'ಬಾಹುಬಲಿ-2' ದಾಖಲೆ ಮುರಿದ ಪವನ್ ಕಲ್ಯಾಣ್ 'ವಕೀಲ್ ಸಾಬ್'

ಮೂರು ವರ್ಷದ ನಂತರ ಪವರ್ ಸ್ಟಾರ್ ಪವನ್ ಕಲ್ಯಾಣ್ ಟಾಲಿವುಡ್‌ಗೆ ಮರಳಿದ್ದಾರೆ. ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿದ 'ವಕೀಲ್ ಸಾಬ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪುನರಾಗಮಿಸುತ್ತಿದ್ದಾರೆ.

ಏಪ್ರಿಲ್ 9 ರಂದು ವಕೀಲ್ ಸಾಬ್ ಸಿನಿಮಾ ತೆರೆಕಾಣುತ್ತಿದೆ. ಅದಕ್ಕೂ ಮುಂಚೆ ಟ್ರೈಲರ್ ರಿಲೀಸ್ ಆಗಿದ್ದು, ತೆಲುಗು ಇಂಡಸ್ಟ್ರಿಯ ಹಳೆ ದಾಖಲೆಗಳು ಪುಡಿ ಪುಡಿ ಮಾಡಿದೆ ಎಂದು ವರದಿಯಾಗಿದೆ. ಅದರಲ್ಲೂ ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಬಾಹುಬಲಿ 2 ಟ್ರೈಲರ್ ಹೆಸರಿನಲ್ಲಿದ್ದ ಆಲ್ ಟೈಂ ದಾಖಲೆಯನ್ನು ವಕೀಲ್ ಸಾಬ್ ಮುರಿದಿದೆ. ರಾಜಮೌಳಿ ದಾಖಲೆ ಹಿಂದಿಕ್ಕಲು ಪವರ್ ಸ್ಟಾರ್ ಮತ್ತೆ ಬರಬೇಕಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿ ಕೊಂಡಾಡುತ್ತಿದ್ದಾರೆ.

 Vakeel Saab Trailer Breaks Baahubali 2 Trailer Record

ಲೈಕ್ಸ್ ವಿಚಾರದಲ್ಲಿ ಬಾಹುಬಲಿ 2 ಟ್ರೈಲರ್ 24 ಗಂಟೆಯಲ್ಲಿ 497 K ಲೈಕ್ ಪಡೆದಿತ್ತು. ಇದೀಗ, ವಕೀಲ್ ಸಾಬ್ ಟ್ರೈಲರ್ 24 ಗಂಟೆಯಲ್ಲಿ 1 ಮಿಲಿಯನ್ ಲೈಕ್ ಸಂಪಾದಿಸಿದೆ. ಲೈಕ್ಸ್ ವಿಚಾರದಲ್ಲಿ ಬಾಹುಬಲಿಯನ್ನು ಹಿಂದಿಕ್ಕಿ ವಕೀಲ್ ಸಾಬ್ ದಾಖಲೆ ನಿರ್ಮಿಸಿದೆ.

ಆದರೆ, ಟ್ರೈಲರ್ ವಿಚಾರದಲ್ಲಿ ಬಾಹುಬಲಿ ದಾಖಲೆ ಹಾಗೆ ಉಳಿದಿದೆ. ರಿಯಲ್ ಟೈಂ ವೀಕ್ಷಣೆಯಲ್ಲಿ ಬಾಹುಬಲಿ 2 ಟ್ರೈಲರ್ 24 ಗಂಟೆಯಲ್ಲಿ 21.81 ಮಿಲಿಯನ್ ವೀಕ್ಷಣೆ ಕಂಡಿದೆ. ವಕೀಲ್ ಸಾಬ್ ಟ್ರೈಲರ್ 18.05 ಮಿಲಿಯನ್ ವೀಕ್ಷಣೆ ಕಂಡಿದೆ. ಹಾಗಾಗಿ, ಬಾಹುಬಲಿ ನಂತರದ ಎರಡನೇ ಸ್ಥಾನದಲ್ಲಿ ಪವನ್ ಸಿನಿಮಾ ಇದೆ.

ಇನ್ನುಳಿದಂತೆ ವೇಣು ಶ್ರೀರಾಮ್ ನಿರ್ದೇಶನದ ವಕೀಲ್ ಸಾಬ್ ಚಿತ್ರಕ್ಕೆ ಬೋನಿ ಕಪೂರ್, ದಿಲ್ ರಾಜು ಬಂಡವಾಳ ಹಾಕಿದ್ದಾರೆ. ನಿವೇತಾ ಥಾಮಸ್, ಅಂಜಲಿ, ಅನನ್ಯ ನಾಗಲ್ಲ, ಪ್ರಕಾಶ್ ರಾಜ್, ಶ್ರುತಿ ಹಾಸನ್, ನರೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಹಿಂದಿಯ ಪಿಂಕ್ ಚಿತ್ರದ ತೆಲುಗು ರೀಮೇಕ್ ಇದಾಗಿದೆ.

More from Filmibeat

English summary
Pawan Kalyan Starrer Vakeel Saab movie trailer breaks Baahubali 2 trailer record.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X