For Quick Alerts
  ALLOW NOTIFICATIONS  
  For Daily Alerts

  'ದೃಶ್ಯಂ-2' ಚಿತ್ರೀಕರಣ ಮುಗಿಸಿದ ತೆಲುಗು ನಟ ವೆಂಕಟೇಶ್

  |

  ಮಲಯಾಳಂ ಭಾಷೆಯಲ್ಲಿ ಸೂಪರ್ ಹಿಟ್ ಆದ ದೃಶ್ಯಂ 2' ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದ್ದ ವಿಷಯ ತಿಳಿದಿದೆ. ಫೆಬ್ರವರಿಯಲ್ಲಿ ದೃಶ್ಯಂ 2 ಘೋಷಣೆಯಾಗಿತ್ತು. ನಟ ವೆಂಕಟೇಶ್ ಅವರು ಈ ಚಿತ್ರದಲ್ಲೂ ನಾಯಕರಾಗಿ ಮುಂದುವರಿಯುತ್ತಿದ್ದಾರೆ ಎಂದು ನಿರ್ದೇಶಕ ಜಿತು ಜೋಸೆಫ್ ಮಾಹಿತಿ ನೀಡಿದ್ದರು.

  ಇದೀಗ, ತೆಲುಗು ಭಾಷೆಯಲ್ಲಿ ದೃಶ್ಯಂ 2 ಚಿತ್ರೀಕರಣ ಮುಗಿದಿದೆ. ವೆಂಕಟೇಶ್ ಅವರ ಭಾಗದ ಎಲ್ಲಾ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯವಾಗಿದೆ ಎಂದು ತಿಳಿದು ಬಂದಿದೆ.

  ಮಲಯಾಳಂ ಬಳಿಕ ತೆಲುಗಿನಲ್ಲಿ ತಯಾರಾಗುತ್ತಿದೆ 'ದೃಶ್ಯಂ-2'ಮಲಯಾಳಂ ಬಳಿಕ ತೆಲುಗಿನಲ್ಲಿ ತಯಾರಾಗುತ್ತಿದೆ 'ದೃಶ್ಯಂ-2'

  ಮಾರ್ಚ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿದ್ದ ದೃಶ್ಯಂ 2 ತಂಡ ಸುಮಾರು 45 ದಿನದಲ್ಲಿ ಶೂಟಿಂಗ್ ಮುಗಿಸಿದೆ. ಚಿತ್ರೀಕರಣ ಮುಗಿದ ಬಳಿಕ ಫೋಟೋವೊಂದು ಬಹಿರಂಗವಾಗಿದ್ದು, ಚಿತ್ರದ ಪ್ರಮುಖ ಕಲಾವಿದರು ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

  ದೃಶ್ಯಂ 2ನೇ ಭಾಗದಲ್ಲಿ ವೆಂಕಟೇಶ್ ಜೊತೆ ಮೀನಾ, ಎಸ್ತೆರ್ ಅನು ಮುಂದುವರೆದಿದ್ದಾರೆ. 2014ರಲ್ಲಿ ಬಂದಿದ್ದ ದೃಶ್ಯಂ ಚಿತ್ರಕ್ಕೆ ತೆಲುಗಿನಲ್ಲಿ ಶ್ರೀಪ್ರಿಯ ನಿರ್ದೇಶನ ಮಾಡಿದ್ದರು. ಇದೀಗ, ದೃಶ್ಯಂ 2ಕ್ಕೆ ಮೂಲ ನಿರ್ದೇಶಕ ಜಿತು ಜೋಸೆಫ್ ಅವರೇ ಆಕ್ಷನ್ ಕಟ್ ಹೇಳಿದ್ದಾರೆ.

  ಇನ್ನು ಕನ್ನಡದಲ್ಲೂ ದೃಶ್ಯಂ 2 ಸಿನಿಮಾದ ರಿಮೇಕ್ ಘೋಷಣೆಯಾಗಿದೆ. ನಿರ್ದೇಶಕ ಪಿ ವಾಸು ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಮುಂದುವರಿದ ಭಾಗದಲ್ಲಿ ನಟಿಸುತ್ತಿದ್ದಾರೆ.

  ಆ ಕಡೆ ಹಿಂದಿಯಲ್ಲೂ ಅಜಯ್ ದೇವಗನ್ ನಾಯಕತ್ವದಲ್ಲಿ ದೃಶ್ಯಂ 2 ಸಿನಿಮಾ ಶುರುವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಇನ್ನುಳಿದಂತೆ ವೆಂಕಟೇಶ್ ಅಭಿನಯದ 'ನಾರಪ್ಪ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಗೆ 'ಎಫ್-3' ಸಿನಿಮಾ ಘೋಷಣೆಯಾಗಿದೆ. ಈ ನಡುವೆ ದೃಶ್ಯಂ 2 ಚಿತ್ರವೂ ತೆರೆಗೆ ಬರಲು ತಯಾರಿ ನಡೆಸಿದೆ.

  English summary
  Telugu actor Venkatesh Completes Drishyam 2 Telugu Shooting In Just 45 Days.
  Thursday, April 15, 2021, 17:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X