ಚಂದನ ವಾಹಿನಿಯಲ್ಲಿ ಪಿಯುಸಿ, ಸಿಇಟಿ ಮಾರ್ಗದರ್ಶನ

ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ಸಿಇಟಿ ಪರೀಕ್ಷೆಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಚಂದನ ವಾಹಿನಿ ಹೊಸ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಲಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದು ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.
ಮಾರ್ಚ್ 7ರಿಂದ 15ರವರೆಗೆ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಹಾಗೂ ಮಾರ್ಚ್ 29 ರಿಂದ ಏಪ್ರಿಲ್ 25ರವರೆಗೆ ಸಿಇಟಿ ಪರೀಕ್ಷೆಯ ಮಾರ್ಗದರ್ಶನ ತರಗತಿಗಳು ಪ್ರಸಾರವಾಗಲಿವೆ. ದ್ವಿತೀಯ ಪಿಯುಸಿ ನಾಲ್ಕು ವಿಜ್ಞಾನ ವಿಷಯಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮ ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ (ಮಾ.7ರಿಂದ 15ರವರೆಗೆ)ಪ್ರಸಾರವಾಗಲಿದೆ. ನಾಲ್ಕು ವಿಜ್ಞಾನ ವಿಷಯಗಳ ಕುರಿತು ತಲಾ ಅರ್ಧ ಗಂಟೆ ಕಾಲ ಮಾರ್ಗದರ್ಶನ ನೀಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. ಎರಡು ದಿನಗಳಿಗೊಮ್ಮೆ ಒಂದೊಂದು ವಿಷಯ ಕುರಿತು ಮಧ್ಯಾಹ್ನ 12 ರಿಂದ 1 ಗಂಟೆಯ ತನಕ ನೇರ ಫೋನ್ ಇನ್ ಕಾರ್ಯಕ್ರಮವಿರುತ್ತದೆ. ಸಿಇಟಿ ಮಾರ್ಗದರ್ಶನ ವೇಳಾಪಟ್ಟಿಯನ್ನು ಶೀಘ್ರದಲ್ಲೆ ಪ್ರಕಟಿಸಲಾಗುತ್ತದೆ.


Click it and Unblock the Notifications











