For Quick Alerts
ALLOW NOTIFICATIONS  
For Daily Alerts

ಲಕುಮಿ ಪ್ರಕಾಶ್ ರಿಂದ ಬೊಂಬೆಯಾಟವಯ್ಯ

By Mahesh
|

ಲಕುಮಿಯ ಯಶಸ್ಸು ಪ್ರಕಾಶ್ ಮತ್ತು ತಂಡವನ್ನು ಈಗ ಹೊಸ ಸಾಹಸಕ್ಕೆ ಪ್ರೇರೇಪಿಸಿದೆ. ಲಕುಮಿಯ ರೂವಾರಿ ಪ್ರಕಾಶ್ ಮತ್ತೊಂದು ರೋಚಕ ಕಥೆಯನ್ನು ಕಿರುತೆರೆ ವೀಕ್ಷಕರ ಮುಂದೆ ಧಾರಾವಾಹಿಯಾಗಿ ಹರಿಸಲು ಸಜ್ಜಾಗಿದ್ದಾರೆ. ಅದೇ ಸುವರ್ಣ ವಾಹಿನಿಯ ಮತ್ತೊಂದು ಹೆಮ್ಮೆಯ ಕೊಡುಗೆ ಬೊಂಬೆಯಾಟವಯ್ಯ!

ಪ್ರಕಾಶ್! ನಿರ್ದೇಶಕ ಕೂಡ ಸ್ಟಾರ್ ಆಗಬಲ್ಲ ಅನ್ನೋದನ್ನು ಪ್ರೂವ್ ಮಾಡಿರೋ ಹೆಸರಿದು. ಕೇವಲ ಹೀರೋಗಳೇ ತೆರೆಯ ಮೇಲೆ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ತನ್ನ ನಾಮ ಮಾತ್ರದಿಂದ ಪ್ರೇಕ್ಷಕರನ್ನು ಸೆಳೆಯ ಬಲ್ಲ ಶಕ್ತಿ ಈ ಹೆಸರಿಗಿದೆ.

ನಿಂತ ನೀರಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಹರಿವು, ಹೊಸ ವೇಗ ನೀಡಿದ ಬೆರಳೆಣಿಕೆಯ ನಿರ್ದೇಶಕರಲ್ಲಿ ಒಬ್ಬರು ಪ್ರಕಾಶ್. ಕೇವಲ ನಿರ್ದೇಶಕನಾಗಿ ಮಾತ್ರವಲ್ಲದೇ ಒಬ್ಬ ನಿರ್ಮಾಪಕನಾಗಿಯೂ ಪ್ರಕಾಶ್ ಸೈ ಎನಿಸಿಕೊಂಡಿದ್ದಾರೆ. ಪ್ರಕಾಶ್ ನಿರ್ದೇಶನದಲ್ಲಿ ಇವರದೇ ಬ್ಯಾನರ್ ಬ್ಯಾನರ್ 'ಶ್ರೀ ಜೈಮಾತಾ ಕಂಬೈನ್ಸ್" ಮೂಲಕ ನಿರ್ಮಾಣವಾದ ಖುಷಿ, ರಿಷಿ, ಮಿಲನ ಚಿತ್ರಗಳನ್ನು ಪ್ರೇಕ್ಷಕ ಮರೆಯೋಕೆ ಸಾಧ್ಯಾನಾ?

ಮಿಲನದಂಥ ಮಹೋನ್ನತ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಶ್ರೀ ಜೈಮಾತಾ ಕಂಬೈನ್ಸ್ ಮೆಗಾ ಧಾರಾವಾಹಿ ನಿರ್ಮಾಣಕ್ಕೂ ನಾಂದಿ ಹಾಡಿದ್ದು ಸುವರ್ಣ ವಾಹಿನಿ ಮೂಲಕ. ಶ್ರೀ ಜೈಮಾತಾ ಕಂಬೈನ್ಸ್‌ನ 'ಲಕುಮಿ" ಈಗ ಕರ್ನಾಟಕದ ಮನೆಮಗಳು. ಸುವರ್ಣ ವಾಹಿನಿಯಲ್ಲಿ, ಪ್ರಕಾಶ್ ಸಾರಥ್ಯದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಮೂಡಿ ಬರುತ್ತಿರುವ ಮೆಗಾ ಧಾರಾವಾಹಿ 'ಲಕುಮಿ" ಕಿರುತೆರೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.

ಲಕುಮಿ ಮೂಲಕ ನವ್ಯ ಮತ್ತು ಸುಷ್ಮ ಅವರೊಳಗಿದ್ದ ಸುಪ್ತ ಪ್ರತಿಭೆಯನ್ನು ಹೊರ ಹಾಕಿದ್ದ ಪ್ರಕಾಶ್, 'ಬೊಂಬೆಯಾಟವಯ್ಯ" ಮೂಲಕ ಮತ್ತೊಂದು ಹೊಸ ಪ್ರತಿಭೆಯ ಅನಾವರಣ ಮಾಡಲಿದ್ದಾರೆ. ಖ್ಯಾತ ಕಲಾವಿದೆ ವಿನಯ ಪ್ರಸಾದ್ ಅವರ ಮುದ್ದಿನ ಮಗಳು ಪ್ರಥಮಾ ಈ ಧಾರಾವಾಹಿ ಮೂಲಕ ನಟಿಯಾಗಿ ಕಿರುತೆರೆಗೆ ಅರಂಗೇಟ್ರಂ ಮಾಡಲಿದ್ದಾರೆ. ನೃತ್ಯಗಾತಿಯಾಗಿ ಈಗಾಗಲೇ ಹೆಸರು ಮಾಡಿರುವ ಪ್ರಥಮಾ ನಟಿಯಾಗಿ ಕಿರುತೆರೆಯ ವೀಕ್ಷಕರ ಹೃದಯಗಳಿಗೆ ಲಗ್ಗೆ ಹಾಕಲಿದ್ದಾರೆ.

ಬೊಂಬೆಯಾಟವಯ್ಯ ಇದೇ ಡಿಸೆಂಬರ್ 13ರಿಂದ ನಿಮ್ಮ ಸುವರ್ಣ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಮಿಲನ ಪ್ರಕಾಶ್ ಬಳಗ ಕಿರುತೆರೆಯಲ್ಲಿ ಇನ್ನೊಂದು ದಾಖಲೆ ಬರೆಯಲು ಸಜ್ಜಾಗಿದೆ.

English summary
After the success of Lakumi serial director Prakash is back with another mega serial Bombeyatavayya on Suvarna Channel. Actress Vinaya Prasad"s duaghter Prathama is making her debut with this serial. Prakash who gave successful movies like Milana, Khushi, Rishi now turned producer from Lakumi serial.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more