Don't Miss!
- Sports
ಕಾಮನ್ವೆಲ್ತ್ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?
- News
ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು
- Automobiles
ಇದೇ ತಿಂಗಳು 11ರಂದು ಅನಾವರಣಗೊಳ್ಳಲಿದೆ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Technology
ಒನ್ಪ್ಲಸ್ ಏಸ್ ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ! ಫೀಚರ್ಸ್ ಹೇಗಿದೆ?
- Lifestyle
Mangal Gochar 2022: ಆ. 10ಕ್ಕೆ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ದ್ವಾದಶ ಮೇಲೆ ಬೀರಲಿರುವ ಪ್ರಭಾವವೇನು?
- Finance
ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
- Travel
ಇತಿಹಾಸ ಮತ್ತು ಪ್ರಕೃತಿಯ ಮಿಶ್ರಣ ನಂದಿ ಬೆಟ್ಟಗಳು
Samantha: ಮುಂಬೈನಲ್ಲಿ ಐಶಾರಾಮಿ ಮನೆ ಖರೀದಿಸಿದ ಸಮಂತಾ, ಮನೆಯಲ್ಲ ಇದು ಸ್ವರ್ಗ!
ಕಳೆದ ವರ್ಷ ಅಕ್ಟೋಬರ್ ನಲ್ಲಿ ಟಾಲಿವುಡ್‌ನ ತಾರಾ ಜೋಡಿ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ವಿಚಾರವನ್ನು ತಿಳಿಸಿ ಸ್ಯಾಮ್-ಚೈತನ್ಯ ಸೈಲೆಂಟ್ ಆಗಿದ್ದರೂ ಕೂಡ ಆಭಿಮಾನಿಗಳು ಮಾತ್ರ ಇನ್ನು ಈ ಸುದ್ದಿಯ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ.
ವಿಚ್ಛೇದನ ಪಡೆಯಲು ಮುಂದಾದ ಬಳಿಕವೂ ಮತ್ತೆ ಇಬ್ಬರೂ ಒಂದಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮತ್ತೆ ಈ ಜೋಡಿ ಮೊದಲಿನಂತೆ ಆಗುತ್ತೆ ಅನ್ನುವ ಮಾತುಗಳು ಇವೆ. ಇವರಿಬ್ಬರೂ ಡಿವೋರ್ಸ್ ನೀಡುವ ನಿರ್ಧಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.
Tollywood
Heroes
Remuneration
:
ಪ್ರಭಾಸ್‌ಗೆ
100
ಕೋಟಿ,
ಚಿರಂಜೀವಿ,
ಮಹೇಶ್
ಬಾಬು
ಸಂಭಾವನೆ
ಎಷ್ಟು?
ಇದಾದ ಬಳಿಕ ತಾವು ಒಪ್ಪಿಕೊಂಡ ಸಿನಿಮಾದಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನಟಿ ಸಮಂತಾ ವಿಚ್ಛೇದನದ ಬಳಿಕ ಪ್ರತ್ಯೇಕವಾಗಿರಲು ಮನೆಯನ್ನು ಹುಡುಕಾಡಿದ್ದರು. ಸಮಂತಾ ಅಂದುಕೊಂಡಂತೆ ಹೊಸ ಮನೆಯನ್ನು ಫೈನಲ್ ಮಾಡಿದ್ದಾರಂತೆ.

ಒಂದಲ್ಲ ಎರಡೂ ಮನೆ ಫೈನಲ್ ಮಾಡಿದ ಸಮಂತಾ
ಈ ಹಿಂದೆಯೇ ಸಮಂತಾ ಮುಂಬೈನಲ್ಲಿ ಮನೆ ಹುಡುಕಾಟದಲ್ಲಿ ಇದ್ದಾರೆ ಎನ್ನುವ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಆದರೆ ಯಾವುದೇ ಮನೆಯನ್ನು ಸಮಂತಾ ಫೈನಲ್ ಮಾಡಿರಲಿಲ್ಲಾ. ಆದರೆ ಈಗ ಸಮಂತಾ ಮುಂಬೈನಲ್ಲಿ ಒಂದಲ್ಲ ಎರಡೂ ಮನೆಯನ್ನು ಫೈನಲ್ ಮಾಡಿದ್ದಾರೆ ಅನ್ನುವ ಸುದ್ದಿ ಕೇಳಿ ಬರುತ್ತಿದೆ. ಸಮಂತಾ ಸ್ವತಂತ್ರ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಹೈದರಾಬಾದ್‌ನಲ್ಲಿ ಇರೋದಕ್ಕೆ ಮುಂಚಿನಿಂದಲೂ ಸಮಂತಾ ತುಂಬ ಇಷ್ಟಪಡುತ್ತಿದ್ದರು. ಆದರೆ, ವಿಚ್ಛೇದನದ ಬಳಿಕ ಒಂದಷ್ಟು ವಿಚಾರಗಳಿಗೆ ಹೈದರಾಬಾದ್ ಬಿಟ್ಟು ಮುಂಬೈನಲ್ಲಿ ಸೆಟಲ್ ಆಗಲು ಸ್ಯಾಮ್ ಮುಂದಾಗಿದ್ದಾರೆ.

ಎರಡೂ ಕೂಡ ಬೀಚ್ ಸೈಡ್ ವೀವ್
ಮುಂಬೈನಲ್ಲಿ ಸಮಂತಾ ಎರಡೆರಡು ಫ್ಲ್ಯಾಟ್ ಅನ್ನು ಫೈನಲ್ ಮಾಡಿದ್ದು, ಇದರಲ್ಲಿ ಒಂದನ್ನು ಫೈನಲ್ ಮಾಡಿಲಿದ್ದಾರಂತೆ. ಈ ಎರಡೂ ಪ್ಲ್ಯಾಟ್‌ನ ಬೆಲೆ 3ಕೋಟಿ ರೂಪಾಯಿ ಬೆಲೆಯದ್ದಾಗಿದ್ದು, ಎರಡರಲ್ಲೂ ಕೂಡ ಬೀಚ್ ಸೈಡ್ ವೀವ್ ಇದೆ. ವಿಶಾಲವಾದ ಗಾಳಿ, ಬೆಳಕು, ಐಶಾರಾಮಿ ಇಂಟಿರಿಯರ್ ಹೊಂದಿದ್ದು, ಒಂದು ಮನೆ ನಾಲ್ಕು ಬೆಡ್‌ರೂಮ್, ಮತ್ತೊಂದು ಮನೆ ಐದು ಬೆಡ್ ರೂಮ್ ಒಳಗೊಂಡಿದೆ ಎಂಬ ಬಗ್ಗೆ ಮಾಹಿತಿ ದೊರಕಿದೆ. ಮುಂಬೈನ ಜುಹೂ ಮತ್ತು ಬಾಂದ್ರದಲ್ಲಿ ಈ ಮನೆಗಳಿದ್ದು, ಒಂದು ಮನೆಯನ್ನು ಸಮಂತಾ ಆದಷ್ಟು ಬೇಗ ಫೈನಲ್ ಮಾಡಲಿದ್ದಾರೆ. ಶೀಘ್ರದಲ್ಲಿಯೇ ಆ ಮನೆ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ.
ಮುಂಬೈನಲ್ಲಿ
'RRR'
ಟಿಕೆಟ್
ಸಿಗಲಿಲ್ಲ,
ಬೆಂಗಳೂರಲ್ಲಿ
ನೋಡುವೆ
ಎಂದ
ನಟಿ
ಶ್ರಿಯಾ

ಮುಂಬೈನಲ್ಲಿ ಸೆಟಲ್ ಆಗಲು ಸಮಂತಾ ತೀರ್ಮಾನ
ಇನ್ನು ಸಮಂತಾಗೆ ಬಾಲಿವುಡ್ ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿದ್ದು, ಮುಂಬೈನಲ್ಲಿ ಸೆಟಲ್ ಆಗಲು ಸಮಂತಾ ತೀರ್ಮಾನಿಸಿದ್ದಾರೆ. ' ಫ್ಯಾಮಿಲಿ ಮ್ಯಾನ್ ಸೀರಿಸ್ 2' ರಿಲೀಸ್ ನಂತರ ಬಾಲಿವುಡ್‌ನಿಂದಲೂ ಸಮಂತಾಗೆ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ನಟಿಸೋಕೆ ಅವಕಾಶಗಳು ಹೆಚ್ಚಾಗಿದೆ. ಒಂದಷ್ಟು ಹಿಂದಿ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿರುವ ಸ್ಯಾಮ್ ಮುಂಬೈನಲ್ಲಿ ಸಾಕಷ್ಟು ಸಮಯ ಕಳೆಯ ಬೇಕಿದೆ. ಹೀಗಾಗಿ ಹೈದರಾಬಾದ್ ಬಿಟ್ಟು ಮುಂಬೈನಲ್ಲಿ ಸೆಟಲ್ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಿನಿಮಾಗಳತ್ತ ಹೆಚ್ಚು ಗಮನ ಕೊಡುತ್ತಿರುವ ಸಮಂತಾ
ಈ ಹಿಂದೆ ಮುಂಬೈನ ಪ್ರಮುಖ ನಗರಗಳಲ್ಲಿ ಮನೆ ನೋಡಿದ್ದ ಸ್ಯಾಮ್, ಒಳ್ಳೆಯ ಮನೆಗಳು ಇದ್ದರೆ ತಿಳಿಸಿ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಇನ್ನು ನಾಗಚೈತನ್ಯ ಜೊತೆ ಡಿವೋರ್ಸ್ ಬಳಿಕ ಸಿನಿಮಾಗಳತ್ತ ಹೆಚ್ಚು ಗಮನ ಕೊಡುತ್ತಿರುವ ಸಮಂತಾ, ಇತ್ತೀಚೆಗೆ ಸಮಂತಾ ಐಟಂ ಸಾಂಗಿಗೆ ಹೆಚ್ಚಿನ ಸಂಭಾವನೆ ಪಡೆದ ವಿಚಾರಕ್ಕೂ ಸುದ್ದಿ ಯಾಗಿದ್ದರು. ಹಾಗೇ ಸಾಕಷ್ಟು ಹಾಟ್ ಫೋಟೊಶೂಟ್‌ಗಳನ್ನು ಸಮಂತಾ ಮಾಡಿಸುತ್ತಿದ್ದಾರೆ. ಈ ವಿಚಾರಕ್ಕೂ ಹಲವಾರು ಬಾರಿ ಸುದ್ದಿಯಾಗಿದ್ದಾರೆ. ಇನ್ನೂ ಹೆಸರಿಡದ ಸಿನಿಮಾಗೆ 3.50 ಕೋಟಿ ರೂಪಾಯಿ ಸಂಭಾವನೆ ಪಡೆದಿರೊ ಸುದ್ದಿ ಬಾರೀ ಸುದ್ದಿಯಾಗ್ತಿದೆ. ಇದನ್ನು ಹೊರತುಪಡಿಸಿ ತೆಲುಗಿನ 'ಶಾಕುಂತಲಂ' ಸಿನಿಮಾ ಕಂಪ್ಲೀಟ್ ಮಾಡಿದ್ದು, ತಮಿಳಿನಲ್ಲಿ ನಯನತಾರಾ, ವಿಜಯ್ ಸೇತುಪತಿ ಸಿನಿಮಾ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ.


ಅದೇ ಚಾರ್ಮ್ ಉಳಿಸಿಕೊಂಡು ಮುನ್ನುಗ್ತಿರೊ ಸ್ಯಾಮ್
ಒಟ್ನಲ್ಲಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಹಿಟ್ ಆದ ಬಳಿಕಸ್ವಲ್ಪ ವಿರಾಮ ಪಡೆದಿದ್ದ ಸಮಂತಾ ಇದೀಗ ಫುಲ್ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಮದುವೆ ಆದರೆ ಆಫರ್‌ಗಳು ಕಮ್ಮಿ ಆಗುತ್ತೆ. ಅದ್ರಲ್ಲೂ ಮದುವೆ ಮುರಿದು ಬಿದ್ದರೆ ಮುಗಿದೇ ಹೋಯ್ತು. ಅವಕಾಶಗಳು ಬರುವುದಿಲ್ಲ ಅನ್ನೋ ಮಾತುಗಳು ಇದ್ದವು. ಇದೆಲ್ಲವೂ ಸಮಂತಾ ವಿಚಾರದಲ್ಲಿ ಸುಳ್ಳಾಗಿವೆ. ಡಿವೋರ್ಸ್ ಬಳಿಕವೂ ಸ್ಯಾಮ್ ಚಿತ್ರರಂಗದಲ್ಲಿ ಅದೇ ಚಾರ್ಮ್ ಉಳಿಸಿಕೊಂಡು ಮುನ್ನುಗ್ತಿದ್ದಾರೆ.