರಿನಲ್ಲಿದೆ.

  ಮೊದಲು ಬ್ರಹ್ಮಾನಂದ ಅವರ ಡೇಟ್ಸ್ ಪಡೆದು ಆ ನಂತರ ನಾಯಕ-ನಾಯಕಿಯರ ಡೇಟ್ಸ್ ಪಡೆವ ಸಂಪ್ರದಾಯ ತೀರಾ ಇತ್ತೀಚಿನವರೆಗೂ ಇತ್ತು. ಇತ್ತೀಚಿನ ಕೆಲ ವರ್ಷಗಳಿಂದಷ್ಟೆ ಬ್ರಹ್ಮಾನಂದಂ ಸಿನಿಮಾಗಳಲ್ಲಿ ನಟಿಸುವುದನ್ನು ತುಸು ಕಡಿಮೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಬ್ರಹ್ಮಾನಂದಂ ಎಷ್ಟು ಗಳಿಸಿರಬಹುದು. ಅವರ ಆಸ್ತಿ ಎಷ್ಟು ಗಳಿಸಿರಬಹುದು ಗೊತ್ತೆ?

  ಅತಿ ಹೆಚ್ಚು ಸಂಭಾವನೆ ಪಡೆವ ಹಾಸ್ಯನಟ ಬ್ರಹ್ಮಾನಂದಂ

  ಅತಿ ಹೆಚ್ಚು ಸಂಭಾವನೆ ಪಡೆವ ಹಾಸ್ಯನಟ ಬ್ರಹ್ಮಾನಂದಂ

  ಬ್ರಹ್ಮಾನಂದಂ, ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ಹಾಸ್ಯ ನಟ. ತಮಿಳಿನ ವಡಿವೇಲು ಅವರಿಗಿಂತಲೂ ಹೆಚ್ಚು ಸಂಭಾವನೆಯನ್ನು ಬ್ರಹ್ಮಾನಂದಂ ಪಡೆಯುತ್ತಾರೆ. ಬ್ರಹ್ಮಾನಂದಂ ಅವರ ಸಂಭಾವನೆ ತೆಲುಗಿನ ಹಲವು ನಾಯಕ ನಟಿಯರು ಹಾಗೂ ಕೆಲವು ನಾಯಕರಿಗಿಂತಲೂ ಹೆಚ್ಚಿಗೇ ಇದೆ. ದಿನ, ಗಂಟೆಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಬ್ರಹ್ಮಾನಂದಂ.

  ದುಪ್ಪಟ್ಟಾಗಿರುವ ಆಸ್ತಿ ಮೌಲ್ಯ

  ದುಪ್ಪಟ್ಟಾಗಿರುವ ಆಸ್ತಿ ಮೌಲ್ಯ

  2017 ರಲ್ಲಿ ಬ್ರಹ್ಮಾನಂದಂ ಅವರ ಆಸ್ತಿ ಮೌಲ್ಯ 380 ಕೋಟಿ ಇತ್ತು. ಇದರಲ್ಲಿ ಬ್ರಹ್ಮಾನಂದಂ ಅವರ ಬ್ಯಾಂಕ್ ಖಾತೆ ಲೆಕ್ಕಾಚಾರ ಇರಲಿಲ್ಲ. ಈಗ ಬ್ರಹ್ಮಾನಂದಂ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ ಎನ್ನಲಾಗುತ್ತಿದೆ. ತೆಲುಗು ಸಿನಿಮಾ ಉದ್ಯಮದಲ್ಲಿ ಹೆಚ್ಚು ಶ್ರೀಮಂತ ನಟರಲ್ಲಿ ಬ್ರಹ್ಮಾನಂದಂ ಸಹ ಒಬ್ಬರು.

  ಬ್ರಹ್ಮಾನಂದಂ ಸಂಭಾವನೆ ಎಷ್ಟು?

  ಬ್ರಹ್ಮಾನಂದಂ ಸಂಭಾವನೆ ಎಷ್ಟು?

  ಪ್ರಸ್ತುತ ಬ್ರಹ್ಮಾನಂದಂ ಸಿನಿಮಾವೊಂದಕ್ಕೆ ಒಂದರಿಂದ ಎರಡು ಕೋಟಿ ಸಂಭಾವನೆ ಪಡೆಯುತ್ತಾರಂತೆ. ಸಿನಿಮಾದಲ್ಲಿನ ಅವರ ಪಾತ್ರ ಅಥವಾ ಎಷ್ಟು ದಿನಗಳು ನಟಿಸಬೇಕಾಗಿರುತ್ತದೆ ಎಂಬುದರ ಆಧಾರದ ಮೇಲೆ ಸಂಭಾವನೆ ಬೇಡಿಕೆ ಇಡುತ್ತಾರೆ ಬ್ರಹ್ಮಾನಂದಂ. ತೆಲುಗಿನ ಕಾಸ್ಟ್ಲಿ ನಟರಲ್ಲಿ ಬ್ರಹ್ಮಾನಂದಂ ಸಹ ಒಬ್ಬರು.

  ಹಲವು ಐಶಾರಾಮಿ ಕಾರುಗಳು ಬ್ರಹ್ಮಾನಂದಂ ಬಳಿ ಇವೆ

  ಹಲವು ಐಶಾರಾಮಿ ಕಾರುಗಳು ಬ್ರಹ್ಮಾನಂದಂ ಬಳಿ ಇವೆ

  2017 ರಲ್ಲಿ ಬ್ರಹ್ಮಾನಂದಂ ಬಳಿ ಆಡಿ ಆರ್‌8, ಆಡಿ ಕ್ಯೂ 7, ಬೆಂಜ್ ಹಾಗೂ ಇನ್ನೂ ಹಲವು ಕಾರುಗಳಿದ್ದವು. ಹೈದರಾಬಾದ್‌ನ ದುಬಾರಿ ಏರಿಯಾ ಜೂಬ್ಲಿ ಹಿಲ್ಸ್‌ನಲ್ಲಿ ದೊಡ್ಡ ಬಂಗಲೆಯನ್ನು ಹೊಂದಿದ್ದಾರೆ ಬ್ರಹ್ಮಾನಂದಂ. ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಹಲವು ಕಡೆ ಕೃಷಿ ಭೂಮಿಯನ್ನು ಸಹ ಹೊಂದಿರುವ ಬ್ರಹ್ಮಾನಂದಂ, ಹೈದರಾಬಾದ್‌ ನಲ್ಲಿ ಕಾಂಪ್ಲೆಕ್ಸ್ ಹಾಗೂ ಇನ್ನೂ ಕೆಲವು ಮುಖ್ಯ ನಗರಗಳಲ್ಲಿ ರಿಯಲ್ ಎಸ್ಟೇಟ್‌ ಮೇಲೆ ಬಂಡವಾಳ ಹೂಡಿದ್ದಾರೆ.

  ಬ್ರಹ್ಮಾನಂದಂ ಹುಟ್ಟುಹಬ್ಬ

  ಬ್ರಹ್ಮಾನಂದಂ ಹುಟ್ಟುಹಬ್ಬ

  2008 ರಲ್ಲಿ ಬ್ರಹ್ಮಾನಂದಂ ನಟಿಸಿದ ಒಟ್ಟು ಸಿನಿಮಾಗಳ ಸಂಖ್ಯೆ 58! ಇತ್ತೀಚೆಗಷ್ಟೆ ಸಿನಿಮಾಗಳಿಂದ ತುಸು ವಿರಾಮ ಪಡೆದಿದ್ದಾರೆ ಈ ನಟ. ಅಂದಹಾಗೆ ಇಂದು ಬ್ರಹ್ಮಾನಂದಂ ಅವರ 65ನೇ ವರ್ಷದ ಹುಟ್ಟುಹಬ್ಬ. ತೆಲುಗು ಚಿತ್ರರಂಗದ ಹಿರಿಯ, ಕಿರಿಯ ನಟರು ಬ್ರಹ್ಮಾನಂದಂ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

  English summary
  Here is the net worth of Telugu actor Brahmanandam and his remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X