ಹತ್ತು ಭಾಷೆಯಲ್ಲಿ RRR: ಕೆಲವೇ ದಿನದಲ್ಲಿ ಟೀಸರ್

ರಾಜಮೌಳಿ ನಿರ್ದೇಶಿಸಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ನಟಿಸುತ್ತಿರುವ ಆರ್‌ಆರ್‌ಆರ್‌ ಸಿನಿಮಾ ಭಾರತ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಒಂದೇ ಬಾರಿಗೆ ಹತ್ತು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ!

ಆಲಿಯಾ ಭಟ್, ಅಜಯ್ ದೇವಗನ್ ಸೇರಿ ಬಹುತಾರಾಗಣದ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್, ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದ್ದು ಸಖತ್ ವೈರಲ್ ಆಗಿವೆ. ಇದೀಗ ಮತ್ತೊಂದು ಮೆಗಾ ಟೀಸರ್ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

ಈವರೆಗೂ ಜೂ.ಎನ್‌ಟಿಆರ್‌ರ ಕೋಮರಂ ಭೀಮ್ ಹಾಗೂ ರಾಮ್ ಚರಣ್ ಅವರ ಅಲ್ಲೂರಿ ಸೀತಾರಾಮ ರಾಜು ಪಾತ್ರಗಳನ್ನು ಪರಿಚಯಿಸುವ ಕಿರು ಟೀಸರ್‌ಗಳಷ್ಟೆ ಬಿಡುಗಡೆ ಆಗಿದ್ದವು. ಆದರೆ ಈಗ ಒಟ್ಟಾರೆ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ರಾಮ್ ಚರಣ್ ಹುಟ್ಟುಹಬ್ಬವು ಮಾರ್ಚ್ 27ಕ್ಕೆ ಇದ್ದು ಅದೇ ದಿನ ಸಿನಿಮಾದ ಟೀಸರ್ ಬಿಡುಗಡೆ ಆಗುವ ಸಂಭವ ಇದೆ.

ಒಟ್ಟಿಗೆ ಹತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಆರ್‌ಆರ್‌ಆರ್

ಒಟ್ಟಿಗೆ ಹತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಆರ್‌ಆರ್‌ಆರ್

ಆರ್‌ಆರ್‌ಆರ್ ಸಿನಿಮಾವು ಒಟ್ಟಿಗೆ ಹತ್ತು ಭಾಷೆಗಳಲ್ಲಿ ಬಿಡುಗಡೆ ಆಗಲಿರುವುದು ಹೊಸ ಸುದ್ದಿಯೇನಲ್ಲ. ಆರ್‌ಆರ್‌ಆರ್‌ ಸಿನಿಮಾದ ಮೊದಲ ಸುದ್ದಿಗೋಷ್ಠಿಯಲ್ಲಿಯೇ ರಾಜಮೌಳಿ ಅವರು ಈ ವಿಷಯವನ್ನು ಹೇಳಿದ್ದರು.

'ಬಾಹುಬಲಿ' ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿತ್ತು

'ಬಾಹುಬಲಿ' ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿತ್ತು

ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾವು ಭಾರತದ ಹಲವು ಭಾಷೆಗಳಿಗೆ ಡಬ್ ಆಗಿತ್ತು, ಮಾತ್ರವಲ್ಲದೆ ವಿದೇಶದ ಕೆಲವಾರು ಭಾಷೆಗಳಿಗೂ ಡಬ್ ಆಗಿ ಪ್ರಸಾರವಾಗಿತ್ತು. ಹಾಗಾಗಿ ಈ ಬಾರಿ ಆರ್‌ಆರ್‌ಆರ್‌ ಸಿನಿಮಾವನ್ನು ಹೆಚ್ಚಿನ ಭಾಷೆಗಳಲ್ಲಿ ಡಬ್ ಮಾಡಿಯೇ ಬಿಡುಗಡೆ ಮಾಡುವ ಯೋಚನೆ ಹಾಕಿದ್ದಾರೆ ರಾಜಮೌಳಿ.

ಚಿತ್ರೀಕರಣದಲ್ಲಿ ಸಾಕಷ್ಟು ಬದಲಾವಣೆ

ಚಿತ್ರೀಕರಣದಲ್ಲಿ ಸಾಕಷ್ಟು ಬದಲಾವಣೆ

ಕೊರೊನಾ ಕಾರಣಕ್ಕೆ ಚಿತ್ರೀಕರಣಕ್ಕೆ ಅಲ್ಪವಿರಾಮ ಉಂಟಾಗಿತ್ತು. ಆದರೆ ಇದೀಗ ಮತ್ತೆ ಭರದಿಂದ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣದ ಶೆಡ್ಯೂಲ್‌ಗಳಲ್ಲಿ ಬದಲಾವಣೆ ಸಹ ಮಾಡಿಕೊಳ್ಳಲಾಗಿದೆ. ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಅಜಯ್ ದೇವಗನ್, ಆಲಿಯಾ ಭಟ್ ಅವರು ಪಾತ್ರದ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ಮುಗಿದಿದ್ದು, ಈ ಇಬ್ಬರೂ ಬಾಲಿವುಡ್ಡಿಗರು ಆರ್‌ಆರ್‌ಆರ್‌ ಚಿತ್ರೀಕರಣ ಸೆಟ್‌ಗೆ ಮರಳಲಿದ್ದಾರೆ.

Recommended Video

ಚಾಂಪಿಯನ್ ಸಿನಿಮಾದ ಹಾಡಿನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ | Filmibeat Kannada
ಅಕ್ಟೋಬರ್ 13 ಕ್ಕೆ ಸಿನಿಮಾ ತೆರೆಗೆ

ಅಕ್ಟೋಬರ್ 13 ಕ್ಕೆ ಸಿನಿಮಾ ತೆರೆಗೆ

ಆರ್‌ಆರ್‌ಆರ್ ಸಿನಿಮಾವು ಅಕ್ಟೋಬರ್ 13 ರಂದು ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಭೋಜ್‌ಪುರಿ, ಸಿಂಹಳಿ ಸೇರಿದಂತೆ ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ 'ಆರ್‌ಆರ್‌ಆರ್‌' ಬಿಡುಗಡೆ ಆಗಲಿದೆ.

More from Filmibeat

English summary
RRR movie is set to release in 10 different languages. Movie teaser will be released shortly by Direcror Rajamouli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X