For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಏರಿಸಿಕೊಂಡ ನಟ ನಾನಿ: ಈಗೆಷ್ಟು ಪಡೆಯುತ್ತಾರೆ ಹಣ?

  |

  ತೆಲುಗಿನ ನಟ ನಾನಿ ಪೈಸಾ ವಸೂಲ್ ನಟ ಎಂದೇ ತೆಲುಗಿನಲ್ಲಿ ಖ್ಯಾತರು. ನಾನಿ ನಟನೆಯ ಸಿನಿಮಾ ಸೂಪರ್-ಡೂಪರ್ ಹಿಟ್ ಆಗದಿದ್ದರೂ ನಿರ್ಮಾಪಕರ ಜೇಬು ತುಂಬಿಸುವುದು ಖಾತ್ರಿ.

  ಕಮರ್ಶಿಯಲ್ ಸಿನಿಮಾಗಳು ಮಾತ್ರವಲ್ಲದೆ, ಕಥೆ ಆಧಾರಿತ ಪ್ರಯೋಗಾತ್ಮಕ ಸಿನಿಮಾಗಳು, ಬ್ರಿಜ್ ಮಾದರಿಯ ಸಿನಿಮಾಗಳಲ್ಲಿಯೂ ನಟಿಸುತ್ತಾರೆ ನಾನಿ.

  ಮಣಿರತ್ನಂ ಮಾದರಿಯಲ್ಲಿ ನಿರ್ದೇಶಕನಾಗಬೇಕು ಎಂದು ಸಿನಿಮಾ ಉದ್ಯಮಕ್ಕೆ ಬಂದ ನಾನಿ ಆಗಿದ್ದು ಮಾತ್ರ ನಟ. ಆರಂಭದಲ್ಲಿ ಸಿನಿಮಾಗಳಿಗೆ ಕ್ಲ್ಯಾಪ್ ಹೊಡೆಯುತ್ತಿದ್ದ ನಾನಿ ಹಂತಹಂತವಾಗಿ ಬೆಳೆದು ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಾ ನಿಧಾನಕ್ಕೆ ಮೇಲೇರುತ್ತಾ ಬಂದು ಈಗ ಮಾಸ್ ಹೀರೋ ಆಗಿ ನಿಂತಿದ್ದಾರೆ.

  ಸಂಭಾವನೆ ಏರಿಸಿಕೊಂಡಿದ್ದಾರೆ ನಾನಿ

  ಸಂಭಾವನೆ ಏರಿಸಿಕೊಂಡಿದ್ದಾರೆ ನಾನಿ

  ಇದೀಗ ನಟ ನಾನಿ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ ಎಂಬ ಸುದ್ದಿ ತೆಲುಗು ಸಿನಿಮಾರಂಗದಲ್ಲಿ ಗಟ್ಟಿಯಾಗಿ ಹರಿದಾಡುತ್ತಿದೆ. ಹಲವು ಸತತ ಹಿಟ್ ನೀಡಿರುವ ನಾನಿ ತಮ್ಮ ಸಂಭಾವನೆ ಏರಿಸಿಕೊಂಡಿರುವುದರಲ್ಲಿ ದೊಡ್ಡ ಆಶ್ಚರ್ಯವೇನೂ ಇಲ್ಲ.

  ಸಿನಿಮಾ ಒಂದಕ್ಕೆ 11 ಕೋಟಿ ಪಡೆಯುತ್ತಿದ್ದರು

  ಸಿನಿಮಾ ಒಂದಕ್ಕೆ 11 ಕೋಟಿ ಪಡೆಯುತ್ತಿದ್ದರು

  ಈ ಹಿಂದೆ ಸಿನಿಮಾ ಒಂದಕ್ಕೆ 11 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ ನಾನಿ. 2020 ರಲ್ಲಿ ಅವರು ನಟಿಸಿದ 'ವಿ' ಸಿನಿಮಾಕ್ಕೆ 11 ಕೋಟಿ ಪಡೆದಿದ್ದರಂತೆ. ಆದರೆ ಈಗ ಹೊಸ ಸಿನಿಮಾಗಳಿಗೆ ಹೆಚ್ಚಿನ ಸಂಭಾವನೆಯನ್ನು ನಾನಿ ಕೇಳುತ್ತಿದ್ದಾರಂತೆ.

   ಹೊಸ ಸಿನಿಮಾಕ್ಕೆ ಹೆಚ್ಚು ಸಂಭಾವನೆ ಬೇಡಿಕೆ

  ಹೊಸ ಸಿನಿಮಾಕ್ಕೆ ಹೆಚ್ಚು ಸಂಭಾವನೆ ಬೇಡಿಕೆ

  ಇದೀಗ 'ಶ್ಯಾಮ್ ಸಿಂಘ ರಾಯ್' ಸಿನಿಮಾಕ್ಕೆ ಸಹಿ ಮಾಡಿರುವ ನಾನಿ ಈ ಸಿನಿಮಾದಲ್ಲಿ ನಟಿಸಲು 14 ಕೋಟಿ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಅದು ಮಾತ್ರವೇ ಅಲ್ಲದೆ 'ಅಂಟೆ ಸುಂದರಾನಿಕಿ' ಎಂಬ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದು ಅದಕ್ಕೂ ಸಹ 14 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ನಾನಿ.

  Recommended Video

  ರಸ್ತೆ ವಿಚಾರಕ್ಕೆ ಗ್ರಾಮಸ್ಥರೊಡನೆ ಕಚ್ಚಾಡಿಕೊಂಡ ಯಶ್ ತಂದೆ-ತಾಯಿ | Filmibeat Kannada
  ನಾನಿ ಗೆ ಸಾಯಿ ಪಲ್ಲವಿ ನಾಯಕಿ

  ನಾನಿ ಗೆ ಸಾಯಿ ಪಲ್ಲವಿ ನಾಯಕಿ

  ನಾನಿ ಅವರು ಟಕ್ ಜಗದೀಶ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಆ ಸಿನಿಮಾ ಬಿಡುಗಡೆಗೆ ತಯಾರಾಗಿದೆ. 'ಶ್ಯಾಮ್ ಸಿಂಘ ರಾಯ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. ಇವರಿಬ್ಬರೂ ಒಟ್ಟಿಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದು.

  English summary
  Telugu movie actor Nani hiked his remuneration. He taking 14 crore rs for a movie.
  Tuesday, March 9, 2021, 18:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X