For Quick Alerts
  ALLOW NOTIFICATIONS  
  For Daily Alerts

  RRR ಸಿನಿಮಾಕ್ಕೆ ವಿದೇಶದಲ್ಲಿ ಭಾರಿ ಭೇಡಿಕೆ: ಭಾರಿ ಮೊತ್ತಕ್ಕೆ ಸೇಲ್ ಆದ ವಿದೇಶ ಪ್ರದರ್ಶನ ಹಕ್ಕು

  |

  ಆರ್‌ಆರ್‌ಆರ್ ಸಿನಿಮಾದ ಬಿಡುಗಡೆಗೆ ಭಾರತದ ಸಿನಿಪ್ರೇಮಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಅಷ್ಟೇ ನಿರೀಕ್ಷೆ ವಿದೇಶದ ಸಿನಿ ಪ್ರೇಮಿಗಳಿಗೂ ಇದೆ.

  ವಿದೇಶದಲ್ಲಿ ಹೆಚ್ಚಾಯ್ತು RRR ಸಿನಿಮಾಗೆ ಬೇಡಿಕೆ | Filmibeat Kannada

  ಆರ್‌ಆರ್‌ಆರ್ ಸಿನಿಮಾಕ್ಕೆ ವಿದೇಶದಿಂದ ಭಾರಿ ಬೇಡಿಕೆ ಬಂದಿದ್ದು. ವಿದೇಶದಲ್ಲಿ ಸಿನಿಮಾ ಪ್ರದರ್ಶಿಸುವ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

  ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಹಲವು ರಾಷ್ಟ್ರಗಳಲ್ಲಿ ಭಾರಿ ಉತ್ತಮ ಪ್ರದರ್ಶನ ಕಂಡಿತ್ತು. ಅಮೆರಿಕ, ಚೀನಾ, ಜರ್ಮನಿ, ಫ್ರಾನ್ಸ್, ಬಾಂಗ್ಲಾದೇಶ, ಆಸ್ಟ್ರೇಲಿಯಾ, ದುಬೈ ಇನ್ನೂ ಹಲವು ದೇಶಗಳಲ್ಲಿ ಬಾಹುಬಲಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಹಾಗಾಗಿ ರಾಜಮೌಳಿ ನಿರ್ದೇಶಿಸುತ್ತಿರುವ, ಜೂ.ಎನ್‌ಟಿಆರ್-ರಾಮ್ ಚರಣ್ ತೇಜ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾಕ್ಕೂ ಭಾರಿ ಬೇಡಿಕೆ ಬಂದಿದೆ.

  ದುಬೈ ಪ್ರದರ್ಶನ ಹಕ್ಕು ಕೋಟ್ಯಂತರ ಹಣಕ್ಕೆ ಮಾರಾಟ

  ದುಬೈ ಪ್ರದರ್ಶನ ಹಕ್ಕು ಕೋಟ್ಯಂತರ ಹಣಕ್ಕೆ ಮಾರಾಟ

  ತೆಲುಗು ಮಾಧ್ಯಮಗಳ ವರದಿಯಂತೆ ಆರ್‌ಆರ್‌ಆರ್ ಸಿನಿಮಾದ ದುಬೈ ಪ್ರದರ್ಶನ ಹಕ್ಕುಗಳು ಬರೋಬ್ಬರಿ 70 ಕೋಟಿ ರೂಪಾಯಿಗೆ ಮಾರಾಟವಾಗಿದೆಯಂತೆ. ಇದು ಕೇವಲ ದುಬೈ ಒಂದರಲ್ಲಿ ಸಿನಿಮಾ ಪ್ರದರ್ಶಿಸಲು ಮಾರಾಟವಾದ ಹಕ್ಕಿನ ಮೊತ್ತ.

  ಫಾರ್ಸ್ ಫಿಲಮ್ಸ್ ಸಂಸ್ಥೆಯಿಂದ ಹಕ್ಕು ಖರೀದಿ

  ಫಾರ್ಸ್ ಫಿಲಮ್ಸ್ ಸಂಸ್ಥೆಯಿಂದ ಹಕ್ಕು ಖರೀದಿ

  ದುಬೈ ನಲ್ಲಿ ಭಾರತೀಯ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಭಾರತದ ಹಲವು ಭಾಷೆಯ ಸಿನಿಮಾಗಳು ದುಬೈ ನಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತವೆ. ಬಾಹುಬಲಿ ಸಹ ಅಲ್ಲಿ ಚೆನ್ನಾಗಿ ಹಣ ಗಳಿಸಿತ್ತು. ಹಾಗಾಗಿ ಫಾರ್ಸ್ ಫಿಲಮ್ಸ್ ಸಂಸ್ಥೆಯು ಆರ್‌ಆರ್‌ಆರ್ ಸಿನಿಮಾವನ್ನು ದುಬೈನಲ್ಲಿ ಬಿಡುಗಡೆ ಮಾಡಲು 70 ಕೋಟಿ ತೆತ್ತು ಹಕ್ಕು ಖರೀದಿಸಿದೆ.

  ಅಕ್ಟೋಬರ್ 13 ಕ್ಕೆ ಸಿನಿಮಾ ಬಿಡುಗಡೆ

  ಅಕ್ಟೋಬರ್ 13 ಕ್ಕೆ ಸಿನಿಮಾ ಬಿಡುಗಡೆ

  ಆರ್‌ಆರ್ಆರ್ ಸಿನಿಮಾವು ಚಿತ್ರೀಕರಣ ಭಾಗವನ್ನು ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆರ್‌ಆರ್‌ಆರ್ ಸಿನಿಮಾವು ಅಕ್ಟೋಬರ್ 13 ರಂದು ತೆರೆಗೆ ಬರುವುದಾಗಿ ನಿರ್ದೇಶಕ ರಾಜಮೌಳಿ ಈಗಾಗಲೇ ಘೋಷಿಸಿದ್ದಾರೆ. ಸಿನಿಮಾದ ಪ್ರದರ್ಶನ ಹಕ್ಕು ಖರೀದಿಗೆ ವಿತರಕರು ಮುಗಿಬಿದಿದ್ದಾರೆ.

  ಕೋಮರಂ ಭೀಮ್-ಅಲ್ಲೂರಿ ಸೀತಾರಾಮ ರಾಜು ಕತೆ

  ಕೋಮರಂ ಭೀಮ್-ಅಲ್ಲೂರಿ ಸೀತಾರಾಮ ರಾಜು ಕತೆ

  ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜೂ.ಎನ್‌ಟಿಆರ್-ರಾಮ್ ಚರಣ್ ತೇಜ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್ ಇದ್ದಾರೆ. ನಟ ಅಜಯ್ ದೇವಗನ್ ಸಹ ಇದ್ದಾರೆ. ಸಿನಿಮಾವು ತೆಲುಗಿನ ಕ್ರಾಂತಿಕಾರಿಗಳಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಕತೆಯನ್ನು ಆಧರಿಸಿದೆ.

  English summary
  RRR movie's Dubai release rights sold for 70 crore rs to Fars Films distrbution company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X