RRR ಚಿತ್ರದ ಯೂನಿಟ್ ಸದಸ್ಯರ ಮೇಲೆ ರಾಜಮೌಳಿ ಗರಂ

ಬಾಹುಬಲಿ ಸಿನಿಮಾ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡುತ್ತಿರುವ ಚಿತ್ರ ಆರ್ ಆರ್ ಆರ್. ಸದ್ಯಕ್ಕೆ ಈ ಹೆಸರಿನಲ್ಲಿ ಶೂಟಿಂಗ್ ಶುರು ಮಾಡಿದ್ದು, ಶೀರ್ಷಿಕೆ ಏನು ಎಂಬುದು ಅಧಿಕೃತವಾಗಿಲ್ಲ.

ರಾಮ್ ಚರಣ್ ತೇಜ ಮತ್ತು ಜ್ಯೂ ಎನ್ ಟಿ ಆರ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದು, ಇದೇ ಮೊದಲ ಸಲ ಇಬ್ಬರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಹೀಗಾಗಿ, ಸೌತ್ ಇಂಡಿಯಾದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಈ ಸಿನಿಮಾ ಕುತೂಹಲ ಹೆಚ್ಚಿಸಿದೆ.

ಆರ್ ಆರ್ ಆರ್ ಸಿನಿಮಾ ಐತಿಹಾಸಿಕ ಚಿತ್ರಕಥೆಯಾಗಿದ್ದು ಬ್ರಿಟಿಷರ ವಿರುದ್ಧ ಹೋರಾಡಿದ ಅಲ್ಲುರಿ ಸೀತಾರಾಮರಾಜು ಮತ್ತು ಕೊಂಮ್ಮರಂ ಭೀಮ್ ಅವರ ಸಾಹಸ ಕಥೆ ತೋರಿಸಲಾಗುತ್ತಿದೆ.

SS Rajamouli Fire On Unit Members

ಬಹಳ ಗೌಪ್ಯವಾಗಿ ಚಿತ್ರೀಕರಣ ಮಾಡುತ್ತಿರುವ ರಾಜಮೌಳಿ ಈಗ ತಮ್ಮ ಯೂನಿಟ್ ತಂಡದ ಮೇಲೆ ಕೋಪ ಮಾಡಿಕೊಂಡಿದ್ದಾರಂತೆ. ಜೂನಿಯರ್ ಎನ್ ಟಿ ಆರ್ ಅವರ ಕೊಂಮ್ಮರಂ ಭೀಮ್ ಗೆಟಪ್ ಲೀಕ್ ಆಗಿದೆ. ಈ ಲುಕ್ನಲ್ಲಿರುವ ಕೆಲವು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನ ಗಮನಿಸಿದ ನಿರ್ದೇಶಕ ರಾಜಮೌಳಿ ಯೂನಿಟ್ ತಂಡದವರನ್ನು ತರಾಟೆಗೆ ತೆಗೆದುಕೊಂಡಿದ್ದಾರಂತೆ. ಸೆಟ್ ಗೆ ಕ್ಯಾಮರಾ ನಿಷೇದ ಮಾಡಲಾಗಿದೆ. ಆದರೂ, ಇಂತಹ ಘಟನೆಗಳು ಯಾಕೆ ನಡೆಯುತ್ತಿದೆ ಎಂದು ಗುಡುಗಿದ್ದಾರಂತೆ.

SS Rajamouli Fire On Unit Members

ರಾಮ್ ಚರಣ್ ತೇಜ, ಜೂನಿಯರ್ ಎನ್ ಟಿ ಆರ್ ನಟಿಸುತ್ತಿರುವ ಈ ಚಿತ್ರದಲ್ಲಿ, ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ಹಾಲಿವುಡ್ ಕಲಾವಿದರು ಇರಲಿದ್ದಾರೆ.

More from Filmibeat

English summary
Junior NTR's komaram bheem look was leaked from RRR movie set. so, director rajamouli upset on unit members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X