For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ 'ಆಚಾರ್ಯ' ಸೆಟ್‌ಗೆ ಭೇಟಿ ನೀಡಿದ ಸರ್ಪ್ರೈಸ್ ಅತಿಥಿ

  |

  ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ರಾಜಮಂಡ್ರಿಯಲ್ಲಿ ಸಾಗುತ್ತಿದೆ. ಕೊರಟಲಾ ಶಿವ ನಿರ್ದೇಶನದ ಆಚಾರ್ಯ ಭಾರಿ ನಿರೀಕ್ಷೆಗಳೊಂದಿಗೆ ತಯಾರಾಗುತ್ತಿದೆ.

  ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರು ಆಚಾರ್ಯ ಸಿನಿಮಾದಲ್ಲಿ ವಿಶೇಷವಾದ ಪಾತ್ರ ನಿಭಾಯಿಸುತ್ತಿದ್ದಾರೆ. ಇದೀಗ, ಆಚಾರ್ಯ ಸೆಟ್‌ಗೆ ರಾಮ್ ಚರಣ್ ಪತ್ನಿ ಉಪಾಸನ ಭೇಟಿ ನೀಡಿದ್ದಾರೆ.

  ರಾಜಮಂಡ್ರಿ ಏರ್‌ಪೋರ್ಟ್‌ನಲ್ಲಿ ಉಪಾಸನ ಬಂದಿಳಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಟಾಪ್‌ನಲ್ಲಿ ಎಂಟ್ರಿ ಕೊಟ್ಟ ಉಪಾಸನ ಮುಖಕ್ಕೆ ಮಾಸ್ಕ್ ಧರಿಸಿದ್ದರು. ಸ್ಟೈಲಿಶ್ ಕನ್ನಡಕ ಹಾಕಿದ್ದರು.

  ವಿದೇಶಿ ನಟಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ರಾಮ್ ಚರಣ್ ತೇಜ

  ಚಿರಂಜೀವಿ ಜೊತೆ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಚರಣ್ ತೇಜಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  ಕೊರಟಲಾ ಶಿವ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ನಿರಂಜನ್ ರೆಡ್ಡಿ ಮತ್ತು ರಾಮ್ ಚರಣ್ ಬಂಡವಾಳ ಹಾಕಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ ಆಚಾರ್ಯ ಸಿನಿಮಾ ತೆರೆಕಾಣಲಿದೆ.

  ಇನ್ನುಳಿದಂತೆ ರಾಮ್ ಚರಣ್ ತೇಜ ಎಸ್‌ಎಸ್‌ ರಾಜಮೌಳಿ ಜೊತೆ ಆರ್‌ಆರ್‌ಆರ್ ಸಿನಿಮಾ ಮಾಡುತ್ತಿದ್ದಾರೆ. ಶಂಕರ್ ನಿರ್ದೇಶನದ ಹೊಸ ಪ್ರಾಜೆಕ್ಟ್‌ನಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಶ್ಮಿಕಾ ಕಾಲ್ ಶೀಟ್ ಗಾಗಿ ಕಾಯ್ತಿರೋ ರಾಮಚರಣ್ | RamCharan | Rashmika Mandanna | Filmibeat Kannada
  English summary
  Ram charan teja wife Upasana Kaminen will be visiting the sets of Acharya. the movie starring chiranjeevi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X