»   »  ಬೆಂಗಳೂರಿನ ನರಸಿಂಹಮೂರ್ತಿ ಡ್ಯಾಡಿ ನಂ.1

ಬೆಂಗಳೂರಿನ ನರಸಿಂಹಮೂರ್ತಿ ಡ್ಯಾಡಿ ನಂ.1

Subscribe to Filmibeat Kannada
ಜೀ ಕನ್ನಡದ ಅತ್ಯಂತ ಜನಪ್ರಿಯ ಡ್ಯಾಡಿ ನಂ.1 ಸ್ಪರ್ಧೆಯಲ್ಲಿ ಬೆಂಗಳೂರಿನ ನರಸಿಂಹಮೂರ್ತಿ ಡ್ಯಾಡಿ ನಂ 1 ಪಟ್ಟವನ್ನು ಹಾಗೂ ಹ್ಯುಂಡೈ ಸ್ಯಾಂಟ್ರೋ ಕಾರ್ ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ರನ್ನರ್‌ಅಪ್ ಆಗಿ ರವೀಂದ್ರ ರೈ ಆಯ್ಕೆಯಾದರು.

ಅಂತಿಮ ಹಂತದ ಸ್ಪರ್ಧೆಗೆ ಚಿತ್ರದುರ್ಗದ ಸುರೇಶ್‌ಬಾಬು, ಮಂಗಳೂರಿನ ರವೀಂದ್ರ ರೈ, ಕುಣಿಗಲ್‌ನ ನಂಜುಂಡಯ್ಯ ಆಯ್ಕೆಯಾಗಿದ್ದರು. ಅಂತಿಮ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ನಂಜುಂಡಯ್ಯ, ಎರಡನೆ ಸುತ್ತಿನಲ್ಲಿ ಸುರೇಶ್ ಬಾಬು ಸ್ಪರ್ಧೆಯಿಂದ ಹೊರನಡೆದರು. ಅಂತಿಮ ಹಣಾಹಣಿಗೆ ಉಳಿದ ಇಬ್ಬರಲ್ಲಿ ಸ್ಪರ್ಧೆ ನಡೆಸಲಾಯಿತು.

ಕೊನೆಯ ಔಟ್‌ಡೋರ್ ಸುತ್ತಿನಲ್ಲಿ ಇಬ್ಬರು ಸ್ಪರ್ಧಿಗಳಿಗೆ ಕೆಲವು ಕೆಲಸಗಳನ್ನು ನೀಡಲಾಗಿತ್ತು.
1. ಬೆಂಗಳೂರಿನ ವಿದಾನಸೌಧದ ಎದುರು ಒಬ್ಬ ವ್ಯಕ್ತಿಗೆ ರಾಜಕಾರಣಿಯ ವೇಷ ತೊಡಿಸಿ ಛಾಯಾಚಿತ್ರ ತೆಗೆಸುವುದು.
2. ಬ್ರಿಗೇಡ್ ರಸ್ತೆಯಲ್ಲಿ ಹುಡುಗಿಯೊಬ್ಬಳಿಂದ ಹಾರೈಕೆಯ ಮುತ್ತು ತೆಗೆದುಕೊಳ್ಳುವುದು.
3. ಮೆಜಸ್ಟಿಕ್‌ನಲ್ಲಿ ಮೂರು ಪತ್ರಿಕೆಗಳನ್ನು ಮಾರುವ ಕೆಲಸಗಳನ್ನು ನೀಡಲಾಗಿತ್ತು.

ಹಿಂದಿನ ಸುತ್ತಿನ ಪೆನಾಲ್ಟಿ ಇದ್ದಿದ್ದರಿಂದ ನರಸಿಂಹಮೂರ್ತಿಯವರಿಗೆ ಕೆ.ಆರ್.ಮಾರ್ಕೆಟ್‌ನಿಂದ ಕೆಲವು ತರಕಾರಿಗಳನ್ನು ತರುವ ಹೆಚ್ಚಿನ ಕೆಲಸ ನೀಡಲಾಗಿತ್ತು. ಒಂದು ಹೆಚ್ಚಿನ ಕೆಲಸ ನೀಡಿದ್ದರೂ ಕೂಡ ನರಸಿಂಹಮೂರ್ತಿ ಎಲ್ಲ ಕೆಲಸಗಳನ್ನು ಮುಗಿಸಿ ರವೀಂದ್ರ ರೈಗಿಂತ ಮೊದಲು ನಿಗದಿತ ಸ್ಥಳಕ್ಕೆ ಆಗಮಿಸಿದರು.

ವಿಜೇತ ನರಸಿಂಹ ಮೂರ್ತಿ ಅವರಿಗೆ ಜೀ ಕನ್ನಡ ಹಾಗೂ ಹ್ಯುಂಡೈ ಮೋಟಾರ್ಸ್ ಅವರಿಂದ ಹ್ಯುಂಡೈ ಕಾರ್ ಬಹುಮಾನವಾಗಿ ನೀಡಲಾಯಿತು. ಮೊದಲ ರನ್ನರ್ ಅಪ್ ರವೀಂದ್ರ ರೈ ಅವರಿಗೆ ಹಿರೋ ಹೊಂಡಾ ಸಿಬಿಝಡ್, ಎರಡನೇ ರನ್ನರ್ ಅಪ್ ಸುರೇಶ್ ಬಾಬು ಅವರಿಗೆ ಫ್ಯಾಷನ್ ಪ್ಲಸ್, ಮೂರನೇ ರನ್ನರ್ ಅಪ್ ನಂಜುಂಡಯ್ಯ ಅವರಿಗೆ ಹಿರೋ ಹೊಂಡಾ ಸಿಡಿಡಿಲಕ್ಸ್ ದ್ವಿಚಕ್ರ ವಾಹನವನ್ನು ನೀಡಲಾಯಿತು.

ಒಂದು ಪ್ರಯೋಗವಾಗಿ ಡ್ಯಾಡಿ ನಂ 1 ಕಾರ್ಯಕ್ರಮವನ್ನು ಜೀ ಕನ್ನಡ ಪ್ರಾರಂಭಿಸಿ ಯಶಸ್ವಿಯಾಗಿದೆ. ವೀಕ್ಷಕರ ಪ್ರತಿಕ್ರಿಯೆಯಿಂದ ಉತ್ತೇಜಿತವಾಗಿರುವ ನಾವು ಡ್ಯಾಡಿ ನಂ 1 ಕಾರ್ಯಕ್ರಮದ ಮುಂದಿನ ಕಂತನ್ನು ಇನ್ನೂ ಹೆಚ್ಚಿನ ಉತ್ತಮ ಆಟಗಳೊಂದಿಗೆ ಫೆಬ್ರುವರಿ 21ರಿಂದ ಪ್ರಸಾರಮಾಡಲಿದ್ದೇವೆ. ಹೊಸ ಕಂತಿಗೆ ನಟ ಅನಿರುದ್ಧ್ ನಿರೂಪಣೆಯನ್ನು ನಡೆಸಿಕೊಡಲಿದ್ದಾರೆ ಎಂದು ಜೀ ಕನ್ನಡ ವ್ಯವಹಾರ ವಿಭಾಗ ಮುಖ್ಯಸ್ಥ ಜೆ.ಶೇಖರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜೀ ಕುಣಿಯೋಣು ಬಾರಾ ವಿಜೇತೆಯಾಗಿ ರಶ್ಮಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada