twitter
    For Quick Alerts
    ALLOW NOTIFICATIONS  
    For Daily Alerts

    ಜಪಾನ್‌ನಲ್ಲಿ 'RRR' ಶತದಿನೋತ್ಸವ: ಎಷ್ಟು ಥಿಯೇಟರ್‌? ಒಟ್ಟು ಕಲೆಕ್ಷನ್ ಎಷ್ಟು?

    |

    ನಮ್ಮ ಸಿನಿಮಾಗಳು ನಮ್ಮ ರಾಜ್ಯದಲ್ಲೇ 100 ದಿನ ಪ್ರದರ್ಶನ ಕಾಣುವುದೇ ಅಪರೂಪ ಎನ್ನುವಂತಾಗಿದೆ. ಅಂತಾದ್ರಲ್ಲಿ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್‌ನಲ್ಲಿ ಶತದಿನೋತ್ಸವ ಆಚರಿಸಿಕೊಂಡಿದೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಿರ್ದೇಶಕ ರಾಜಮೌಳಿ ಖುಷಿ ವ್ಯಕ್ತಪಡಿಸಿದ್ದಾರೆ.

    ಕಳೆದ ವರ್ಷ ಮಾರ್ಚ್ 25ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಿದ್ದ 'RRR' ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸೌಂಡ್ ಮಾಡಿತ್ತು. ಹಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಇತ್ತೀಚಿಗೆ ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿತ್ತು. ಇನ್ನು ಈ ಹಾಡು ಈ ಬಾರಿ ಆಸ್ಕರ್‌ ಪ್ರಶಸ್ತಿಗೂ ನಾಮಿನೇಟ್ ಆಗಿದೆ. ಇತ್ತೀಚೆಗೆ ಜೇಮ್ಸ್ ಕ್ಯಾಮರೂನ್ ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.

    ಮೌಳಿ ಹತ್ಯೆಗೆ ಸ್ಟಾರ್ ನಿರ್ದೇಶಕರ ಸ್ಕೆಚ್? ಕುಡಿದು ಗುಟ್ಟು ಬಿಚ್ಚಿಟ್ಟ ರಾಮ್‌ ಗೋಪಾಲ್ ವರ್ಮಾ!ಮೌಳಿ ಹತ್ಯೆಗೆ ಸ್ಟಾರ್ ನಿರ್ದೇಶಕರ ಸ್ಕೆಚ್? ಕುಡಿದು ಗುಟ್ಟು ಬಿಚ್ಚಿಟ್ಟ ರಾಮ್‌ ಗೋಪಾಲ್ ವರ್ಮಾ!

    ಜಪಾನ್‌ನಲ್ಲಿ ಭಾರತದ ಸಿನಿಮಾಗಳು ಅಷ್ಟಾಗಿ ರಿಲೀಸ್ ಆಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ಒಂದಷ್ಟು ಸಿನಿಮಾಗಳು ಜಪಾನ್ ಭಾಷೆಗೆ ಡಬ್ ಆಗಿ ಪ್ರೇಕ್ಷಕರನ್ನು ರಂಜಿಸಿದೆ. ಆ ಸಾಲಿನಲ್ಲಿ ಈಗ 'RRR' ಮೊದಲ ಸ್ಥಾನದಲ್ಲಿದೆ.

    ಜಪಾನ್‌ನಲ್ಲಿ 'RRR' ಶತದಿನೋತ್ಸವ

    ಹೌದು ಅಕ್ಟೋಬರ್ 21ಕ್ಕೆ ಜಪಾನ್‌ನಲ್ಲಿ ರಿಲೀಸ್ ಆಗಿದ್ದ 'RRR' ಸಿನಿಮಾ ಇದೀಗ 100 ದಿನ ಪೂರೈಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೌಳಿ "ಆ ದಿನಗಳಲ್ಲಿ, ಒಂದು ಸಿನಿಮಾ 100 ದಿನ, 175 ದಿನಗಳು ಓಡುವುದು ದೊಡ್ಡ ವಿಷಯವಾಗಿತ್ತು. ಕಾಲಾನಂತರದಲ್ಲಿ ವ್ಯಾಪಾರದ ವಿನ್ಯಾಸವೇ ಬದಲಾಯಿತು. ಆ ಸವಿ ನೆನಪುಗಳು ಮಾಯವಾಗಿತ್ತು. ಆದರೆ ಜಪಾನಿನ ಸಿನಿ ಅಭಿಮಾನಿಗಳು ನಮಗೆ ಆ ಸಂತೋಷವನ್ನು ಮರುಕಳಿಸುವಂತೆ ಮಾಡುತ್ತಿದ್ದಾರೆ. ಲವ್ ಯು ಜಪಾನ್" ಎಂದು ಬರೆದುಕೊಂಡಿದ್ದಾರೆ.

    42 ಥಿಯೇಟರ್‌ನಲ್ಲಿ 100 ದಿನ

    42 ಥಿಯೇಟರ್‌ನಲ್ಲಿ 100 ದಿನ

    ನೇರವಾಗಿ ಒಟ್ಟು 42 ಥಿಯೇಟರ್‌ಗಳಲ್ಲಿ ಸಿನಿಮಾ 100 ದಿನ ಪ್ರದರ್ಶನ ಕಂಡಿದೆ. ಶಿಫ್ಟ್‌ಗಳಲ್ಲಿ ಬದಲಾಗಿ 114 ಥಿಯೇಟರ್‌ಗಳಲ್ಲಿ ಸಿನಿಮಾ 100 ದಿನ ಪೂರೈಸಿದೆ. ಒಟ್ನಲ್ಲಿ ಜಪಾನ್‌ನಲ್ಲಿ 'RRR' ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. 3 ತಿಂಗಳ ಹಿಂದೆ ಮೌಳಿ, ಚರಣ್, ತಾರಕ್ ಜಪಾನ್‌ಗೆ ಹೋಗಿ ಪ್ರಚಾರ ಮಾಡಿ ಬಂದಿದ್ದರು. ಚಿತ್ರದಕ್ಕೆ ಒಳ್ಳೆ ಓಪನಿಂಗ್ ಏನು ಸಿಕ್ಕರಲಿಲ್ಲ. ಆದರೆ ನಿಧಾನವಾಗಿ ಟೇಕಾಫ್ ಆಗಿತ್ತು. ಸಿನಿಮಾ ಅಂದಾಜು 45 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.

    'ಮುತ್ತು' ದಾಖಲೆ ಮುರಿದ 'RRR'

    'ಮುತ್ತು' ದಾಖಲೆ ಮುರಿದ 'RRR'

    ಇಷ್ಟು ವರ್ಷ ಜಪಾನ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಎನ್ನುವ ಹೆಗ್ಗಳಿಕೆ ರಜನಿಕಾಂತ್ ನಟನೆಯ 'ಮುತ್ತು' ಚಿತ್ರದಾಗಿತ್ತು. 24 ವರ್ಷಗಳ ನಂತರ ಆ ದಾಖಲೆಯನ್ನು ಮುರಿದು 'RRR' ಮೊದಲ ಸ್ಥಾನಕ್ಕೇರಿದೆ. ಇನ್ನುಳಿದಂತೆ 'ಬಾಹುಬಲಿ'-2, 'ತ್ರೀ ಈಡಿಯಟ್ಸ್', 'ಇಂಗ್ಲೀಷ್ ವಿಂಗ್ಲೀಷ್' ಸಿನಿಮಾಗಳು ಕೂಡ ಭರ್ಜರಿ ಕಲೆಕ್ಷನ್ ಮಾಡಿವೆ. ಕೋಟಿ ಕೋಟಿ ಕೊಳ್ಳೆ ಹೊಡೆದಿವೆ.

    ರಾಮ್‌-ಭೀಮ್ ಬ್ರೋಮ್ಯಾನ್ಸ್‌

    ರಾಮ್‌-ಭೀಮ್ ಬ್ರೋಮ್ಯಾನ್ಸ್‌

    ಅಲ್ಲೂರಿ ಸೀತಾ ರಾಮರಾಜು, ಕೋಮರಂ ಭೀಮ್ ಎನ್ನುವ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಒಂದು ಕಾಲ್ಪನಿಕ ಕಥೆಯನ್ನು ಕಟ್ಟಿ ನಿರ್ದೇಶಕ ರಾಜಮೌಳಿ ಗೆದ್ದಿದ್ದರು. ರಾಮ್‌- ಭೀಮ್ ಪಾತ್ರದಲ್ಲಿ ಚರಣ್- ತಾರಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ರಾಮ್‌- ಭೀಮ್ ಬ್ರೊಮ್ಯಾನ್ಸ್ ಜಪಾನ್ ಪ್ರೇಕ್ಷಕರಿಗೂ ಇಷ್ಟವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕ್ಕೆ ಬೆಂಬಲ ವ್ಯಕ್ತವಾಗ್ತಿದೆ. ಡಿವಿವಿ ದಾನಯ್ಯ ನಿರ್ಮಾಣದ ಈ ಚಿತ್ರಕ್ಕೆ ಎಂ. ಎಂ ಕೀರವಾಣಿ ಸಂಗೀತವಿದೆ. ಅಜಯ್ ದೇವಗನ್, ಆಲಿಯಾ ಭಟ್ ಕೂಡ ಚಿತ್ರದ ತಾರಾಗಣದಲ್ಲಿದ್ದರು.

    English summary
    RRR Movie completes 100 Days in Japan. First Indian Movie To Run 100 Days In 42 Direct Centers In Japan, Total 114 Centers With Shifts. know more.
    Saturday, January 28, 2023, 11:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X