X
ಕನ್ನಡ » ಚಲಚಿತ್ರಗಳು » ಅಂಬಿ ನಿಂಗ್ ವಯಸ್ಸಾಯ್ತೋ!
ಅಂಬಿ ನಿಂಗ್ ವಯಸ್ಸಾಯ್ತೋ!

ಅಂಬಿ ನಿಂಗ್ ವಯಸ್ಸಾಯ್ತೋ!

Comedy | 27 Sep 2018 | U |
Kannada

2.5 /5 Users

4 /5 Filmibeat

ಅಂಬಿ ನಿಂಗ್ ವಯಸ್ಸಾಯ್ತೋ! ಕಥೆ

ಸಾಮಾನ್ಯವಾಗಿ ಮಕ್ಕಳು ಮಾಡುವ ತರ್ಲೆ ಕೆಲಸಗಳು ಅಪ್ಪನಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇಲ್ಲಿ ಅದು ಉಲ್ಟಾ. ಅಂಬಿ (ಅಂಬರೀಶ್) ಮಾಡುವ ಪ್ರತಿ ಎಡವಟ್ಟು ಕೆಲಸಗಳಿಂದ ಮಗನಿಗೆ ತಲೆ ನೋವು ಆಗುತ್ತಿರುತ್ತದೆ. ಒಬ್ಬ ಫೈಟ್ ಮಾಸ್ಟರ್ ಆಗಿದ್ದ ಅಂಬಿ ವಯಸ್ಸಾದ ಮೇಲೆ ಮನೆಯಲ್ಲಿ ಇರುತ್ತಾರೆ. ಚೆನ್ನಾಗಿ ನೋಡಿಕೊಳ್ಳುವ ಮಗ - ಸೊಸೆ, ಮುದ್ದಾದ ಮೊಮ್ಮಕ್ಕಳು ಎಲ್ಲ ಇದ್ದರೂ ಅಂಬಿ ಮನೆ ಬಿಟ್ಟು ಹೋಗುತ್ತಾರೆ. ಮಗನ ಜೊತೆಗಿನ ಸಣ್ಣ ಮನಸ್ತಾಪದಿಂದ ಬೈಕ್ ಏರಿ ಮಕ್ಕಳು, ಮೊಮ್ಮಕ್ಕಳಿಂದ ಅಂಬಿ ದೂರ ಹೊರಡುತ್ತಾರೆ. 'ಮಕ್ಕಳ ಜೀವನದಲ್ಲಿ ನಾನು ಇದ್ದೇನೆ... ಆದರೆ ನನಗೂ ಒಂದು ಜೀವನ ಇದೆ' ಎಂದು ಅದನ್ನು ಹುಡುಕುತ್ತ ಅಂಬಿ ಪ್ರಯಾಣ ಆರಂಭಿಸುತ್ತಾರೆ. ತನ್ನ ಹಳೆಯ ಪ್ರೇಯಸಿ ನಂದಿನಿ (ಸುಹಾಸಿನಿ) ಈಗ ಹೇಗಿದ್ದಾಳೆ?, ಅವಳನ್ನು ನೋಡಬೇಕು ಎಂದು ಅಂಬಿ ಕೇರಳಗೆ ಹೋಗುತ್ತಾರೆ. ವಯಸ್ಸಾದ ಅಂಬಿಗೆ ಇಲ್ಲಿ ಅರಳು ಮರಳಲ್ಲ ಅವರು 'ಮರಳಿ ಅರಳು'ತ್ತಾರೆ. ಪ್ರೀತಿಗೆ, ಭಾವನೆಗಳಿಗೆ ವಯಸ್ಸಿಲ್ಲ... ಈ ಸಿನಿಮಾ ಅದನ್ನೇ ಹೇಳುತ್ತಿದೆ. ಹಳ್ಳಿಯಲ್ಲಿ ತಾನು ಯುವಕನಾಗಿದ್ದಾಗ ಪ್ರೀತಿ ಮಾಡಿದ್ದ ಹುಡುಗಿಯನ್ನು ಮತ್ತೆ ಕಾಣಲು ಅಂಬಿ ಹೋಗುತ್ತಾರೆ. ಆಗ ಅವರಿಗೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತದೆ. ಹೆಂಡತಿ ಇಲ್ಲದ ಅಂಬಿ, ಗಂಡನಿಲ್ಲದ ನಂದಿನಿ ಮತ್ತೆ ಸೇರಿ ಹೊಸ ಜೀವನ ಶುರು ಮಾಡುತ್ತಾರಾ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.
Read More

ಅಂಬಿ ನಿಂಗ್ ವಯಸ್ಸಾಯ್ತೋ! ಕಲಾವಿದರು ಮತ್ತು ಸಿಬ್ಬಂದಿ

ಅಂಬಿ ನಿಂಗ್ ವಯಸ್ಸಾಯ್ತೋ! ಕ್ರೂ ಮಾಹಿತಿ

ನಿರ್ದೇಶಕ ಗುರುದತ್ತ ಗಾಣಿಗ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಜಾಕ್ ಮಂಜು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಂಬಿ ನಿಂಗ್ ವಯಸ್ಸಾಯ್ತೋ! ವಿಮರ್ಶಕರ ವಿಮರ್ಶೆ

kannada.filmibeat.com
ಇದೊಂದು feel good ಸಿನಿಮಾ. ವಯಸ್ಸಾದ ಅಪ್ಪ ಅಂದ್ರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು, ನಾವು ಇಲ್ಲದಿದ್ದಾಗ ಮನೆ ಕಾಯುವುದು, ನಾವು ಹಾಕಿದ ಚಾನೆಲ್ ನೋಡುವುದು ಇಷ್ಟೇ ಅಂತ ನೀವೆನಾದರೂ ಅಂದುಕೊಂಡಿದ್ದರೆ ಒಮ್ಮೆ 'ಅಂಬಿ ನಿಂಗೆ ವಾಯಸ್ಸಾಯ್ತೋ' ಸಿನಿಮಾ ನೋಡಿ. ಈ ರೀತಿಯ ನಿಮ್ಮ ಭಾವನೆ ಬದಲಾಗಬಹುದು.ಇದು ಮಾಸ್ ಚಿತ್ರವೋ ಕ್ಲಾಸ್ ಚಿತ್ರವೋ ಎನ್ನುವುದನ್ನು ಬಿಟ್ಟು 'ಅಂಬಿ ನಿಂಗೆ ವಾಯಸ್ಸಾಯ್ತೋ' ಒಂದು ಭಾವನಾತ್ಮಕ ಸಿನಿಮಾ. ಒಂದು ಸಣ್ಣ ಸಂದೇಶದ ಜೊತೆಗೆ ಇಲ್ಲಿ ಒಂದಷ್ಟು ಎಮೋಷನ್ಸ್ ಇದೆ. ಎಲ್ಲರಿಗೂ ಇಷ್ಟ ಆಗುವ ಒಂದು ಒಳ್ಳೆಯ ಫ್ಯಾಮಿಲಿ ಸಿನಿಮಾ ಇದು.

ಅಂಬಿ ನಿಂಗ್ ವಯಸ್ಸಾಯ್ತೋ! ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅಂಬಿ ನಿಂಗ್ ವಯಸ್ಸಾಯ್ತೋ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+