For Quick Alerts
ALLOW NOTIFICATIONS  
For Daily Alerts

ಬೃಹತ್ ಬ್ರಹ್ಮಾಂಡ ನರೇಂದ್ರ ಶರ್ಮರಿಂದ ದಿಟ್ಟ ಉತ್ತರ

By Rajendra
|

ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬೃಹತ್ ಬ್ರಹ್ಮಾಂಡ'ದ ಮೂಲಕ ಮನೆಮಾತಾದ ಜ್ಯೋತಿಷಿ ನರೇಂದ್ರ ಬಾಬು ಶರ್ಮ. ರಾಜ್ಯದ ಜನತೆಗೆ ಅವರು ಭೋದಿಸುತ್ತಿದ್ದ ನಿತ್ಯ ಜೀವನದ ಸಾಂಸಾರಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರಧಾರೆಗಳು ಕೆಲವರಿಗೆ ಇಷ್ಟವಾಗಿದ್ದರೆ ಮತ್ತೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದವು.

ಇವೆಲ್ಲವನ್ನೂ ಪರಿಹರಿಸುವ ಸಲುವಾಗಿ ಅವರ ವಿರೋಧಿಗಳು ಹಾಗೂ ಅವರ ಆರಾಧಕರೊಂದಿಗೆ ಮುಖಾಮುಖಿಯಾಗಿದ್ದರು. ವೇದಿಕೆ ಒದಗಿಸಿಕೊಟ್ಟಿದ್ದು ಜೀ ಕನ್ನಡ ವಾಹಿನಿ. ಮಾಳವಿಕಾ ನಡೆಸಿಕೊಡುವ "ಬದುಕು ಜಟಕಾ ಬಂಡಿ" ಕಾರ್ಯಕ್ರಮದಲ್ಲಿ ವೀಕ್ಷಕರ ನೇರಾನೇರ ಪ್ರಶ್ನೆಗಳನ್ನು ನರೇಂದ್ರಬಾಬು ಶರ್ಮ ಎದುರಿಸಬೇಕಾಯಿತು.

ಕೆಲವರು ನೀವು ಮಹಿಳೆಯರನ್ನು "ಮುಂಡೇವು" ಎನ್ನುತ್ತೀರ. ಇದು ತಪ್ಪಲ್ಲವೆ? ಎಂದು ಪ್ರಶ್ನಿಸಿದರು. ಅದಕ್ಕೆ ಶರ್ಮಾ ಹೇಳಿದ್ದೇನೆಂದರೆ, ನನಗೆ ಮಹಿಳೆಯರ ಬಗ್ಗೆ ಯಾವುದೇ ದ್ವೇಷವಿಲ್ಲ. ಅವರ ಜೀವನ ಮಟ್ಟ ಸುಧಾರಿಸಲಿ ಎಂಬ ಉದ್ದೇಶದಿಂದ ಹಾಗೆ ಅಂದಿರುತ್ತೇನೆ. ನಾನು ಮಾತನಾಡುವುದೇ ಹಾಗೆ. ಯಾವುದೋ ಒಬ್ಬ ಮಹಿಳೆಯನ್ನು ಉದ್ದೇಶಿಸಿ ಆ ರೀತಿ ಕರೆದರೆ ಅದು ಬೇರೆ ವಿಚಾರ. ಎಲ್ಲರನ್ನೂ ಒಟ್ಟಾಗಿ ಮುಂಡೇವೆ ಎಂದಿರುತ್ತೇನೆ. ಅದನ್ನು ಅನ್ಯಥಾ ಭಾವಿಸಬಾರದು ಎಂದರು.

ಒಮ್ಮೊಮ್ಮೆ ಮಾತನಾಡುತ್ತಾ ಗಂಡಸರನ್ನೂ ಗಂಡು ಮುಂಡೇವು ಎಂದಿರುತ್ತೇನೆ. ಅದರಲ್ಲೇನು ತಪ್ಪಿದೆ ಎಂದರು. ಮತ್ತೆ ಕೆಲವರು ನೀವು ವಿಧವಾ ಮಹಿಳೆಯರನ್ನು ಅಗೌರವಾಗಿ ಮಾತನಾಡಿದ್ದೀರಿ ಎಂದು ಆರೋಪಿಸಿದರು. "ನಾನು ಯಾವುದೇ ಮಹಿಳೆಯರನ್ನು ಇದುವರೆಗೂ ಅಗೌರವದಿಂದ ಮಾತನಾಡಿಲ್ಲ.ಜೀ ಕನ್ನಡದಲ್ಲಿ ಪ್ರಸಾರವಾದ ನನ್ನ ಅಷ್ಟೂ ಸಿಡಿಗಳನ್ನು ಹಾಕಿ ಪರೀಕ್ಷಿಸಿಕೊಳ್ಳಿ. ಮಹಿಳೆಯರ ಬಗ್ಗೆ ಎಲ್ಲೂ ನಾನು ಹಾಗೆ ಮಾತನಾಡಿಲ್ಲ" ಎಂದರು.

ತಾವು ಆರಾಧಿಸುವ ದೇವತೆಯನ್ನು ಅವಳು, ಇವಳು ಎಂದು ಏಕವಚನದಲ್ಲಿ ಕರೆಯುತ್ತೀರಲ್ಲಾ , ಅದು ತಪ್ಪಲ್ಲವೆ? ಎಂದು ಕೆಲವರು ಕೇಳಿದರು. ನಮ್ಮ ಹೆತ್ತ ತಾಯಿಯನ್ನು ಅವಳು ಎಂದು ಕರೆಯುವುದಿಲ್ಲವೆ.ಅದನ್ನು ಯಾರಾದರೂ ತಪ್ಪು ಎನ್ನುತ್ತಾರಾ. ತನ್ನ ಆರಾಧ್ಯ ದೇವತೆಯೂ ನನಗೆ ತಾಯಿ ಇದ್ದಂತೆ ಎಂದು ಉತ್ತರ ನೀಡಿದರು. ಕೆಲವರು ಸ್ವಾಮೀಜಿಯ ಉಪದೇಶಗಳಿಂದ ತಮ್ಮ ಜೀವನದಲ್ಲಿ ಏಳಿಗೆ ಕಂಡಿದ್ದೇವೆ ಎಂದೂ ತಿಳಿಸಿದರು.

ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಿರುವ ಇಂದಿನ ಮಹಿಳಾ ಸಮಾಜಕ್ಕೆ "ಬೃಹತ್ ಬ್ರಹ್ಮಾಂಡ" ಕಾರ್ಯಕ್ರಮದ ಮೂಲಕ ಉತ್ತಮ ತಿಳುವಳಿಕೆ ನೀಡಲಾಗುತ್ತಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಎಲ್ಲಾ ಹೊಗಳಿಗೆ ತೆಗಳಿಕೆಗಳನ್ನು ನರೇಂದ್ರ ಬಾಬು ಶರ್ಮ ಸಮಾಧಾನ ಚಿತ್ತದಿಂದ ಕೇಳುತ್ತಾ ಉತ್ತರಿಸಿದ್ದು ವಿಶೇಷವಾಗಿತ್ತು. ಜೋತಿಷ್ಯ ಸುಳ್ಳಲ್ಲ ಜ್ಯೋತಿಷಿ ಸುಳ್ಳಾಗಬಹುದು. ಶಾಸ್ತ್ರ ಸುಳ್ಳಲ್ಲ ಆದರೆ ಶಾಸ್ತ್ರಿ ಸುಳ್ಳಾಗಬಹುದು ಎಂಬ ನುಡಿಮುತ್ತುಗಳನ್ನು ಶರ್ಮ ಉದುರಿಸಿದರು.

ನರೇಂದ್ರ ಬಾಬು ಶರ್ಮ ಅವರನ್ನು ಕಟುವಾಗಿ ವಿರೋಧಿಸುವ, ಅವರ ವಿರುದ್ಧ ಬ್ಲಾಗ್‌ಗಳಲ್ಲಿ ಮನಬಂದಂತೆ ಹಾಯುವ ವರ್ಗವನ್ನೂ ಚರ್ಚೆಗೆ ಆಹ್ವಾನಿಸಲಾಗಿತ್ತಂತೆ. ಆದರೆ ಅವರು ಯಾರು ಚರ್ಚೆಗೆ ಬರದೆ ಇದ್ದದ್ದು ದೊಡ್ಡ ಕೊರತೆ ಎಂಬುದು ಜೀ ಕನ್ನಡ ವಾಹಿನಿ ತಿಳಿಸಿತು. ತಮಗೆ ಪುರುಷರಿಗಿಂತ ಮಹಿಳಾ ಅಭಿಮಾನಿಗಳೇ ಹೆಚ್ಚು ಎಂದೂ ನರೇಂದ್ರ ಬಾಬು ಶರ್ಮ ತಿಳಿಸಿದರು. (ದಟ್ಸ್ ಕನ್ನಡ ಸಿನಿವಾರ್ತೆ)

English summary
Bruhat Bramhanda fame renowned astrologer Narendra Babu Sharma has recently appeared in Zee Kannada reality show Baduku Jataka Bandi. He deliberately answered the questions from the audience side. The much admired actress Malavika hosted the show, which is all about real people, real events, real emotions and real judgments.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more