For Quick Alerts
  ALLOW NOTIFICATIONS  
  For Daily Alerts

  ಉದ್ಯೋಗಾಕಾಂಕ್ಷಿಗಳಿಗೊಂದು ರಿಯಾಲಿಟಿ ಶೋ

  By Rajendra
  |

  ರಿಯಾಲಿಟಿ ಶೋಗಳಿಂದ ರಾಖಿ ಸಾವಂತ್ ಅವರಷ್ಟೇ ಖ್ಯಾತರಾದವರು ರಾಹುಲ್ ಮಹಾಜನ್.ಈಗವರು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು ಟಿವಿ ಕಾರ್ಯಕ್ರಮವೊಂದನ್ನು ನಿರ್ಮಿಸಲಿದ್ದಾರೆ. ನಿರುದ್ಯೋಗಿ ಯುವಕರಿಗಾಗಿಯೇಈ ರಿಯಾಲಿಟಿ ಶೋ ರೂಪಿಸಿರುವುದು ವಿಶೇಷ. ಈ ಮೂಲಕ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸಲು ರಾಹುಲ್ ಕಂಕಣ ತೊಟ್ಟಿದ್ದಾರೆ.

  "ನನ್ನ ಸಹ ನಿರ್ಮಾಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದೇನೆ. ಈ ರಿಯಾಲಿಟಿ ಶೋ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಸೇವೆ ನೀಡಲಿದ್ದೇನೆ. ಸಂದರ್ಶನ ಎದುರಿಸುವುದು ಹೇಗೆ? ಸೂಕ್ತ ಕೆಲಸವನ್ನು ಆಯ್ಕೆ ಮಾಡುವುದು ಹೇಗೆ ಎಂಬಿತ್ಯಾದಿ ಸೂಚನೆ, ಸಲಹೆಗಳನ್ನು ನೀಡಲಾಗುತ್ತದೆ" ಎಂದು ಅವರು ವಿವರ ನೀಡಿದ್ದಾರೆ .

  "ಜಾಬ್ ಟೈಮ್ ಟಿವಿ ಎಂದು ಹೆಸರಿಟ್ಟಿರುವ ಕಾರ್ಯಕ್ರಮ ಬೆಳಗ್ಗೆ 8.30 ಎನ್‌ಡಿಟಿವಿ ಇಮ್ಯಾಜಿನ್‌ನಲ್ಲಿ ಪ್ರಸಾರವಾಗಲಿದೆ. ಉದ್ಯೋಗಾಕಾಂಕ್ಷಿಗಳು ಹಾಸಿಗೆ ಬಿಟ್ಟು ಬೇಗ ಏಳಲಿ ಎಂಬ ಉದ್ದೇಶದಿಂದ ಬೆಳಗ್ಗೆಯೇ ಕಾರ್ಯಕ್ರಮವನ್ನು ಪ್ಲಾನ್ ಮಾಡಿದ್ದೇವೆ ಎನ್ನುತ್ತಾರೆ ರಾಹುಲ್. ಕಾರ್ಯಕ್ರಮ ಪ್ರಸಾರವಾಗಲಿರುವ ದಿನಾಂಕ ಶೀಘ್ರ ತಿಳಿಸುವುದಾಗಿ ಹೇಳಿದ್ದಾರೆ.

  "1992ರಲ್ಲಿ ಟೇಸ್ಟ್ ಆಫ್ ಇಂಡಿಯಾ (ದೂರದರ್ಶನ) ನಿರ್ಮಾಣ ತಂಡದಲ್ಲಿ ಒಬ್ಬನಾಗಿದ್ದು ಹೊರತುಪಡಿಸಿದರೆ, ನಾನು ಇದುವರೆಗೂ ಯಾವುದೇ ಕೆಲಸ ಮಾಡಿಲ್ಲ. ಈಗ ಪ್ರಾರಂಭಿಸುತ್ತಿರುವ ಕಾರ್ಯಕ್ರಮ ಖಂಡಿತ ನಿರುದ್ಯೋಗಿಗಳಿಗೆ ವರದಾನವಾಗಲಿದೆ" ಎನ್ನುತ್ತಾರೆ ರಾಹುಲ್ ಮಹಾಜನ್.

  English summary
  Rahul Mahajan, the controversial reality TV star has turned producer with a new reality show "job time TV" on NDTV Imagine that would offer jobs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X