Don't Miss!
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
SS Rajamouli: ಅಪರೂಪದ ದಾಖಲೆ ಬರೆದ ರಾಜಮೌಳಿ, ಭಾರತೀಯರಿಗೆ ಹೆಮ್ಮೆ
ನಿರ್ದೇಶಕ ರಾಜಮೌಳಿಯೇ ಹಾಗೆ, ಅವರ ಯೋಚನೆಗಳು ಕಿರಿದಾಗಿ ಇರುವುದೇ ಇಲ್ಲ. ಕಿರಿದಾಗಿ ಯೋಚಿಸಲು ಅವರಿಗೆ ಸಾಧ್ಯವೇ ಇಲ್ಲ. ಕ್ರಿಮಿ ನೊಣದಂತಹಾ ನೊಣದ ಕತೆಯನ್ನೂ ಸಹ ಅದ್ಧೂರಿಯಾಗಿಯೇ ಹೇಳುತ್ತಾರೆ, ಕಲೆಕ್ಷನ್ ಸಹ ಅದ್ಧೂರಿಯೇ.
ಭಾರತದ ಕಮರ್ಶಿಯಲ್ ಸಿನಿಮಾ ಗಾರುಡಿಗ ಎಸ್‌ಎಸ್ ರಾಜಮೌಳಿ ಒಂದು ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ರಾಜಮೌಳಿ ಮಾಡಿರುವ ದಾಖಲೆ ಎಂಥಹುದ್ದೆಂದರೆ ಇದರಿಂದ ರಾಜಮೌಳಿ ಮಾತ್ರವಲ್ಲ ಭಾರತೀಯರೆಲ್ಲರೂ ಹೆಮ್ಮೆ ಪಡಬಹುದು.
RRR
1000cr:
ಸಾವಿರ
ಕೋಟಿ
ಕ್ಲಬ್
ಸೇರಿದ
RRR:
'ದಂಗಲ್'
ದಾಖಲೆ
ಮುರಿಯಲು
ಇನ್ನೆಷ್ಟು
ಬೇಕು?
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿದೆ. ಗಳಿಕೆಯಲ್ಲಿ ದಾಖಲೆಗಳ ಮೇಲೆ ಹೊಸ ದಾಖಲೆಗಳನ್ನು ಬರೆಯುತ್ತಾ ಸಾಗಿದೆ. ಇದೀಗ ಇದೇ ಸಿನಿಮಾದ ಕಾರಣಕ್ಕೆ ಎಸ್‌ಎಸ್ ರಾಜಮೌಳಿ ದಾಖಲೆಯೊಂದಕ್ಕೆ ಭಾಜನರಾಗಿದ್ದಾರೆ.
RRR
Vs
Sahoo:
ಬಾಲಿವುಡ್
ಬಾಕ್ಸಾಫೀಸ್‌ನಲ್ಲಿ
ಜಪ್ಪಯ್ಯ
ಅಂದ್ರೂ
ಸಾಹೋ
ದಾಖಲೆ
ಮುರಿಯಲು
ಸಾಧ್ಯವಿಲ್ಲ
ಕೇವಲ 16 ದಿನಗಳಲ್ಲಿ 'RRR' ಸಿನಿಮಾ 1000 ಕೋಟಿ ರುಪಾಯಿ ಕಲೆಕ್ಷನ್ ಅನ್ನು ದಾಟಿ ಮುಂದೆ ಹೋಗಿದೆ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸೂಪರ್ ಡೂಪರ್ ಹಿಟ್ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಮೂರು ಸಿನಿಮಾಗಳು ರಾಜಮೌಳಿಯವರದ್ದೇ ಆಗಿವೆ!
ಇದು ಮಾತ್ರವೇ ಅಲ್ಲದೆ, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಎರಡು ಸಿನಿಮಾ ನಿರ್ದೇಶಿಸಿದ ಭಾರತದ ಏಕೈಕ ನಿರ್ದೇಶಕ ಎಂಬ ಖ್ಯಾತಿಗೂ ರಾಜಮೌಳಿ ಪಾತ್ರರಾಗಿದ್ದಾರೆ. ಅವರ 'ಬಾಹುಬಲಿ 2' ಹಾಗೂ 'RRR' ಸಿನಿಮಾಗಳೆರಡು 1000 ಕೋಟಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ.

ಸತತ ಹಿಟ್ ಸಿನಿಮಾ ಕೊಟ್ಟ ಮತ್ತೊಬ್ಬ ನಿರ್ದೇಶಕನಿಲ್ಲ
ಅಮಿತ ಕಲ್ಪನೆಗಳ ರಾಜಮೌಳಿ ಸತತ 21 ವರ್ಷಗಳಿಂದಲೂ ಸಿನಿಮಾ ಮಾಡುತ್ತಿದ್ದು, ಈವರೆಗೆ ರಾಜಮೌಳಿ ನಿರ್ದೇಶಿಸಿರುವ ಒಂದೇ ಒಂದು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿಲ್ಲ. ರಾಜಮೌಳಿ ನಿರ್ದೇಶನದ ಎಲ್ಲ ಸಿನಿಮಾಗಳು ಸೂಪರ್-ಡೂಪರ್ ಹಿಟ್ ಸಿನಿಮಾಗಳೇ. ಇದು ಸಹ ಕಡಿಮೆ ದಾಖಲೆಯಲ್ಲ. ಎರಡು ದಶಕಗಳ ಕಾಲ ಚಿತ್ರರಂಗದಲ್ಲಿದ್ದು, ನೀಡಿದ ಎಲ್ಲ ಸಿನಿಮಾ ಹಿಟ್ ಆಗಿರುವ ಇನ್ನೊಬ್ಬ ನಿರ್ದೇಶಕ ಭಾರತೀಯ ಚಿತ್ರರಂಗದಲ್ಲಿಲ್ಲ.

ವಿದೇಶಗಳಲ್ಲಿ ಅದ್ಭುತ ಪ್ರದರ್ಶನ
'RRR' ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ ಆಗಿತ್ತು. ಸಿನಿಮಾವು ಭಾರತದಲ್ಲಿ ಮಾತ್ರವೇ ಅಲ್ಲ, ದುಬೈ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ ದೊಡ್ಡ ಹಿಟ್ ಆಗಿದೆ. ಅಮೆರಿಕ, ಆಸ್ಟ್ರೇಲಿಯಾಗಳಲ್ಲಿಯೂ ಹಿಟ್ ಎನಿಸಿಕೊಂಡಿದೆ. ಭಾರತದ ಸಿನಿಮಾಗಳು ಅಷ್ಟಾಗಿ ಉತ್ತಮ ಪ್ರದರ್ಶನ ಕಾಣದ ಬ್ರಿಟನ್‌ನಲ್ಲಿ ಸಹ ಈ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ.

'ಬ್ಯಾಟ್‌ಮ್ಯಾನ್' ಸಿನಿಮಾವನ್ನು ಹಿಂದಿಕ್ಕದ್ದ 'RRR'
'RRR' ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ಡಿಸಿಯ 'ಬ್ಯಾಟ್‌ಮ್ಯಾನ್' ಸಿನಿಮಾ ಬಿಡುಗಡೆ ಆಗಿತ್ತು, ಅದರ ಜೊತೆಗೆ ಇನ್ನೂ ಕೆಲವು ಹಾಲಿವುಡ್ ಸಿನಿಮಾಗಳು ಪ್ರದರ್ಶನ ಕಾಣುತ್ತಿದ್ದವು. ಆದರೆ 'RRR' ಸಿನಿಮಾ ಬಿಡುಗಡೆ ಆದ ವಾರ ವಿಶ್ವ ಕಲೆಕ್ಷನ್ ಲೆಕ್ಕ ಹಾಕಿದರೆ 'ಬ್ಯಾಟ್‌ಮ್ಯಾನ್' ಸಿನಿಮಾಕ್ಕಿಂತಲೂ 'RRR' ಸಿನಿಮಾದ ಕಲೆಕ್ಷನ್ ಹೆಚ್ಚಿಗಿತ್ತು. ಆ ಮೂಲಕ ಹಾಲಿವುಡ್ ಸಿನಿಮಾವನ್ನೇ ಮೀರಿಸಿ ಕಲೆಕ್ಷನ್ ಮಾಡಿತ್ತು, ರಾಜಮೌಳಿಯ ಈ ಸಿನಿಮಾ.

ಹೊಸ ಸಿನಿಮಾಕ್ಕೆ ತಯಾರು
'RRR' ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಇದೀಗ ಮಹೇಶ್ ಬಾಬು ಜೊತೆಗೆ ಹೊಸ ಸಿನಿಮಾ ಮಾಡಲು ರಾಜಮೌಳಿ ಸಿದ್ಧವಾಗಿದ್ದಾರೆ. ರಾಜಮೌಳಿ ನಿರ್ದೇಶಿಸಲಿರುವ ಸಿನಿಮಾಕ್ಕೆ ಕತೆಯನ್ನು ತಂದೆ ವಿಜಯೇಂದ್ರ ಪ್ರಸಾದ್ ನೀಡಲಿದ್ದಾರೆ. ಸಿನಿಮಾದ ಇತರೆ ಪಾತ್ರವರ್ಗ ಇನ್ನಷ್ಟೆ ಅಂತಿಮವಾಗಬೇಕಿದೆ.