'ನಟನಾಗಲು ನೀವೇ ಸ್ಪೂರ್ತಿ': ಉಪೇಂದ್ರ ಮೇಲೆ ತೆಲುಗು ನಟನ ಅಭಿಮಾನ
ಉಪೇಂದ್ರ ಗೆ ನಮ್ಮ ರಾಜ್ಯದಲ್ಲಿ ಮಾತ್ರದಲ್ಲಿ ಮಾತ್ರವಲ್ಲ, ನೆರೆಯ ತೆಲುಗು ರಾಜ್ಯಗಳಲ್ಲಿಯೂ ಸಹ ದೊಡ್ಡ ಅಭಿಮಾನಿ ಬಳಗವೇ ಇದೆ.
ಈಗಾಗಲೇ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ಉಪೇಂದ್ರ. ಈಗಲೂ ವರುಣ್ ತೇಜ್ ನಟನೆಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ತುಸು ಹೆಚ್ಚೇ ಇದ್ದಾರೆ.
ಆಂಧ್ರ, ತೆಲಂಗಾಣದ ಉಪೇಂದ್ರ ಅಭಿಮಾನಿಗಳಲ್ಲಿ ಕೇವಲ ಸಿನಿಮಾ ಪ್ರೇಕ್ಷಕರು ಮಾತ್ರವಿಲ್ಲ. ನಟರೂ ಸಹ ಇದ್ದಾರೆ. ಹೌದು, ತೆಲುಗಿನಲ್ಲಿ ತಮ್ಮದೇ ಮಾದರಿಯ ಸಿನಿಮಾಗಳಿಂದ ಖ್ಯಾತರಾಗಿರುವ ಸಂಪೂರ್ಣೇಶ್ ಬಾಬು ನಟ ಉಪೇಂದ್ರ ಅವರ ದೊಡ್ಡ ಅಭಿಮಾನಿಯಂತೆ.

ಉಪೇಂದ್ರ ಗೆ ಶುಭಾಶಯ ಕೋರಿದ ತೆಲುಗು ನಟ
ಹೌದು, ಈ ಬಗ್ಗೆ ಸ್ವತಃ ಅವರೇ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ನಿನ್ನೆ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಕೆ ಸಹ ಮಾಡಿದ್ದಾರೆ. ವಿಶೇಷವೆಂದರೆ, ತೆಲುಗು ಭಾಷಿಕರಾಗಿದ್ದರೂ ಸಹ ಅವರು ಕನ್ನಡದಲ್ಲಿಯೇ ಶುಭಾಶಯ ಕೋರಿದ್ದಾರೆ.

ನಾನು ನಾಯಕನಾಗಲು ಉಪೇಂದ್ರ ಸ್ಪೂರ್ತಿ: ಸಂಪೂರ್ಣೇಶ್
ಉಪೇಂದ್ರ ಅವರೊಟ್ಟಿಗೆ ತಾವಿರುವ ಚಿತ್ರ ಪ್ರಕಟಿಸಿರುವ ಸಂಪೂರ್ಣೇಶ್ ಬಾಬು, 'ನಾನು ಕಥಾನಾಯಕನಾಗಲು ಸ್ಫೂರ್ತಿಯಾದ ನಟ. ಹಾಗೂ ನನಗೆ ತುಂಬ ಇಷ್ಟವಾದ ನಾಯಕರಾದ ಉಪೇಂದ್ರ ಅವರಿಗೆ ನನ್ನ ಹೃದಯರ್ಪೊವಕ ಜನ್ಮದಿನ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಅತಿರೇಕದ ದೃಶ್ಯಗಳ ಮೂಲಕ ಹಾಸ್ಯ
ಸಂಪೂರ್ಣೇಶ್ ಬಾಬು ತಮ್ಮದೇ ಮಾದರಿಯ ಭಿನ್ನವಾದ ಸಿನಿಮಾಗಳಿಗೆ ಖ್ಯಾತರು. ಹಿಟ್ ಸಿನಿಮಾಗಳ ದೃಶ್ಯಗಳನ್ನು ತೆಗೆದುಕೊಂಡು ಅವುಗಳನ್ನು ವ್ಯಂಗ್ಯವಾಗಿ ಅಥವಾ ಅತಿರೇಕ ಎನಿಸುವಂತೆ ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ. ಸಂಪೂರ್ಣೇಶ್ ಬಾಬು ತೆಲುಗಿನ ಉತ್ತಮ ಹಾಸ್ಯನಟರಲ್ಲೊಬ್ಬರು.
Recommended Video

ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ಸಂಪೂರ್ಣೇಶ್ ಬಾಬು
ಹಿಟ್ ಸಿನಿಮಾಗಳನ್ನು ವ್ಯಂಗ್ಯ ಮಾಡುವ ಕಾರಣ, ನಾಯಕ ನಟರ ಅಭಿಮಾನಿಗಳ ಕೆಂಗಣ್ಣಿಗೆ ಸಂಪೂರ್ಣೇಶ್ ಬಾಬು ಗುರಿಯಾಗುತ್ತಾರೆ. ಆದರೆ ಅವರಿಗೆ ಅಭಿಮಾನಿಗಳೇನು ಕಡಿಮೆ ಇಲ್ಲ. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನೇ ಹೊಂದಿದ್ದಾರೆ ಸಂಪೂರ್ಣೇಶ್ ಬಾಬು.


Click it and Unblock the Notifications











