For Quick Alerts
  ALLOW NOTIFICATIONS  
  For Daily Alerts

  ನಾನು 'ಅರ್ಜುನ್ ರೆಡ್ಡಿ' ಗೆ ಋಣಿಯಾಗಿದ್ದೀನಿ; ನಟಿ ಶಾಲಿನಿ ಪಾಂಡೆ

  By ಫಿಲ್ಮಿಬೀಟ್ ಡೆಸ್ಕ್
  |

  ನಟಿ ಶಾಲಿನಿ ಪಾಂಡೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಶಾಲಿನ್ ಪಾಂಡೆ ಎನ್ನುವುದಕ್ಕಿಂತ 'ಅರ್ಜುನ್ ರೆಡ್ಡಿ' ನಾಯಕಿ ಎಂದರೆ ಥಟ್ ಅಂತ ಗೊತ್ತಾಗುತ್ತದೆ. ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟಿ ಶಾಲಿನಿ ಪಾಂಡೆ. ಇದೇ ಸಿನಿಮಾ ಮೂಲಕ ಸ್ಟಾರ್ ಆಗಿ ಹೊಮ್ಮಿದ ಮತ್ತೊಬ್ಬ ನಟ ವಿಜಯ್ ದೇವರಕೊಂಡ.

  2017ರಲ್ಲಿ ಬಿಡುಗಡೆಯಾದ ಅರ್ಜುನ್ ರೆಡ್ಡಿ ಸಿನಿಮಾ ವಿಜಯ್ ಮತ್ತು ಶಾಲಿನಿ ಅವರಿಗೆ ದೊಡ್ಡ ಖ್ಯಾತಿ ತಂದುಕೊಂಡಿತು. ಈ ಸಿನಿಮಾ ಬಳಿಕ ಇಬ್ಬರೂ ಬಹುಬೇಡಿಕೆಯ ಕಲಾವಿದರಾಗಿ ಹೊರಮ್ಮಿದರು. ಈ ಸಿನಿಮಾ ವಿಜಯ್ ದೇವರಕೊಂಡ ಅವರನ್ನು ತೆಲುಗಿನ ಸ್ಟಾರ್ ನಟರ ಸಾಲಿನಲ್ಲಿ ನಿಲ್ಲಿಸಿತು. ಅಂದಹಾಗೆ ಈಗ್ಯಾಕೆ ಅರ್ಜುನ್ ರೆಡ್ಡಿ ಬಗ್ಗೆ ಎನ್ನುತ್ತೀರಾ? ತೆಲುಗಿನ ಈ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾಗಿ 4 ವರ್ಷಗಳು ಪೂರೈಸಿದೆ. ಆಗಸ್ಟ್ 25ರಂದು ಅರ್ಜುನ್ ರೆಡ್ಡಿ ಸಿನಿಮಾ ತೆರೆಮೇಲೆ ಅಬ್ಬರಿತ್ತು. ಈ ಚಿತ್ರಕ್ಕೆ ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಹೇಳಿದ್ದರು. ಈ ಸಿನಿಮಾ ಬಳಿಕ ನಟಿ ಶಾಲಿನಿ ಪಾಂಡೆ ತೆಲುಗಿನಿಂದ ಬಾಲಿವುಡ್‌ಗೆ ಹಾರಿದರು.

  ಅರ್ಜುನ್ ರೆಡ್ಡಿ ಬಳಿಕ ತೆಲುಗಿನಲ್ಲೂ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಶಾಲಿಗೆ ಅರ್ಜುನ್ ರೆಡ್ಡಿ ತಂದುಕೊಟ್ಟ ಖ್ಯಾತಿ ತಂದುಕೊಂಡಿಲ್ಲ. ಶಾಲಿನಿ ಸದ್ಯ ಬಾಲಿವುಡ್‌ನ ಸ್ಟಾರ್ ನಟ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ನಡುವೆ ತನ್ನ ಮೊದಲ ಸಿನಿಮಾ, ಸ್ಟಾರ್ ಗಿರಿ ತಂದುಕೊಟ್ಟ ಅರ್ಜನ್ ರೆಡ್ಡಿ ಚಿತ್ರಕ್ಕೆ 4 ವರ್ಷದ ಪೂರೈಸಿದ ಖುಷಿಯನ್ನು ಶಾಲಿನಿ ಪಾಂಡೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಅರ್ಜುನ್ ರೆಡ್ಡಿ ಚಿತ್ರಕ್ಕೆ ಋಣಿಯಾಗಿದ್ದೀನಿ- ಶಾಲಿನಿ

  ಅರ್ಜುನ್ ರೆಡ್ಡಿ ಚಿತ್ರಕ್ಕೆ ಋಣಿಯಾಗಿದ್ದೀನಿ- ಶಾಲಿನಿ

  ಆಂಗ್ಲ ವೆಬ್ ಪೋರ್ಟಲ್ ಜೊತೆ ಮಾತಾಡಿದ ಶಾಲಿನಿ, ಅರ್ಜುನ್ ರೆಡ್ಡಿ ಯಶಸ್ಸು ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. "ನಾನು ಅರ್ಜುನ್ ರೆಡ್ಡಿ ಚಿತ್ರಕ್ಕೆ ಋಣಿಯಾಗಿದ್ದೀನಿ. ಯಾಕೆಂದರೆ ಅದು ನನ್ನನ್ನು ಅದ್ಭುತ ನಟಿಯಾಗಿ ಒಂದು ನಕ್ಷೆಯಲ್ಲಿ ಇರಿಸಿದೆ. ನಾನು ಅತ್ಯಂತ ಹೆಮ್ಮೆಪಡುವಂತ ನಟನೆ ಮಾಡಲು ನಾನು ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಯತ್ನ ಮಾಡಿದ್ದೇನೆ. ಪ್ರೇಕ್ಷಕರು ನನ್ನ ಪಾತ್ರವನ್ನು ಮೆಚ್ಚಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಶಾಲಿನಿ ಹೇಳಿದ್ದಾರೆ.

  ಈ ಸಿನಿಮಾದ ಭಾಗವಾಗಿದ್ದು ನನ್ನ ಅದೃಷ್ಟ

  ಈ ಸಿನಿಮಾದ ಭಾಗವಾಗಿದ್ದು ನನ್ನ ಅದೃಷ್ಟ

  "ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರಕ್ಕೆ ನೀಡಿದಕ್ಕೆ ನಾನು ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ಋಣಿಯಾಗಿದ್ದೇನೆ. ಅದ್ಭುತ ಪ್ರೇಮಕಥೆಯನ್ನು ರಚಿಸುವ ಅವರ ದೃಷ್ಟಿಕೋನದ ಭಾಗವಾಗಿದ್ದು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಇದು ಇಡೀ ಭಾರತೀಯ ಸಿನಿಮಾ ಪ್ರಿಯರ ಹೃದಯ ಮತ್ತು ಮನಸ್ಸಿನಲ್ಲಿ ಸ್ಥಾನ ಪಡೆದಿದೆ.' ಎಂದ ಶಾಲಿನಿ ಹೇಳಿದ್ದಾರೆ.

  ಈ ಸಿನಿಮಾ ಆತ್ಮ ವಿಶ್ವಾಸ ಹೆಚ್ಚಿಸಿತು- ಶಾಲಿನಿ

  ಈ ಸಿನಿಮಾ ಆತ್ಮ ವಿಶ್ವಾಸ ಹೆಚ್ಚಿಸಿತು- ಶಾಲಿನಿ

  ಇನ್ನು ಮಾತು ಮುಂದುವರೆಸಿದ ಶಾಲಿನಿ ಅರ್ಜುನ್ ರೆಡ್ಡಿ ಸಿನಿಮಾದ ಯಶಸ್ಸು ತನ್ನನ್ನು ಬಹುಮುಖ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಉತ್ಸಾಹ ಹೆಚ್ಚಿಸಿತು ಎಂದಿದ್ದಾರೆ. "ಅರ್ಜುನ್ ರೆಡ್ಡಿ ಚಿತ್ರದ ಯಶಸ್ಸಿನಿಂದ ನನ್ನ ವೈಯಕ್ತಿಕ ಗುರಿ ಸಾಧಿಸಲು ನನಗೆ ಆತ್ಮವಿಶ್ವಾಸವನ್ನು ನೀಡಿತು. ಯಾರು ಅದ್ಭುತ ಕಲಾವಿದನಾಗಿ ಹೆಸರು ಮಾಡಲು ಬಯಸುತ್ತಾರೊ ಅವರು ಬಹುಮುಖಿಯಾಗಿರಲು ಇಷ್ಟಪಡುತ್ತಾರೆ" ಎಂದು ಶಾಲಿನಿ ಹೇಳಿದ್ದಾರೆ.

  ರಣ್ವೀರ್ ಸಿಂಗ್ ಜೊತೆ ನಟನೆ

  ರಣ್ವೀರ್ ಸಿಂಗ್ ಜೊತೆ ನಟನೆ

  ಶಾಲಿನಿ ಪಾಂಡೆ ಸದ್ಯ ಬಾಲಿವುಡ್‌ನ ಬಹುನಿರೀಕ್ಷೆಯ 'ಜಯೇಶಭಾಯಿ ಜೋರ್ದಾರ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟ ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಶಾಲಿನಿ ಬಾಲಿವುಡ್ ಸ್ಟಾರ್ ನಟನ ಜೊತೆ ತೆರೆಹಂಚಿಕೊಂಡಿದ್ದು, ಚಿತ್ರದ ಬಗ್ಗೆ ಸಖತ್ ಉತ್ಸುಕರಾಗಿದ್ದಾರೆ. ಈ ಬಗ್ಗೆ ಮಾತನಾಡಲು ಶಾಲಿನಿ ಹಿಂದೇಟು ಹಾಕಿದರು. ಈಗಲೇ ತನ್ನ ಪಾತ್ರದ ಬಗ್ಗ ಮಾತನಾಡಲು ಸಾಧ್ಯವಿಲ್ಲ ಹಾಗಾಗಿ ಕಾಯಲೇ ಬೇಕು ಎಂದು ಹೇಳುವ ಮೂಲಕ ಪಾತ್ರದ ಬಗ್ಗೆ ಇದ್ದ ಕುತೂಹಲವನ್ನು ಹಾಗೆ ಕಾಯ್ದಿರಿಸಿದ್ದಾರೆ.

  English summary
  Actress Shalini Panday says I owe Everything to Arjun Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X