For Quick Alerts
  ALLOW NOTIFICATIONS  
  For Daily Alerts

  ನಟಿ ಶೃತಿ ಹಾಸನ್‌ ಜೋಳಿಗೆಗೆ ಸಾಲು ಸಾಲು ಸಿನಿಮಾಗಳು!

  |

  ನಟ ಕಮಲ್‌ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್‌ ಒಂದಷ್ಟು ದಿನಗಳು ಕಾಣದಂತೆ ಮಾಯವಾಗಿ ಬಿಟ್ಟಿದ್ದರು. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

  ಆದರೆ, ಈಗ ಪುನಃ ಅವರು ಸಕ್ರಿಯರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗ ಸಾಮಾಜಿಕ ಜಾಲತಾಣದಲ್ಲೂ ಶೃತಿ ಬ್ಯೂಸಿ ಇರುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಒಮದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಚಿತ್ರರಂಗದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದರೂ ಕೂಡ ಶೃತಿ ಹಾಸನ್‌ಗೆ ಬೇಡಿಕೆ ಕಡಿಮೆ ಆಗಿಲ್ಲ. ಸಾಲು ಸಾಲು ಸಿನಿಮಾಗಳು ಶೃತಿಯನ್ನು ಅರಸಿ ಬರುತ್ತಿವೆ.

  ಬಾಲಯ್ಯನೊಂದಿಗೆ ಶೃತಿ ಮುಂದಿನ ಸಿನಿಮಾ!

  ತೆಲುಗು ಸ್ಟಾರ್‌ ನಟಸಿಂಹ ನಂದಮುರಿ ಬಾಲಕೃಷ್ಣ ಜೊತಗೆ ನಟಿ ಶೃತಿ ಹಾಸನ್‌ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಇದು ಬಾಲಯ್ಯ ಅಭಿನಯದ 107ನೇ ಸಿನಿಮಾ. ಚಿತ್ರಕ್ಕೆ ಎನ್‌ಬಿಕೆ 107 ಎನ್ನುವ ತಾತ್ಕಾಲಿಕ ಶೀರ್ಷಿಕೆಯನ್ನು ಇಡಲಾಗಿದೆ. ಈ ಚಿತ್ರಕ್ಕೆ ಗೋಪಿಚಂದ್ ಮಾಲಿನೇನಿ ನಿರ್ದೇಶನಿದೆ.

  ಮೈತ್ರಿ ಮೂವೀಸ್‌ ಬ್ಯಾನರ್‌ ಅಡಿಯಲ್ಲಿ ಸಿನಿಮಾ ಅದ್ದೂರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಈ ಹಿಂದೆ ನಿರ್ದೇಶಕ ಗೋಪಿಚಂದ್ ಅವರ ಕ್ರ್ಯಾಕ್ ಮತ್ತು ಬಲುಪು ಸಿನಿಮಾಗಳಲ್ಲಿ ಶೃತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕ್ರ್ಯಾಕ್‌ ಶೃತಿ ಹಾಸನ್‌ ಕಮ್‌ ಬ್ಯಾಕ್‌ಗೆ ದೊಡ್ಡ ಬ್ರೇಕ್‌ ಕೊಟ್ಟ ಸಿನಿಮಾ. ಸದ್ಯ ಶೃತಿ ಸಾಲು ಸಾಲು ಸಿನಿಮಾಗಳಲ್ಲಿ ವಿಭಿನ್ನ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ಶೃತಿ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ.

  ಎರಡನೇ ಇನ್ನಿಂಗ್ಸ್‌ನಲ್ಲಿ ಶೃತಿ ಹಾಸನ್‌ ಭರ್ಜರಿ ಓಟ!

  ನಟಿ ಶೃತಿ ಹಾಸನ್‌ ಟಾಲಿವುಡ್‌ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾಗಳಿಂದ ದೂರಾದರು. ಸಿನಿಮಾ ಬಿಡುವುದರ ಜೊತೆಗೆ ದೇಶವನ್ನೇ ತೊರೆದು ವಿದೇಶದಲ್ಲಿ ಬಾಯ್‌ ಫ್ರೆಂಡ್‌ ಜೊತೆಗೆ ವಾಸವಿದ್ದರು. ನಂತರ ಆತನಿಂದ ದೂರತಾದ ಮೇಲೆ ಶೃತಿ ಭಾರತಕ್ಕೆ ವಾಪಸ್ಸಾದ್ರು. ಜೊತೆಗೆ ಸಿನಿಮಾಗಳಲ್ಲೂ ಶೃತಿ ಬ್ಯುಸಿಯಾಗಿದ್ದಾರೆ. ಶೃತಿ ಕಮ್‌ ಬ್ಯಾಕ್‌ ಮಾಡಿದ ಗಳಿಗೆ ಚೆನ್ನಾಗಿತ್ತು ಅಂತ ಕಾಣತ್ತೆ. ಅದೃಷ್ಟು ಶೃತಿಯ ಎರಡನೇ ಇನ್ನಿಂಗ್ಸ್‌ ಪಯಣಕ್ಕೂ ಕೈ ಹಿಡಿದಿದೆ. ಕ್ರ್ಯಾಕ್‌ ಸಿನಿಮಾದ ಮೂಲಕ ಶೃತಿ ತಮ್ಮ ಸಿನಿಮಾ ಪಯಣವನ್ನ ಎರಡನೇ ಬಾರಿಗೆ ಶುರು ಮಾಡಿದ್ದಾರೆ. ಕ್ರ್ಯಾಕ್ ಸಿನಿಮಾದಲ್ಲೇ ಶೃತಿಗೆ ಅಪಾರ ಮೆಚ್ಚುಗೆ ಸಿಕ್ಕಿದೆ.

  ಜೊತೆಗೆ ಈ ಚಿತ್ರದ ಬಳಿಕ ಶೃತಿಗೆ ಸಾಲು ಸಾಲು ಸಿನಿಮಾ ಆಫರ್‌ಗಳು ಕೂಡ ಬರುತ್ತಿವೆ. ಕ್ರ್ಯಾಕ್‌ ಸಿನಿಮಾದ ಬಳಿಕಾ ಹಿಂದಿಯ 'ದಿ ಪವರ್' ಅನ್ನೋ ಚಿತ್ರವನ್ನೂ ಕೂಡ ಶ್ರುತಿ ಒಪ್ಪಿಕೊಂಡಿದ್ದಾರೆ. ಪವನ್ ಕಲ್ಯಾಣ್ ಜೊತೆ 'ವಕೀಲ್ ಸಾಬ್‌' ಹಾಗೂ ವಿಜಯ್ ಸೇತುಪತಿ ಅವರೊಂದಿಗೆ 'ಲಾಭಂ' ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ತೆಲುಗಿನ 'ಪಿಟ್ಟಾ ಕಥಲು' ಚಿತ್ರದಲ್ಲಿ ಗಾಯಕ ಸಂಜಿತ್ ಹೆಗ್ಡೆ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ

  Shruti Haasan To Share Screen With Balayya

  ಸದ್ಯ ಶೃತಿ ಹಾಸನ್‌ ಪಾಲಿಗೆ ಬಂದಿರೋ ಮತ್ತೊಂದು ದೊಡ್ಡ ಆಫರ್‌ ಅಂದರೆ ಅದು ಸಲಾರ್. ಸಲಾರ್ ಚಿತ್ರದಲ್ಲಿ ಪ್ರಭಾಸ್‌ ಜೊತೆಗೆ ಶೃತಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಪ್ರಶಾಂತ್‌ ನೀಲ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸದ್ಯ ಸಲಾರ್‌ ಸಿನಿಮಾದಲ್ಲೇ ಶೃತಿ ಬ್ಯುಸಿಯಾಗಿದ್ದಾರೆ. ಇನ್ನೂ ಈಗ ಶೃತಿ ಜೋಳಿಗೆ ಹೊಸ ಸಿನಿಮಾ ಸೇರಿ ಕೊಂಡಿದೆ. ಅದೇ ಈ ಎನ್‌ಬಿಕೆ 107.

  ಒಟ್ಟಾರೆ ಮತ್ತೇ ಸಿನಿಮಾರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ ಶೃತಿಗೆ ಅದೃಷ್ಟದ ಬಾಗಿಲು ತೆರೆದಿದೆ. ಸಾಲು ಸಾಲು ಸಿನಿಮಾಗಳು ಶೃತಿ ಬೇಕು ಅಂತ ಆಕೆಯನ್ನು ಹುಡುಕುತ್ತಾ ಹೊರಟಿವೆ. ಇನ್ನೂ ಯಾರೇ ಒಬ್ಬ ನಾಯಕಿ ಒಮ್ಮೆ ಸಿನಿಮಾ ರಂಗದಿಂದ ದೂರಾದರೆ ಮತ್ತೆ ರೀ ಎಂಟ್ರಿ ಆಗೋದೇ ಅಮ್ಮನ ಪಾತ್ರ ಅಥವಾ ಅಕ್ಕನ ಪಾತ್ರದಲ್ಲಿ. ಆದ್ರತೆ ಶೃತಿ ಹಾಸನ್‌ಗೆ ಮಾತ್ರ ನಾಯಕಿಯ ಪಾತ್ರಗಳ ಬೇಡಿಕೆ ಕಡಿಮೆ ಆಗಿಲ್ಲ. ಇನ್ನೂ ಒಂದಷ್ಟು ಕಥೆಗಳನ್ನು ಶೃತಿ ಒಪ್ಪಿಕೊಂಡಿದ್ದಾರೆ. ಮುಂದೆ ಒಂದೊಂದಾಗಿಯೇ ಶೃತಿ ಹಾಸನ್‌ ಸಿನಿಮಾಗಳು ಪ್ರಕಟಗೊಳ್ಳಲಿದೆ.

  English summary
  Actress Shruti Haasan Added One More Film For Her Comeback Journey,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X