For Quick Alerts
  ALLOW NOTIFICATIONS  
  For Daily Alerts

  ಸರಳವಾಗಿ ಕಾಣುವ ಸಮಂತಾ ಉಟ್ಟಿರುವ ಈ ಸೀರೆಯ ಬೆಲೆ ಎಷ್ಟು ಗೊತ್ತೆ?

  By ಫಿಲ್ಮಿಬೀಟ್ ಡೆಸ್ಕ್
  |

  ಸೆಲೆಬ್ರಿಟಿಗಳ ಜೀವನ ಶೈಲಿ ದುಬಾರಿಯೇ. ಅವರ ಕಾರುಗಳು, ಪಾರ್ಟಿಗಳು, ಉಡುಗೆಗಳು ಎಲ್ಲವಕ್ಕೂ ದುಬಾರಿ ಬೆಲೆಯ ಟ್ಯಾಗ್ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳು ಸರಳವಾಗಿ ಕಾಣಲು ಸಹ ಲಕ್ಷಾಂತರ, ಕೋಟ್ಯಂತರ ಹಣ ಖರ್ಚು ಮಾಡಿರುತ್ತಾರೆ!

  ನಟಿಯರನ್ನಂತೂ ಕೇಳುವಂತೆಯೇ ಇಲ್ಲ. ನಟಿಯರು ತಮ್ಮ ತ್ವಚೆ, ಮೇಕಪ್, ಉಡುಗೆಗಳಿಗಾಗಿ ಸಂಭಾವನೆಯ ಬಹುಭಾಗವನ್ನು ಖರ್ಚು ಮಾಡುತ್ತಾರೆ. ಅದರಲ್ಲಿಯೂ ಉಡುಗೆಗಳಿಗಾಗಿಯಂತೂ ಭಾರಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಾರೆ.

  ನಿನ್ನೆಯಷ್ಟೆ ನಟಿ ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಂತಾ ಸಹ ಭಾಗಿಯಾಗಿದ್ದರು. ಸರಳವಾಗಿ ಕಾಣುವ ಸೀರೆ ಉಟ್ಟು ಸುಂದರವಾಗಿ ಸಮಂತಾ ಕಾಣುತ್ತಿದ್ದರು. ಅತ್ಯಂತ ಸರಳವಾಗಿ ಕಾಣುತ್ತಿದ್ದ ಸಮಂತಾ ಉಟ್ಟಿದ್ದ ಸೀರೆಯ ಬೆಲೆ ಅಬ್ಬಬ್ಬಾ ಎನಿಸುವಷ್ಟಿದೆ.

  ಸಮಂತಾ ಸ್ಟೈಲ್ ಹೇಗಿತ್ತು?

  ಸಮಂತಾ ಸ್ಟೈಲ್ ಹೇಗಿತ್ತು?

  'ಶಾಕುಂತಲಂ' ಸಿನಿಮಾ ಟ್ರೈಲರ್ ಲಾಂಚ್‌ಗೆ ಬಿಳಿ ಬಣ್ಣದ ಪಾರದರ್ಶಕವಾಗಿದ್ದ ಯಾವುದೇ ಹೆಚ್ಚು ವರ್ಕ್‌ಗಳಿಲ್ಲದ ಸೀರೆಯನ್ನು ಸಮಂತಾ ಉಟ್ಟಿದ್ದರು. ತೋಳಿಲ್ಲದ ಸ್ಲೀವ್‌ಲೆಸ್‌ ಹಾಗೂ ಯಾವುದೇ ಡಿಸೈನರ್ ವರ್ಕ್‌ಗಳಿಲ್ಲದ ಬಿಳಿ ಬಣ್ಣದ ರವಿಕೆಯನ್ನು ಸಮಂತಾ ಉಟ್ಟಿದ್ದರು. ಯಾವುದೇ ಆಭರಣಗಳನ್ನು ಧರಿಸದೆ, ಕಣ್ಣಿಗೆ ತುಸು ದೊಡ್ಡವೇ ಆದ ಗ್ಲಾಸ್‌ಗಳನ್ನು ಸಹ ಧರಿಸಿದ್ದ ಸಮಂತಾ ಸರಳವಾಗಿ ಆದರೆ ಬಹಳ ಸುಂದರವಾಗಿ ಕಾಣುತ್ತಿದ್ದರು.

  ಸಮಂತಾ ಉಟ್ಟಿದ್ದ ಸೀರೆಯ ಬೆಲೆಯೆಷ್ಟು?

  ಸಮಂತಾ ಉಟ್ಟಿದ್ದ ಸೀರೆಯ ಬೆಲೆಯೆಷ್ಟು?

  ಆದರೆ ಸರಳವಾಗಿ ಕಾಣುತ್ತಿದ್ದ ಸಮಂತಾ ಉಟ್ಟಿದ್ದ ಸೀರೆಯ ಬೆಲೆ ಬರೋಬ್ಬರಿ ಅರ್ಧ ಲಕ್ಷ! ಹೌದು, ಸಮಂತಾ ಉಟ್ಟಿದ್ದಿದ್ದು ಆರ್ಗಾನ್ಜಾ ಮಾದರಿಯ ಸೀರೆ. ಈ ಸೀರೆ ಡಿಸೈನ್ ಆಗಿರುವುದು ತಯಾರಾಗಿರುವುದು ದೇವನಗರಿಯಲ್ಲಿ. ಈ ಸೀರೆಯ ಬೆಲೆ 48,000 ರಿಂದ ಪ್ರಾರಂಭವಾಗಿ 60,000 ದವರೆಗೂ ಇದೆಯಂತೆ. ಸಮಂತಾ ಧರಿಸಿದ ಸೀರೆಯ ಬೆಲೆ ಸುಮಾರು 50,000 ಎನ್ನಲಾಗುತ್ತದೆ. ರವಿಕೆ, ಕನ್ನಡಕ, ಪಾದರಕ್ಷೆಗಳ ಬೆಲೆಯನ್ನು ಸೇರಿಸಿದರೆ ಬೆಲೆ ಸುಮಾರು 70,000 ಸಾವಿರವೇ ಆಗುತ್ತದೇನೋ?

  ಫ್ಯಾಷನ್ ಪ್ರಿಯೆ ನಟಿ ಸಮಂತಾ

  ಫ್ಯಾಷನ್ ಪ್ರಿಯೆ ನಟಿ ಸಮಂತಾ

  ನಟಿ ಸಮಂತಾ ತಮ್ಮ ಸಿನಿಮಾಗಳಿಂದ ಮಾತ್ರವೇ ಅಲ್ಲದೆ ತಮ್ಮ ಉಡುಪುಗಳಿಂದಲೂ ಗಮನ ಸೆಳೆಯುತ್ತಾರೆ. ತೀರ ಚಿತ್ರ ವಿಚಿತ್ರ ಅಥವಾ ಹೈಎಂಡ್ ಫ್ಯಾಷನ್ ಅನ್ನು ಸಮಂತಾ ಮಾಡುವುದಿಲ್ಲವಾದರು ಸರಳವಾದ, ಸಾಮಾನ್ಯವಾದ ಫ್ಯಾಷನ್ ಉಡುಗೆಗಳನ್ನು ತೊಡುವುದರಲ್ಲಿ ಸಮಂತಾ ಹಿಂದುಳಿಯುವುದಿಲ್ಲ. ಆಗಾಗ್ಗೆ ತುಸು ಸೆಕ್ಸಿ ಉಡುಗೆಗಳನ್ನೂ ಸಹ ಧರಿಸುತ್ತಾರೆ. ಫಾರಿನ್ ಬ್ರ್ಯಾಂಡ್‌ನ ಬಿಕಿನಿಯನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದರು ನಟಿ ಸಮಂತಾ.

  ಹಲವಾರು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

  ಹಲವಾರು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

  ಕೆಲವು ವಾರಗಳಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದ ನಟಿ ಸಮಂತಾ ಇದೀಗ ಆರೋಗ್ಯವಾಗಿ ಮರಳಿದ್ದಾರೆ. 'ಶಾಕುಂತಲಂ' ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗುಣಶೇಖರ್, ತಾವು ಚಿತ್ರೀಕರಣ ಮಾಡಬೇಕಾದರೆ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದಾಗ ಸಮಂತಾ ಕಣ್ಣೀರು ಹಾಕಿದ್ದಾರೆ. ಇನ್ನುಳಿದಂತೆ ಸಮಂತಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಅವರ 'ಯಶೋಧ' ಬಿಡುಗಡೆ ಆಗಿದೆ. ಅದರ ಬಳಿಕ 'ಖುಷಿ' ಸಿನಿಮಾ ಬಿಡುಗಡೆ ಆಗಲಿದೆ. ಬಾಲಿವುಡ್‌ನಲ್ಲಿ ವರುಣ್ ಧವನ್ ಜೊತೆ ವೆಬ್ ಸರಣಿಯೊಂದರಲ್ಲಿ ನಟಿಸಲಿದ್ದಾರೆ. ಬಾಲಿವುಡ್‌ನ ಮಹಿಳಾ ಪ್ರಧಾನ ಸಿನಿಮಾದಲ್ಲಿಯೂ ಸಮಂತಾ ನಟಿಸಲಿದ್ದಾರೆ. ಬಳಿಕ ಇಂಗ್ಲೀಷ್‌ನ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿಯೂ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

  English summary
  Samantha wear simple looking Saree for Shakunthalam movie trailer launch event. But this simple looking Saree price will blow your mind.
  Tuesday, January 10, 2023, 16:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X