For Quick Alerts
  ALLOW NOTIFICATIONS  
  For Daily Alerts

  'ಗಾಡ್‌ಫಾದರ್' Vs 'ದಿ ಘೋಷ್ಟ್': ಚಿರಂಜೀವಿ - ನಾಗಾರ್ಜುನ ನಡುವೆ ದಸರಾ ದಂಗಲ್!

  |

  ಸೂಪರ್ ಸ್ಟಾರ್‌ಗಳ ಎರಡು ಹೈವೋಲ್ಟೇಜ್ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯೋದು ಮಾಮೂಲು. ಈ ವರ್ಷ ದಸರಾಗೆ ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ವರ್ಸಸ್ ಕಿಂಗ್ ನಾಗಾರ್ಜುನ ಫೈಟ್‌ಗೆ ಅಖಾಡ ಸಿದ್ಧವಾಗಿದೆ. ದಸರಾ ಹಬ್ಬದ ಸಂಭ್ರಮದಲ್ಲೇ ಅಕ್ಟೋಬರ್ 5ಕ್ಕೆ 'ಗಾಡ್‌ಫಾದರ್' ಹಾಗೂ 'ದಿ ಘೋಷ್ಟ್' ಸಿನಿಮಾಗಳನ್ನು ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ.

  ಟಾಲಿವುಡ್‌ನಲ್ಲಿ ಮೆಗಾ ಫ್ಯಾಮಿಲಿ ಹಾಗೂ ಅಕ್ಕಿನೇನಿ ಫ್ಯಾಮಿಲಿ ನಡುವೆ ಆತ್ಮೀಯ ಅನುಬಂಧ ಇದೆ. ಚಿರಂಜೀವಿ- ನಾಗಾರ್ಜುನ ಆತ್ಮೀಯ ಸ್ನೇಹಿತರು. ಆದರೆ ಈಗ ಇಬ್ಬರೂ ನಟಿಸಿರುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದಿರುಬದಿರಾಗುತ್ತಿವೆ. ಎರಡು ಕೂಡ ಹೈವೋಲ್ಟೇಜ್ ಆಕ್ಷನ್ ಸಿನಿಮಾಗಳೇ. ಹಾಗಾಗಿ ಸಹಜವಾಗಿಯೇ ಕದನ ಕುತೂಹಲ ಮೂಡಿದೆ. ಸ್ಟಾರ್‌ಗಳ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದರೆ ಯಾವುದಾದರೂ ಒಂದು ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ಎರಡೂ ಸಿನಿಮಾಗಳು ಸೂಪರ್ ಹಿಟ್ ಆಗಿರುವುದು ಬಹಳ ವಿರಳ.

  ಚಿರಂಜೀವಿ ಹಾಗೂ ನಾಗಾರ್ಜುನಗೆ ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. 'ಆಚಾರ್ಯ' ಸೋಲಿನಿಂದ ಎದ್ದು ಬರಲು ಚಿರು ಕಾಯ್ತಿದ್ದಾರೆ. 'ಬಂಗಾರ್ರಾಜು' ಗೆಲುವಿನ ನಂತರ ಮತ್ತೊಂದು ಹಿಟ್ ಮೇಲೆ ನಾಗ್ ಕಣ್ಣಿಟ್ಟಿದ್ದಾರೆ.

  'ಲೂಸಿಫರ್' ರೀಮೆಕ್ 'ಗಾಡ್‌ಫಾದರ್'

  'ಲೂಸಿಫರ್' ರೀಮೆಕ್ 'ಗಾಡ್‌ಫಾದರ್'

  ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ 'ಲೂಸಿಫರ್' ಚಿತ್ರವನ್ನು ನಿರ್ದೇಶಕ ಮೋಹನ್ ರಾಜಾ ತೆಲುಗಿನಲ್ಲಿ ಕಟ್ಟಿಕೊಡುತ್ತಿದ್ದಾರೆ. ಮಾಲಿವುಡ್‌ನಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರಂಜೀವಿ ಪ್ಲೇ ಮಾಡ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್‌ಗಳು ರಿಲೀಸ್ ಆಗಿ ಸದ್ದು ಮಾಡುತ್ತಿದೆ. ವಯಸ್ಸಿಗೆ ತಕ್ಕ ಪಾತ್ರದಲ್ಲಿ ಮೆಗಾಸ್ಟಾರ್ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ.

  'ಲೈಗರ್' ಹೊಡೆತಕ್ಕೆ ಮುಂಬೈ ಮನೆ ಖಾಲಿ ಮಾಡುವ ಸ್ಥಿತಿ ತಲುಪಿದ ಪುರಿ ಜಗನ್ನಾಥ್'ಲೈಗರ್' ಹೊಡೆತಕ್ಕೆ ಮುಂಬೈ ಮನೆ ಖಾಲಿ ಮಾಡುವ ಸ್ಥಿತಿ ತಲುಪಿದ ಪುರಿ ಜಗನ್ನಾಥ್

  'ಗಾಡ್‌ಫಾದರ್' ಚಿರು ಸಲ್ಮಾನ್ ಖಾನ್ ಬಲ

  'ಗಾಡ್‌ಫಾದರ್' ಚಿರು ಸಲ್ಮಾನ್ ಖಾನ್ ಬಲ

  ಆಕ್ಷನ್ ಎಂಟರ್‌ಟೈನರ್ 'ಗಾಡ್‌ಫಾದರ್' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದರೆ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ದಕ್ಷಿಣದ ಭಾಷೆಯಲ್ಲಿ ಇರು ಸಲ್ಲು ಚೊಚ್ಚಲ ಸಿನಿಮಾ. ಚಿರು ಜೊತೆಗಿನ ಸ್ನೇಹಕ್ಕೆ ಕಟ್ಟುಬಿದ್ದು ಭಾಯ್ಜಾನ್ ನಟಿಸಿದ್ದಾರೆ. ಚಿತ್ರ ಹಿಂದಿಗೂ ಡಬ್ ಆಗಿ ಬಿಡುಗಡೆ ಆಗುತ್ತಿದೆ. ನಯನತಾರಾ, ಸತ್ಯದೇವ್, ಸಮುದ್ರ ಖನಿ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.

  ಕಾರ್ತಿಕೇಯ 2 ಅಬ್ಬರಕ್ಕೆ ರಜಿನಿ, ಪ್ರಭಾಸ್ ಸಿನಿಮಾ ಕಲೆಕ್ಷನ್ ದಾಖಲೆಗಳೇ ಉಡೀಸ್!ಕಾರ್ತಿಕೇಯ 2 ಅಬ್ಬರಕ್ಕೆ ರಜಿನಿ, ಪ್ರಭಾಸ್ ಸಿನಿಮಾ ಕಲೆಕ್ಷನ್ ದಾಖಲೆಗಳೇ ಉಡೀಸ್!

  'ದಿ ಘೋಸ್ಟ್' ಆಗಿ ನಾಗ್ ಹವಾ

  'ದಿ ಘೋಸ್ಟ್' ಆಗಿ ನಾಗ್ ಹವಾ

  ಪ್ರವೀಣ್ ಸತ್ತೂರು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ದಿ ಘೋಸ್ಟ್'. ಪವರ್‌ಫುಲ್ ಟೈಟಲ್‌ನಿಂದಲೇ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಚಿತ್ರದಲ್ಲಿ ನಾಗಾರ್ಜುನ ಇಂಟರ್‌ಪೋಲ್ ಆಫೀಸರ್ ವಿಕ್ರಮ್ ಪಾತ್ರದಲ್ಲಿ ನಟಿಸಿರುವುದು ಗೊತ್ತಾಗುತ್ತಿದೆ. ಆತನ ಸಹೋದರಿ ಹಾಗೂ ಆಕೆಯ ಮಗಳನ್ನು ಕೊಲ್ಲಲು ಮಾಫಿಯಾ ಗ್ಯಾಂಗ್ ಮುಂದಾಗುತ್ತದೆ. ಅವರಿಬ್ಬರನ್ನು ರಕ್ಷಿಸಿಕೊಳ್ಳಲು ವಿಕ್ರಮ್ ತನ್ನ ಪ್ರೇಯಸಿ ಜೊತೆ ಸೇರಿ ಅಖಾಡಕ್ಕೆ ಇಳಿಯುವ ಕಥೆ ಸಿನಿಮಾದಲ್ಲಿದೆ.

  ಲಾಂಗ್ ದಸರಾ ವೀಕೆಂಡ್ ಟಾರ್ಗೆಟ್

  ಲಾಂಗ್ ದಸರಾ ವೀಕೆಂಡ್ ಟಾರ್ಗೆಟ್

  ಆಂಧ್ರ, ತೆಲಂಗಾಣದಲ್ಲಿ ದಸರಾ, ವಿಜಯದಶಮಿ ಸಡಗರ ಜೋರಾಗಿ ಇರುತ್ತದೆ. ಅಕ್ಟೋಬರ್ 5 ಬುಧವಾರವೇ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಹಬ್ಬದ ಸಂಭ್ರಮದಲ್ಲಿ 5 ದಿನಗಳ ಲಾಂಗ್‌ ವೀಕೆಂಡ್ ರಜಾ ಸಿಗುವುದರಿಂದ ಸಹಜವಾಗಿಯೇ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬರುವ ಲೆಕ್ಕಾಚಾರ ಇದೆ. ಹಾಗಾಗಿ 'ಗಾಡ್‌ಫಾದರ್' ಮತ್ತು 'ಘೋಷ್ಟ್' ಚಿತ್ರಗಳನ್ನು ಒಂದೇ ದಿನ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಪ್ರೇಕ್ಷಕರಿಗೆ ಇಷ್ಟವಾದರೆ ಎರಡೂ ಸಿನಿಮಾ ನೋಡುತ್ತಾರೆ ಎನ್ನುವ ವಾದವೂ ಇದೆ.

  ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ!ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ!

  ಒಂದು ದಿನದ ಅಂತರದಲ್ಲಿ ಚಿತ್ರಗಳು ರಿಲೀಸ್?

  ಒಂದು ದಿನದ ಅಂತರದಲ್ಲಿ ಚಿತ್ರಗಳು ರಿಲೀಸ್?

  ಎರಡೂ ಸಿನಿಮಾಗಳನ್ನು ಅಕ್ಟೋಬರ್ 5ಕ್ಕೆ ರಿಲೀಸ್ ಮಾಡಿದರೆ ಯಾವುದಾದರೂ ಒಂದು ಚಿತ್ರಕ್ಕೆ ಹೊಡೆತ ಬೀಳುವ ಆತಂಕ ಇದೆ. ಆದರೆ 'ಗಾಡ್‌ಫಾದರ್' ಸಿನಿಮಾ ರಿಲೀಸ್ ಡೇಟ್ ಬದಲಿಸಲು ನಿರ್ಮಾಪಕರು ಸಿದ್ಧರಿಲ್ಲ. ಒಂದು ದಿನ ಹಿಂದು ಮುಂದು ಸಿನಿಮಾಗಳನ್ನು ರಿಲೀಸ್ ಮಾಡುವುದರಿಂದ ಕೊಂಚಮಟ್ಟಿಗೆ ಬಾಕ್ಸಾಫೀಸ್ ಕ್ಲ್ಯಾಶ್ ತಡೆಯಬಹುದು ಎನ್ನುವ ಚರ್ಚೆ ಈಗ ನಡೀತಿದೆ.

  English summary
  This Dussehra it will be Chiranjeevi’s 'God Father' Vs Nagarjuna’s 'The Ghost' at the box office. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X