»   » ಕಿರುತೆರೆಗೆ ಎಂಟ್ರಿ ಕೊಟ್ಟ ಕಿಲಾಡಿ ನಟ ಕೋಮಲ್

ಕಿರುತೆರೆಗೆ ಎಂಟ್ರಿ ಕೊಟ್ಟ ಕಿಲಾಡಿ ನಟ ಕೋಮಲ್

Posted By:
Subscribe to Filmibeat Kannada
Actor Komal Kumar
"ಪ್ಯಾರ್‌ಗೆ ಆಗ್ಬಿಟ್ಟೈತೆ..." ಎಂದು ಪಡ್ಡೆಗಳ ಪಾಳಯದಲ್ಲಿ ಹೊಸ ಅಲೆ ಎಬ್ಬಿಸಿರುವ ಹಾಸ್ಯನಟ ಕೋಮಲ್ ಕುಮಾರ್ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡಿಗರನ್ನು ನಕ್ಕು ನಲಿಸಿ ಸುಸ್ತು ಮಾಡೋಕೆ ಜೀ ಕನ್ನಡದಲ್ಲಿ ಬರುತ್ತಿದೆ ಮಸ್ತ್ ಕಾಮಿಡಿ ಶೋ 'ಕಾಮಿಡಿ ಕಿಲಾಡಿಗಳು ವಿತ್ ಕೋಮಲ್'. ಪ್ರಪ್ರಥಮ ಬಾರಿಗೆ ಖ್ಯಾತ ಹಾಸ್ಯನಟ ಕೋಮಲ್ ಅವರನ್ನು ಕನ್ನಡ ಕಿರುತೆರೆಗೆ ಪರಿಚಯಿಸುತ್ತಿರುವ ಕೀರ್ತಿ ಜೀ ಕನ್ನಡದ್ದು.

'ಕಾಮಿಡಿ ಕಿಲಾಡಿಗಳು ವಿತ್ ಕೋಮಲ್' ಹಲವಾರು ವಿಶೇಷಗಳ ಆಗರ. ಮೊತ್ತಮೊದಲ ಬಾರಿಗೆ ಕೋಮಲ್ ತೀರ್ಪುಗಾರರಾಗಿರುವುದಲ್ಲದೇ, ಈ ಶೋ ಶೀರ್ಷಿಕೆ ಗೀತೆಯನ್ನೂ ಹಾಡುವ ಮೂಲಕ ಕಮಾಲ್ ಮಾಡಿದ್ದಾರೆ. ಜೊತೆಗೆ ಕಾರ್ಯಕ್ರಮದ ನಿರ್ಮಾಣದ ಹೊಣೆಯೂ ಅವರದ್ದೆ. ಕಾಮಿಡಿ ಕಿಲಾಡಿಗಳು ವಿತ್ ಕೋಮಲ್ ಶೋ ಪರಿಕಲ್ಪನೆ ಉಳಿದೆಲ್ಲಾ ಕಾಮಿಡಿ ಶೋಗಳಿಗಿಂತ ವಿಭಿನ್ನ, ವಿಶಿಷ್ಟ.

ಪ್ರತಿ ಸಂಚಿಕೆಯಲ್ಲಿ ಒಬ್ಬ ಕಿಂಗ್ ಕಾಮಿಡಿಯನ್ ನಾಯಕತ್ವದಲ್ಲಿ ಹಾಸ್ಯ ಕಲಾವಿದರ ಬಳಗ ನಗಿಸೋಕೆ ತಯಾರಾಗುತ್ತೆ. ಅದಕ್ಕೆ ಪ್ರತಿಯಾಗಿ ಮತ್ತೊಂದು ತಂಡ ಪ್ರಬಲ ಸವಾಲು ಒಡ್ಡುತ್ತದೆ. ಯಾವ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೋ ಅವರಿಗೆ ಅಂತಿಮವಾಗಿ ಕರ್ನಾಟಕದ ಕಾಮಿಡಿ ಕಲಾವಿದರ ಅತ್ಯುತ್ತಮ ತಂಡ ಅನ್ನೋ ಪಟ್ಟ ದಕ್ಕುತ್ತದೆ.

ಪ್ರತಿ ಸಂಚಿಕೆಯಲ್ಲಿ ತೀರ್ಪುಗಾರ ಜೊತೆ ಸೆಲೆಬ್ರಿಟಿಗಳೂ ಸೇರ್ಪಡೆಯಾಗಲಿದ್ದು, ಸ್ಪರ್ಧಿಗಳಿಗೆ ಹೊಸ ಸವಾಲನ್ನು ಮುಂದಿಡಲಿದ್ದಾರೆ. ಜನರನ್ನು ನಗೆಸುವುದಕ್ಕೆ ಪ್ರತಿಭಾ ಕಲಾವಿದರ ತಂಡದೊಂದಿಗೆ ಜನಪ್ರಿಯ ರೇಡಿಯೋ ಜಾಕಿ ರ್‍ಯಾಪಿಡ್ ರಶ್ಮಿ ಮತ್ತು ಹಾಸ್ಯ ನಟ ಬರ್ಕತ್ ಅಲಿ ಜೊತೆಗಿರುತ್ತಾರೆ.

ಎಲ್ಲಾ ಟೆನ್ಶನ್‌ಗಳನ್ನ ಬದಿಗಿಟ್ಟು ಮನೆಮಂದಿಯನ್ನ ಒಂದು ಗಂಟೆ ನಗಿಸೋದೇ ನಮ್ಮ ಉದ್ದೇಶ. ಉದಯೋನ್ಮುಖ ಹಾಸ್ಯ ಕವಿಗಳು, ಬರಹಗಾರರು ಮತ್ತು ಕಲಾವಿದರಿಗೆ ಇದೊಂದು ಉತ್ತಮ ವೇದಿಕೆ. ಜನರಿಗಂತೂ ಒಂದು ಗಂಟೆ ಭರ್ಜರಿ ಮನರಂಜನೆ ಗ್ಯಾರಂಟಿ ಎನ್ನುತ್ತಾರೆ ತೀರ್ಪುಗಾರರಾದ ಕೋಮಲ್.

ಆರೋಗ್ಯಕರ ಹಾಸ್ಯಭರಿತ ವಾತಾವರಣದೊಂದಿಗೆ ನಗೆ ಬುಗ್ಗೆಯನ್ನ ಉಕ್ಕಿಸೋಕೆ ಬರುತ್ತಿರುವ ಕಾಮಿಡಿ ಕಿಲಾಡಿಗಳು ವಿತ್ ಕೋಮಲ್, ಫೆಬ್ರವರಿ 16ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. (ಒನ್‌ಇಂಡಿಯಾ ಕನ್ನಡ)

English summary
Komedy Kiladigalu with Komal (KKK) brings with it not just barrels of laughter, with its simple, fresh comedy, but also the biggest star comedian of the Kannada industry, Komal, hitting the small screen Zee Kannada. Launch Date: 16th Feb 2012, 21:00 - 22:00 hrs. Every Thursday and Friday at 21:00 hrs

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X