Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಮಂತಾಳ ಈ ಬಿಕಿನಿಯ ಬೆಲೆ ಎಷ್ಟು ಗೊತ್ತೆ? ಪ್ರಚಾರಕ್ಕೆ ಪಡೆದ ಸಂಭಾವನೆ ಅಷ್ಟಿಷ್ಟಲ್ಲ!
ವಿಚ್ಛೇಧನದ ಬಳಿಕ ಸಮಂತಾ ಪೂರ್ಣವಾಗಿ ವೃತ್ತಿಯ ಕಡೆಗೆ ಗಮನಹರಿಸಿದ್ದಾರೆ. ವಿವಾಹವಾದ ಬಳಿಕ ಪಾತ್ರಗಳ ಆಯ್ಕೆಗೆ ಹಾಕಿಕೊಂಡಿದ್ದ ಬೇಲಿಯನ್ನು ವಿಚ್ಛೇಧನದ ಬಳಿಕ ಕಿತ್ತೊಗೆದಿರುವ ಸಮಂತಾ ಹಲವು ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.
'ಪುಷ್ಪ' ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ತಾವು ಮೈಚಳಿ ಬಿಟ್ಟಿರುವುದನ್ನು ಸಾಬೀತು ಮಾಡಿದ್ದ ಸಮಂತಾ ಆ ನಂತರ ಹಲವು ಗ್ಲಾಮರಸ್ ಫೋಟೊಶೂಟ್‌ಗಳಿಗೆ ಸೆಕ್ಸಿಯಾಗಿ ಫೋಸು ನೀಡಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಮತ್ತೆ
ವೈರಲ್
ಆಯ್ತು
ಸಮಂತಾ
ಬೋಲ್ಡ್
ಫೋಟೊ:
ಸೆಲೆಬ್ರೆಟಿಗಳು
ಏನಂದ್ರು?
ಕೆಲವು ದಿನಗಳ ಹಿಂದಷ್ಟೆ ಸ್ವಿಮ್ ವೇರ್ ಧರಿಸಿ ಸಖತ್ ಹಾಟ್ ಆಗಿ ಸಮಂತಾ ಕಾಣಿಸಿಕೊಂಡಿದ್ದರು ಸಮಂತಾ. ತಮ್ಮ ಹಾಟ್ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಸಮಂತಾರ ಆ ಚಿತ್ರಗಳು ಭಾರಿ ವೈರಲ್ ಆಗಿದ್ದವು. ಇದೀಗ ಸಮಂತಾ ಆ ಚಿತ್ರದಲ್ಲಿ ಧರಿಸಿದ್ದ ಸ್ವಿಮ್‌ವೇರ್‌ನ ಬೆಲೆ ಎಷ್ಟೆಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೆ, ಆ ಸ್ವಿಮ್‌ವೇರ್‌ನ ಪ್ರಚಾರಕ್ಕೆ ಸಮಂತಾ ಪಡೆದ ಸಂಭಾವನೆ ಸಾಮಾನ್ಯರ ತಲೆ ತಿರುಗಿಸುವಂತಿದೆ.
'ಶಾಕುಂತಲಂ'
ಔಟ್
ಪುಟ್
ಚೆನ್ನಾಗಿಲ್ಲ:
ಸಿಟ್ಟಿಗೆದ್ದ
ಸಮಂತಾ!

ಸಮಂತಾ ಧರಿಸಿರುವ ಬಿಕಿನಿಯ ಬೆಲೆ ಎಷ್ಟು?
ಚಿತ್ರದಲ್ಲಿ ಸಮಂತಾ ಧರಿಸಿರುವುದು ವಿದೇಶಿ ಬ್ರ್ಯಾಂಡ್ ಬರ್‌ಬೆರಿಯ ಸ್ವಿಮ್ ವೇರ್. ಬರ್‌ಬೆರಿ ಬ್ರ್ಯಾಂಡ್ ಬಿಕಿನಿ ಉಡುಗೆಗಳಿಗೆ ಜನಪ್ರಿಯ. ದುಬಾರಿ ಬೆಲೆಯ ಉಡುಗೆಗಳನ್ನು ಈ ಸಂಸ್ಥೆ ಡಿಸೈನ್ ಮತ್ತು ಮಾರಾಟ ಮಾಡುತ್ತದೆ. ಚಿತ್ರದಲ್ಲಿ ಸಮಂತಾ ಧರಿಸಿರುವ ಬಿಕಿನಿಯ ಬೆಲೆ ಭಾರತೀಯ ರುಪಾಯಿಗಳಲ್ಲಿ 30,000 ರುಪಾಯಿ!

ಸ್ವಿಮ್‌ವೇರ್ ಚಿತ್ರ ಹಂಚಿಕೊಂಡಿದ್ದ ಸಮಂತಾ
ಸ್ವಿಮ್ ವೇರ್ ಧರಿಸಿರುವ ಎರಡು ಚಿತ್ರಗಳನ್ನು ಸಮಂತಾ ಹಂಚಿಕೊಂಡಿದ್ದರು. ಒಂದು ಚಿತ್ರದಲ್ಲಿ ಬರ್‌ಬೆರಿ ಬ್ರ್ಯಾಂಡ್ ಲೇಡೀಸ್ ಪರ್ಸ್ ಅನ್ನು ಪ್ರದರ್ಶಿಸಿದ್ದರು. ಇದರ ಬೆಲೆಯೂ ಕಡಿಮೆಯಲ್ಲ, ಈ ಪರ್ಸ್‌ನ ಬೆಲೆ ಸುಮಾರು 80,000 ರುಪಾಯಿ ಎನ್ನಲಾಗುತ್ತಿದೆ. ಸಮಂತಾರ ಬರ್‌ಬೆರಿ ಪ್ರಚಾರದ ಫೊಟೊಗಳನ್ನು ಜನಪ್ರಿಯ ಫೊಟೊಗ್ರಾಫರ್ ವೇಣುರಸೂರಿ ಕ್ಲಿಕ್ಕಿಸಿದ್ದರು. ಸಮಂತಾಗೆ ಮೇಕಪ್ ಮಾಡಿದ್ದು ಸಾಧನಾ ಸಿಂಗ್, ಈಕೆ ಸಮಂತಾರ ಆಪ್ತ ಗೆಳತಿ ಸಹ ಹೌದು.

ಬಿಕಿನಿ ಪ್ರಚಾರಕ್ಕೆ ಪಡೆದ ಹಣವೆಷ್ಟು?
ಇನ್ನು ಈ ಬರ್‌ಬೆರಿ ಬ್ರ್ಯಾಂಡ್‌ನ ಪ್ರಚಾರಕ್ಕೆ ಸಮಂತಾ ಬರೋಬ್ಬರಿ 90 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೂ ಸಮಂತಾ ಪೂರ್ಣ ಬಿಕಿನಿಯಲ್ಲಿ ಕಾಣಿಸಿಕೊಂಡಿಲ್ಲ, ಬದಲಿಗೆ ಬಿಕಿನಿಯ ಮೇಲ್ಭಾಗವನ್ನಷ್ಟೆ ಪ್ರದರ್ಶಿಸಿದ್ದಾರೆ. ಆದರೂ 90 ಲಕ್ಷ ಸಂಭಾವನೆಯನ್ನು ಸಮಂತಾ ಪಡೆದಿದ್ದಾರೆ. ಸಮಂತಾ ಸಿನಿಮಾಗಳಿಂದ ಗಳಿಸಿದಷ್ಟೆ ಹಣವನ್ನು ಇನ್‌ಸ್ಟಾಗ್ರಾಂ ಪ್ರೊಮೋಷನ್‌ಗಳಿಂದಲೂ ಪಡೆಯುತ್ತಾರೆ.

ವಿವಿಧ ಬ್ರ್ಯಾಂಡ್‌ನ ಪ್ರಚಾರ ಮಾಡ್ತಾರೆ ಸಮಂತಾ
ಹಲವು ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿರುವ ಸಮಂತಾ, ವಿವಿಧ ಬ್ರ್ಯಾಂಡ್‌ಗಳ ಜಾಹೀರಾತುಗಳನ್ನು ತಮ್ಮ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಬಟ್ಟೆ ಬ್ರ್ಯಾಂಡ್‌ನ ಫೊಟೊಗಳನ್ನು ಹೆಚ್ಚಿಗೆ ಹಂಚಿಕೊಳ್ಳುತ್ತಾರೆ ಸಮಂತಾ. ಕೆಲ ತಿಂಗಳ ಹಿಂದೆ ನಟ ವಿಜಯ್‌ರ ತಮಿಳು ಸಿನಿಮಾ 'ಬೀಸ್ಟ್'ನ ಹಾಡೊಂದಕ್ಕೆ ಸ್ಟೆಪ್ ಹಾಕಿ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಕ್ಕೆ ಲಕ್ಷಾಂತರ ರುಪಾಯಿ ಹಣ ಪಡೆದಿದ್ದರು ಸಮಂತಾ.