ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಲಿರುವ ಮೆಗಾ ಚಿತ್ರಗಳ ರನ್‌ಟೈಮ್ ವಿವರ ಇಲ್ಲಿದೆ

ಸಂಕ್ರಾಂತಿ ಬಂತೆಂದರೆ ಸಾಕು ತಮಿಳು ನಾಡು ಹಾಗೂ ತೆಲುಗು ರಾಜ್ಯಗಳಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತವೆ. ಸಂಕ್ರಾಂತಿ ಹಬ್ಬ ಈ ಎರಡೂ ರಾಜ್ಯಗಳಲ್ಲಿಯೂ ಭರ್ಜರಿಯಾಗಿ ನಡೆಯುವ ಕಾರಣ ಹಾಗೂ ಸಾಲು ಸಾಲು ರಜೆ ಇರುವ ಕಾರಣ ಮನೆ ಮಂದಿ ಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಆಗಮಿಸುತ್ತಾರೆ. ಹೀಗಾಗಿ ಸಂಕ್ರಾಂತಿ ಪ್ರಯುಕ್ತ ಚಿತ್ರಗಳನ್ನು ಬಿಡುಗಡೆಗೊಳಿಸಿದರೆ ಒಳ್ಳೆಯ ಗಳಿಕೆ ಮಾಡಬಹುದು ಎಂಬುದು ನಿರ್ಮಾಪಕರ ಲೆಕ್ಕಾಚಾರ.

ಇನ್ನು ಸಂಕ್ರಾಂತಿ ಹಬ್ಬದಂದು ಒಳ್ಳೆಯ ಗಳಿಕೆ ಮಾಡಬಹುದು ಎಂಬ ಉದ್ದೇಶದಿಂದ ಸ್ಟಾರ್ ನಟರ ಚಿತ್ರಗಳನ್ನು ಬಿಡುಗಡೆ ಮಾಡುವ ಕಾರಣ ಈ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಮಧ್ಯೆ ಕಲೆಕ್ಷನ್ ವಾರ್ ಸಹ ನಡೆಯುತ್ತದೆ. ಎಲ್ಲಾ ಚಿತ್ರಗಳಿಗಿಂತ ಚೆನ್ನಾಗಿರುವ ಚಿತ್ರ ಸಂಕ್ರಾಂತಿ ವಿನ್ನರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತದೆ. ಇನ್ನು ಇಷ್ಟು ವರ್ಷಗಳಂತೆ ಈ ವರ್ಷವೂ ಸಹ ಸಂಕ್ರಾಂತಿ ಪ್ರಯುಕ್ತ ತೆಲುಗಿನ ಇಬ್ಬರು ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಕ್ಕೆ ಬರುತ್ತಿದ್ದು ಪೈಪೋಟಿ ಏರ್ಪಟ್ಟಿದೆ.

ತೆಲುಗಿನಲ್ಲಿ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಹಾಗೂ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದು, ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ರಿಲೀಸ್ ಆಗಲಿವೆ. ಈ ಮೆಗಾ ಮುಖಾಮುಖಿಯಲ್ಲಿ ಯಾವ ನಟರ ಚಿತ್ರಗಳು ಜಯಭೇರಿ ಬಾರಿಸಲಿವೆ ಎಂಬ ಕುತೂಹಲ ಈಗ ಸಿನಿ ರಸಿಕರಲ್ಲಿ ಮೂಡಿದೆ. ಇನ್ನು ಈ ಚಿತ್ರಗಳ ರನ್‌ಟೈಮ್ ಎಷ್ಟು ಎಂಬ ಮಾಹಿತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚಿತ್ರಗಳ ಅವಧಿ ಈ ಕೆಳಕಂಡಂತಿದೆ.

Sankranti 2023 releasing movies runtime details

ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ: 2 ಗಂಟೆ 40 ನಿಮಿಷ - ಜನವರಿ 12ರಂದು ಬಿಡುಗಡೆ

ವಿಜಯ್ ನಟನೆಯ ವಾರಿಸು - 2 ಗಂಟೆ 43 ನಿಮಿಷ - ಜನವರಿ 12ರಂದು ಬಿಡುಗಡೆ

ಅಜಿತ್ ಕುಮಾರ್ ನಟನೆಯ ತುನಿವು - 2 ಗಂಟೆ 23 ನಿಮಿಷ - ಜನವರಿ 12ರಂದು ಬಿಡುಗಡೆ

ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ - 2 ಗಂಟೆ 35 ನಿಮಿಷ - ಜನವರಿ 13ರಂದು ಬಿಡುಗಡೆ

More from Filmibeat

English summary
Sankranti 2023 releasing movies runtime details. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X