For Quick Alerts
  ALLOW NOTIFICATIONS  
  For Daily Alerts

  "ಪವನ್ ಅಂದ್ರೆ ಇಷ್ಟ.. ಆದ್ರೆ ಜಗನ್‌ಗೆ ನನ್ನ ವೋಟ್: ವಿಶಾಲ್ ಹೇಳಿಕೆಗೆ ಜನಸೇನಾನಿ ಫ್ಯಾನ್ಸ್ ಗರಂ

  |

  ತಮಿಳು ನಟ ವಿಶಾಲ್ 'ಲಾಠಿ' ಹಿಡಿದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದರ್ಬಾರ್ ನಡೆಸೋಕೆ ಮುಂದಾಗಿದ್ದಾರೆ. ಈ ವಾರ ಈ ಆಕ್ಷನ್ ಎಂಟರ್‌ಟೈನರ್‌ 'ಲಾಠಿ' ತೆರೆಗಪ್ಪಳಿಸ್ತಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ವಿಶಾಲ್ ಬ್ಯುಸಿಯಾಗಿದ್ದಾರೆ.

  'ಲಾಠಿ' ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗ್ತಿದೆ. ಆಂಧ್ರ, ತೆಲಂಗಾಣದಲ್ಲಿ ವಿಶಾಲ್‌ಗೆ ಒಳ್ಳೆ ಕ್ರೇಜ್ ಕೂಡ ಇದೆ. ಇನ್ನು ಸಿನಿಮಾ ಪ್ರಚಾರದ ವೇಳೆ ಪಾಲಿಟಿಕ್ಸ್ ಕುರಿತು ಮಾತನಾಡಿದ್ದಾರೆ. ಆಂಧ್ರ ಸಿಎಂ ವೈ.ಎಸ್‌ ಜಗನ್ ಮೋಹನ್ ರೆಡ್ಡಿ ಅಂದರೆ ಅಪಾರ ಪ್ರೀತಿ ಎಂದು ಹೇಳಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ನನ್ನ ನೆಚ್ಚಿನ ನಟ ಎಂದು ಕೂಡ ವಿಶಾಲ್ ಹೇಳಿದ್ದಾರೆ. ಆದರೆ ಪವರ್ ಸ್ಟಾರ್ ಹೆಸರನ್ನು ವಿಶಾಲ್ ತಮ್ಮ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ಧಾರೆ ಎನ್ನುವ ಆರೋಪ ಶುರುವಾಗಿದೆ.

  'ಖುಷಿ' ಸುದ್ದಿ ಬಂದೇಬಿಡ್ತು: ಹೊಸ ವರ್ಷಕ್ಕೆ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್'ಖುಷಿ' ಸುದ್ದಿ ಬಂದೇಬಿಡ್ತು: ಹೊಸ ವರ್ಷಕ್ಕೆ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್

  ಆಂಧ್ರ ಸಿಎಂ ಜಗನ್ ಹಾಗೂ ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ರಾಜಕೀಯ ಬದ್ಧ ವೈರಿಗಳು. ಇಬ್ಬರ ನಡುವೆ ಆಗಿಂದಾಗ್ಗೆ ವಾಕ್ಸಮರ ಕೂಡ ನಡೆಯುತ್ತಲೇ ಇರುತ್ತೆ. ಹೀಗಿರುವಾಗ ವಿಶಾಲ್ ಹೇಳಿಕೆ ಸಹಜವಾಗಿಯೇ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಕೆರಳಿಸಿದೆ.

  ಪವನ್ ಅಂದ್ರೆ ಇಷ್ಟ: ವಿಶಾಲ್

  ಪವನ್ ಅಂದ್ರೆ ಇಷ್ಟ: ವಿಶಾಲ್

  ಮಾಧ್ಯಮಗಳ ಜೊತೆ ಮಾತನಾಡಿರುವ ವಿಶಾಲ್ "ಪವನ್ ಕಲ್ಯಾಣ್‌ ನನಗೆ ಬಹಳ ಇಷ್ಟ. ಯಾಕಂದರೆ ಅವ್ರು ಚಿತ್ರರಂಗಕ್ಕೆ ಬರುವುದಕ್ಕು ಮೊದಲಿನಿಂದಲೇ ನನಗೆ ಗೊತ್ತು. ನಮ್ಮ ತಂದೆ ಹಾಗೂ ಚಿರಂಜೀವಿ ಸೇರಿ 'ಎಸ್‌ಪಿ ಪರಶು ರಾಮ್' ಒಟ್ಟಿಗೆ ನಟಿಸಿದ್ದರು. ಆಗಲೇ ನಾನು ಪವನ್‌ನ ನೋಡಿದ್ದೆ. ಆ ನಂತರ ಅವರ ಕ್ರೇಜ್, ಆ ಯೂನಿಕ್ ಸ್ಟೈಲ್, ಥಿಯೇಟರ್‌ನಲ್ಲಿ ಪವನ್ ಸಿನಿಮಾ ಅಂದ್ರೆ ಹಬ್ಬದಂತೆ ಇರುತ್ತದೆ".

  ಐ ಲವ್ ಜಗನ್: ವಿಶಾಲ್

  ಐ ಲವ್ ಜಗನ್: ವಿಶಾಲ್

  "ಜಗನ್‌ ಮೋಹನ್ ಬಗ್ಗೆ ಹೇಳಬೇಕು ಅಂದ್ರೆ, ರಾಜಕೀಯವಾಗಿ ಜಗನ್ ಅಂದರೆ ನನಗೆ ಬಹಳ ಇಷ್ಟ, ಸೀರಿಯಸ್ ಆಗಿ ಹೇಳ್ತಿದ್ದೀನಿ. ರಾಜಕೀಯವಾಗಿ ಯಾವ ಕಡೆ ಅಂದರೆ ಜಗನ್‌ಗೆ ನನ್ನ ಬೆಂಬಲ. ಸಿನಿಮಾ ಬರೀ ಒಂದು ಉದ್ಯಮ. ರಾಜಕೀಯ ಉದ್ಯಮ ಅಲ್ಲ. ರಾಜಕೀಯ ಅಂದರೆ ಸೇವೆ. ಜನರಿಗೆ ಸೇವೆ ಮಾಡುವ ಫ್ಲಾಟ್‌ಫಾರ್ಮ್ ಇದು" ಎಂದು ಹೇಳಿದ್ದಾರೆ.

  ವಿಶಾಲ್ ಮೇಲೆ ಪವನ್ ಫ್ಯಾನ್ಸ್ ಗರಂ

  ವಿಶಾಲ್ ಮೇಲೆ ಪವನ್ ಫ್ಯಾನ್ಸ್ ಗರಂ

  ಪವನ್ ಕಲ್ಯಾಣ್ ಅಂದರೆ ಇಷ್ಟ ಎಂದು ಹೇಳಿ ಜಗನ್‌ಗೆ ನನ್ನ ವೋಟ್ ಎಂದಿರುವ ವಿಶಾಲ್ ಮೇಲೆ ಪವನ್ ಅಭಿಮಾನಿಗಳಿಗೆ ಗರಂ ಆಗಿದ್ದಾರೆ. ನೀವು ಕೂಡ ಜಗನ್ ಸಮುದಾಯದವರು ಎನ್ನುವ ಕಾರಣಕ್ಕೆ ಅವರಿಗೆ ವೋಟ್ ಹಾಕುತ್ತೀನಿ ಎನ್ನುತ್ತೀರಾ. ಅದರಲ್ಲಿ ನಮಗೆ ಬೇಸರ ಇಲ್ಲ. ಆದರೆ ಒಂದ್ಕಡೆ ಪವನ್ ಇಷ್ಟ ಎನ್ನುತ್ತೀರಾ? ಮತ್ತೊಂದು ಕಡೆ ಜಗನ್‌ಗೆ ನನ್ನ ಬೆಂಬಲ ಎನ್ನುತ್ತೀರಾ? ಇದು ಯಾವ ನ್ಯಾಯ ಎನ್ನುತ್ತಿದ್ದಾರೆ. ನಿಮ್ಮ ಸಿನಿಮಾ ಪ್ರಚಾರಕ್ಕಾಗಿ ಪವನ್ ಹೆಸರು ಬಳಸಿಕೊಳ್ಳುತ್ತೀದ್ದೀರಾ? ಎಂದು ಕೇಳುತ್ತಿದ್ದಾರೆ.

  ಈ ವಾರ 'ಲಾಠಿ' ರಿಲೀಸ್

  ಈ ವಾರ 'ಲಾಠಿ' ರಿಲೀಸ್

  ವಿನೋದ್ ಕುಮಾರ್ ನಿರ್ದೇಶನದ 'ಲಾಠಿ' ಸಿನಿಮಾ ನಾಳೆ(ಡಿ.22) ಬಿಡುಗಡೆಯಾಗುತ್ತಿದೆ. ಇದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು ವಿಶಾಲ್ ಜಬರ್ದಸ್ತ್‌ ಆಕ್ಷನ್ ಸೀಕ್ವೆನ್ಸ್ ಕಿಕ್ ಕೊಡಲಿದೆ. ಸುನೈನಾ ನಾಯಕಿಯಾಗಿ ಚಿತ್ರದಲ್ಲಿ ಮಿಂಚಿದ್ದಾರೆ. ತಮ್ಮ ಸಿನಿಮಾಗಳಲ್ಲೇ ಬ್ಯುಸಿಯಾಗಿರುವ ವಿಶಾಲ್, ಇತ್ತೀಚೆಗೆ ದಳಪತಿ ವಿಜಯ್ ಜೊತೆ ಹೊಸ ಸಿನಿಮಾದಲ್ಲಿ ನಟಿಸೋಕೆ ನಿರಾಕರಿಸಿದ್ದರು.

  English summary
  Vishal Interesting Comments about Pawan Kalyan And Jagan Mohan Reddy. He has commented about his liking for Jagan and also admiration towards Pawan Kalyan. know more.
  Wednesday, December 21, 2022, 13:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X