For Quick Alerts
  ALLOW NOTIFICATIONS  
  For Daily Alerts

  ಆಪ್ತ ಸ್ನೇಹಿತೆ ಜೊತೆ 'ಆರ್‌ಎಕ್ಸ್‌100' ನಟ ಕಾರ್ತಿಕೇಯ ನಿಶ್ಚಿತಾರ್ಥ

  |

  ತೆಲುಗು ಯುವ ನಟ ಕಾರ್ತಿಕೇಯ ಗುಮ್ಮಕೊಂಡಾ ಬಹುಕಾಲದ ಸ್ನೇಹಿತೆ ಲೋಹಿತಾ ರೆಡ್ಡಿ ಜೊತೆ ಇಂದು (ಆಗಸ್ಟ್ 23) ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಸುಮಾರು 10 ವರ್ಷದಿಂದ ಸ್ನೇಹಿತರಾಗಿದ್ದ ಕಾರ್ತಿಕೇಯ ಮತ್ತು ಲೋಹಿತಾ ಈಗ ಒಟ್ಟಿಗೆ ಹೊಸ ಜೀವನ ಆರಂಭಿಸಲು ತೀರ್ಮಾನಿಸಿದ್ದು, ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ.

  ಹೈದರಾಬಾದ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಕಾರ್ತಿಕೇಯ ಮತ್ತು ಲೋಹಿತಾ ನಿಶ್ಚಿತಾರ್ಥ ಜರುಗಿದೆ. ಎಂಗೇಜ್‌ಮೆಂಟ್ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ, ಸಂತಸ ವ್ಯಕ್ತಪಡಿಸಿದ್ದಾರೆ.

  ವಿಘ್ನೇಶ್ ಜೊತೆಗಿನ ನಿಶ್ಚಿತಾರ್ಥದ ಗುಟ್ಟು ರಟ್ಟು ಮಾಡಿದ ನಯನತಾರ ವಿಘ್ನೇಶ್ ಜೊತೆಗಿನ ನಿಶ್ಚಿತಾರ್ಥದ ಗುಟ್ಟು ರಟ್ಟು ಮಾಡಿದ ನಯನತಾರ

  ''ಬಹುಕಾಲದ ಗೆಳತಿ ಈಗ ನನ್ನ ಬಾಳ ಸಂಗಾತಿಯಾಗುತ್ತಿದ್ದಾರೆ. 2010ರಲ್ಲಿ ವಾರಂಗಲ್‌ನ ಕಾಲೇಜಿನಲ್ಲಿ ನಾನು ಲೋಹಿತರನ್ನು ಮೊದಲ ಸಲ ಭೇಟಿ ಮಾಡಿದೆ. ದಶಕದ ಪರಿಚಯ, ಈ ದಶಕದ ಜರ್ನಿ ಮತ್ತಷ್ಟು ದಶಕಗಳು ಮುಂದುವರಿಯಲಿ'' ಎಂದು ಕಾರ್ತಿಕೇಯ ಪೋಸ್ಟ್ ಹಾಕಿದ್ದಾರೆ.

  2017ರಲ್ಲಿ 'ಪ್ರೇಮತೋ ಮೀ ಕಾರ್ತಿಕ್' ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಕಾರ್ತಿಕೇಯಗೆ ದೊಡ್ಡ ಬ್ರೇಕ್ ಕೊಟ್ಟಿದ್ದು 'ಆರ್‌ಎಕ್ಸ್ 100' ಸಿನಿಮಾ. ಅದಾದ ಮೇಲೆ ಹಿಪ್ಪಿ, ಗುಣ369, ಗ್ಯಾಂಗ್‌ಲೀಡರ್, 90ಎಂಎಲ್, ಚಾವು ಕಾಬುರು ಚಾಲಾಗ ಅಂತಹ ಸಿನಿಮಾದಲ್ಲಿ ನಟಿಸಿದ್ದಾರೆ.

  ಸದ್ಯ ಅಜಿತ್ ಕುಮಾರ್ ನಟಿಸಿರುವ 'ವಾಲಿಮೈ' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು, ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದಾರೆ. ಇದರ ಜೊತೆಗೆ 'ರಾಜಾವಿಕ್ರಮ' ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇನ್ನು ಮದುವೆ ಯಾವಾಗ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

  English summary
  Thala Ajith Kumar's Valimai antagonist Karthikeya got engaged with lohitha reddy in a closed ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X