For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಅವಕಾಶ ಗಿಟ್ಟಿಸಿಕೊಳ್ಳಲು 'ಕಾಂಪ್ರೊಮೈಸ್' ಮಾಡಿಕೊಂಡ್ರಾ ವಿಜಯ್ ದೇವರಕೊಂಡ?

  |

  ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಖ್ಯಾತಿಯ ಉತ್ತಂಗಕ್ಕೆ ಏರಿರುವ ತೆಲುಗು ನಟ ವಿಜಯ್ ದೇವರಕೊಂಡ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಅವರು 100 ಕೋಟಿ ಬಜೆಟ್ ನ ಬಾಲಿವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.

  ಅರ್ಜುನ್ ರೆಡ್ಡಿ ಸಿನಿಮಾ ಬಳಿಕ ಅಷ್ಟೇನು ಹಿಟ್ ಸಿನಿಮಾ ನೀಡದ ವಿಜಯ್ ದೇವರಕೊಂಡ ಗೆ ಬಾಲಿವುಡ್ ಅವಕಾಶ ದೊರೆತಿದ್ದಾದರೂ ಹೇಗೆ ಎಂದು ಹಲವು ತಲೆ ಕೆರೆದುಕೊಳ್ಳುತ್ತಿದ್ದಾರೆ. ಆದರೆ ಶ್ರೀರೆಡ್ಡಿ ಇದಕ್ಕೊಂದು ವಾದವನ್ನು ತೇಲಿಬಿಟ್ಟಿದ್ದಾರೆ.

  ತೆಲುಗಿನ ಸ್ಟಾರ್ ನಟ-ನಟಿಯರ ಬಗ್ಗೆ ಸದಾ ಒಂದಿಲ್ಲೊಂದು ಆರೋಪ ಮಾಡುತ್ತಾ, ವಿವಾದಗಳಿಂದಲೇ ಸುದ್ದಿಯಲ್ಲಿರುವ ಶ್ರೀರೆಡ್ಡಿ, ವಿಜಯ್ ದೇವರಕೊಂಡಗೆ ಸಿಕ್ಕಿರುವ ಬಾಲಿವುಡ್ ಅವಕಾಶಕ್ಕೆ ದೇವರಕೊಂಡ ಮಾಡಿಕೊಂಡಿರುವ 'ಕಾಂಪ್ರೊಮೈಸ್' ಕಾರಣ ಎಂದಿದ್ದಾರೆ.

  ರಣ್ವೀರ್ ಸಿಂಗ್ ಅನ್ನು ನಕಲು ಮಾಡಬೇಡಿ: ಶ್ರೀರೆಡ್ಡಿ

  ರಣ್ವೀರ್ ಸಿಂಗ್ ಅನ್ನು ನಕಲು ಮಾಡಬೇಡಿ: ಶ್ರೀರೆಡ್ಡಿ

  ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಶ್ರೀರೆಡ್ಡಿ, 'ವಿಜಯ್ ದೇವರಕೊಂಡ ನೀವು ರಣ್ವೀರ್ ಸಿಂಗ್ ಅನ್ನು ನಕಲು ಮಾಡಬೇಡಿ, ನಮಗೆ ಝೆರಾಕ್ಸ್ ಬೇಡ, ಅಸಲಿ ಬೇಕು'' ಎಂದು ಬರೆದುಕೊಂಡಿದ್ದಾರೆ.

  ಊಟಕ್ಕಿಂತ ಲಿಪ್‌ಸ್ಟಿಕ್ ಹೆಚ್ಚು ತಿನ್ನುತ್ತಾರೆ: ಶ್ರೀರೆಡ್ಡಿ

  ಊಟಕ್ಕಿಂತ ಲಿಪ್‌ಸ್ಟಿಕ್ ಹೆಚ್ಚು ತಿನ್ನುತ್ತಾರೆ: ಶ್ರೀರೆಡ್ಡಿ

  ನಂತರ ಬೇರೊಂದು ಪೋಸ್ಟ್‌ನಲ್ಲಿ ಸಿನಿಮಾ ರಂಗದಲ್ಲಿ ಊಟಕ್ಕಿಂತಲೂ ಹೆಚ್ಚು ಲಿಪ್‌ಸ್ಟಿಕ್ ತಿನ್ನುತ್ತಾರೆ. ಹೆಚ್ಚು ಲಿಪ್‌ಸ್ಟಿಕ್ ತಿಂದರೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂದು ಬರೆದಿದ್ದಾರೆ. ಇದು ಪರೋಕ್ಷವಾಗಿ ವಿಜಯ್ ದೇವರಕೊಂಡ ಬಗ್ಗೆಯೇ ಬರೆದಿದ್ದಾರೆ ಎನ್ನಲಾಗಿದೆ.

  ಬೆತ್ತಲೆ ಪ್ರತಿಭಟನೆ ಮಾಡಿದ್ದ ಶ್ರೀರೆಡ್ಡಿ

  ಬೆತ್ತಲೆ ಪ್ರತಿಭಟನೆ ಮಾಡಿದ್ದ ಶ್ರೀರೆಡ್ಡಿ

  ವಿವಾದಾತ್ಮಕ ನಟಿ ಶ್ರೀರೆಡ್ಡಿ ಈ ಹಿಂದೆ ಧನುಶ್ ಸೇರಿ ಹಲವು ಸ್ಟಾರ್ ನಟರ ಮೇಲೆ ಆರೋಪಗಳನ್ನು ಹೊರಿಸಿದ್ದರು. ಮೀ ಟೂ ವಿರುದ್ಧ ಬೆತ್ತಲೆ ಪ್ರತಿಭಟನೆಯನ್ನೂ ಮಾಡಿದ್ದರು.

  ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಶ್ರೀರೆಡ್ಡಿ

  ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಶ್ರೀರೆಡ್ಡಿ

  ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಶ್ರೀರೆಡ್ಡಿ ಇತ್ತೀಚೆಗೆ ರಾಕೇಶ್ ಮಾಸ್ಟರ್, ಕರಾಟೆ ಕಲ್ಯಾಣ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಹಾಕಿದ್ದರು. ಅವರಿಬ್ಬರೂ ಶ್ರೀರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ.

  English summary
  Sri Reddy gave shocking comments on Vijay Devarkonda about how he get Bollywood chance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X