For Quick Alerts
  ALLOW NOTIFICATIONS  
  For Daily Alerts

  ನಟ ಮೋಹನ್ ಬಾಬು ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ ಆಗಂತುಕರು

  |

  ತೆಲುಗಿನ ಖ್ಯಾತ ನಟ ಮೋಹನ್ ಬಾಬು ಮನೆಗೆ ನುಗ್ಗಿದ ಅಗಂತುಕ ಗುಂಪೊಂದು ಕೊಲ್ಲುವುದಾಗಿ ಬೆದರಿಕೆ ಒಡ್ಡಿದೆ.

  ಶಂಶಾಬಾದ್ ವಿಮಾನ ನಿಲ್ದಾಣದ ಬಳಿ ಇರುವ ಮೋಹನ್ ಬಾಬು ನಿವಾಸಕ್ಕೆ ಶನಿವಾರ ರಾತ್ರಿವೇಳೆ ನುಗ್ಗಿದ ಆಗಂತುಕರ ಗುಂಪೊಂದು ಮನೆಯಲ್ಲಿ ದಾಂಧಲೆ ನಡೆಸಿದ್ದಲ್ಲದೆ, ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದೆ.

  ನಾಲ್ವರು ಅಪರಿಚಿತರು ಇನ್ನೋವಾ ಕಾರಿನಲ್ಲಿ ಮೋಹನ್ ಬಾಬು ನಿವಾಸದ ಗೇಟು ಗುದ್ದಿಕೊಂಡು ಒಳಗೆ ಬಂದಿದ್ದು, ಮನೆ ಪ್ರವೇಶಿಸಿ ದಾಂಧಲೆ ನಡೆಸಿ ಮೋಹನ್ ಬಾಬು ಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

  ಅಪರಿಚಿತರ ಪ್ರವೇಶ ಹಾಗೂ ಬೆದರಿಕೆಯಿಂದ ಕಂಗಾಲಾದ ಮೋಹನ್ ಬಾಬು ಕುಟುಂಬ, ಆಗಂತುಕರು ಹೋದ ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.

  ಕಾರಿನ ಸಂಖ್ಯೆ ಕ್ಯಾಮೆರಾದಲ್ಲಿ ದಾಖಲು

  ಕಾರಿನ ಸಂಖ್ಯೆ ಕ್ಯಾಮೆರಾದಲ್ಲಿ ದಾಖಲು

  ಅಪರಿಚಿತರು AP 31 AN 0004 ಸಂಖ್ಯೆಯ ಕಾರಿನಲ್ಲಿ ಬಂದಿದ್ದಾಗಿ ಗೊತ್ತಾಗಿದೆ. ಈ ಕಾರು ವಿಜಯಲಕ್ಷ್ಮಿ ಎಂಬ ಮಹಿಳೆಯ ಹೆಸರಿನಲ್ಲಿ ನೊಂದಣಿ ಆಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿ ಬಂದಿದ್ದ ಆ ನಾಲ್ವರು ಯಾರೆಂಬುದು ಗೊತ್ತಾಗಿಲ್ಲ.

  ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ

  ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ

  ಘಟನೆ ಕುರಿತು ಮೋಹನ್ ಬಾಬು ಕುಟುಂಬ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವ ವಿಷಯಕ್ಕೆ ಬೆದರಿಕೆ ಹಾಕಲಾಗಿದೆ. ಹಳೆಯ ಜಗಳ ಈ ಬೆದರಿಕೆಗೆ ಕಾರಣವೇ ತಿಳಿದು ಬಂದಿಲ್ಲ. ಮೋಹನ್ ಬಾಬು ಕುಟುಂಬ ಮೌನವಾಗಿರುವುದು ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

  ಕಾರಿನ ಸಂಖ್ಯೆ ಆಧರಿಸಿ ತನಿಖೆ

  ಕಾರಿನ ಸಂಖ್ಯೆ ಆಧರಿಸಿ ತನಿಖೆ

  ಘಟನೆ ಬಗ್ಗೆ ಮೋಹನ್ ಬಾಬು ಅವರ ಕುಟುಂಬ ಸದಸ್ಯರು ನಗರದ ಹೊರವಲಯದಲ್ಲಿರುವ ಪಹಡಿ ಷರೀಫ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರಿನ ಸಂಖ್ಯೆಯನ್ನು ಆಧರಿಸಿ ಕೃತ್ಯ ಎಸಗಿದವರನ್ನು ಬಂಧಿಸುವ ಯತ್ನದಲ್ಲಿದ್ದಾರೆ. ರಾಜಕೀಯ ಪ್ರೇರೇಪಿತವೇ ಅಥವಾ ಯಾರಾದರೂ ಕಿಡಿಗೇಡಿಗಳ ಕೃತ್ಯವೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ ರಾಜಕೀಯ ಎರಡರಲ್ಲೂ ಖ್ಯಾತರು ಮೋಹನ್ ಬಾಬು

  ಸಿನಿಮಾ ರಾಜಕೀಯ ಎರಡರಲ್ಲೂ ಖ್ಯಾತರು ಮೋಹನ್ ಬಾಬು

  ನಟ ಮೋಹನ್ ಬಾಬು ಸಿನಿಮಾ, ರಾಜಕೀಯ ಎರಡರಲ್ಲೂ ಖ್ಯಾತರು. ತೆಲುಗು ಸಿನಿಮಾ ಉದ್ಯಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ನೇಹಿತರನ್ನು ಹೊಂದಿರುವ ಮೋಹನ್ ಬಾಬು, ಕೆಲವು ವೈರಿಗಳನ್ನೂ ಹೊಂದಿದ್ದಾರೆ. ಮೋಹನ್ ಬಾಬು, ಅಂಬರೀಶ್ ಹಾಗೂ ರಜನೀಕಾಂತ್ ಅವರ ಆಪ್ತ ಮಿತ್ರರೂ ಹೌದು.

  English summary
  Unknown four people trespassed actor Mohan Babu's house and gave death threat to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X