For Quick Alerts
  ALLOW NOTIFICATIONS  
  For Daily Alerts

  ಹಾಯ್ ಬೆಂಗ್ಳೂರ್ ವರದಿ ಬಂಡಲ್: ನಟಿ ಪೂಜಾ

  By Mahesh
  |

  'ನೀವು ತಪ್ಪು ಮಾಡಿಲ್ಲ ಎಂದರೆ ಯಾರಿಗೂ ಹೆದರಬೇಡಿ. ಈ ರೀತಿ ಖಚಡಾ ಪೇಪರ್ ಕೊಂಡುಕೊಳ್ಳಬೇಡಿ' ಎಂದು ಹೇಳಿದ ಜನಪ್ರಿಯ ಕಾಲಿವುಡ್ ತಾರೆ ಪೂಜಾ ಉಮಾಶಂಕರ್ ಅವರ ಕಣ್ಣಲ್ಲಿ ಆಕ್ರೋಶ ಎದ್ದು ಕಾಣುತ್ತಿತ್ತು.

  'ತಮಿಳು ನಟಿ ಶೃಂಗೇರಿ ಪೂಜಾ ಬ್ಲೂ ಫಿಲಂನಲ್ಲಿ ಬೆತ್ತಲೆ' ಎಂಬ ತಲೆ ಬರೆಹದೊಂದಿಗೆ ಎರಡು ವಾರ ವರದಿ ಮಾಡಿದ ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆ ವಿರುದ್ಧ ನಟಿ ಪೂಜಾ ತಿರುಗಿ ಬಿದ್ದಿದ್ದಾರೆ. ಹಣಕ್ಕಾಗಿ ಬ್ಲೂಫಿಲಂ ದಂಧೆಗೆ ಇಳಿಯುವಂಥ ಸಂಸ್ಕೃತಿ ನನ್ನದಲ್ಲ. ನಾನು ಅಚ್ಚ ಕನ್ನಡದ ಹುಡುಗಿ ಎಂದು ಪೂಜಾ ಸ್ಪಷ್ಟವಾಗಿ ಕನ್ನಡದಲ್ಲೇ ತಮ್ಮ ನೋವನ್ನು ವ್ಯಕ್ತಪಡಿಸಿದರು.

  ಭೀಮಾತೀರದಲ್ಲಿ ಚಿತ್ರದ ಕಥೆ ವಿವಾದ, ಪತ್ರಕರ್ತ ರವಿ ಬೆಳೆಗೆರೆ vs ಚಿತ್ರೋದ್ಯಮ ಕಾದಾಟ ಸರಣಿ ಮುಂದುವರೆದ ಭಾಗದ ಚರ್ಚೆ(ಏ.17)ಯಲ್ಲಿ ನಟ ವಿಜಯ್, ನಟಿ ಪೂಜಾ, ಪತ್ರಕರ್ತ ಸತೀಶ್ ಅವರು ಪಾಲ್ಗೊಂಡಿದ್ದರು.

  ಈಗಷ್ಟೇ ಭೀಮಾತೀರದ ಜನರ ಆತಿಥ್ಯ ಸ್ವೀಕರಿಸಿದ ಬಂದಿದ್ದ ವಿಜಯ್, ಅಲ್ಲಿನ ಜನಜೀವನ, ಚಂದಪ್ಪ ಅವರ ಕುಟುಂಬದ ಬಗ್ಗೆ ವಿವರಿಸಿದರು. ಪತ್ರಕರ್ತ ಸತೀಶ್ ಅವರು ರವಿ ಬೆಳೆಗೆರೆ ಬೆಳೆದು ಬಂದ ಹಾದಿ.. ಅವರ ಗನ್ ಮಾಫಿಯಾ, ಚಂದಪ್ಪನನ್ನು ಬಳಸಿಕೊಂಡ ರೀತಿ, ಬೆಂಗಳೂರಿನ ಅಂಡರ್ ವರ್ಲ್ಡ್ ಬಗ್ಗೆ ರಹಸ್ಯವನ್ನು ಬಹಿರಂಗಗೊಳಿಸಿದರು.

  ಕೊನೆಗೆ ರವಿಬೆಳೆಗೆರೆ ಅವರ ಅಪ್ಪ ಯಾರೂ ಎಂಬ ಪ್ರಶ್ನೆಗೂ ಉತ್ತರಿಸಿ...ಲಕ್ಷ್ಮಣರಾವ್ ಎಂಬುವರ ಮಗ ಎಂದು ಸತ್ಯನಾರಾಯಣ ಪೇಟೆಯ ಕಥೆಯನ್ನು ವಿಸ್ತಾರವಾಗಿ ವಿವರಿಸಿದರು.

  ಪೂಜಾ ಅಳಲು: ಈ ನಡುವೆ ಪೂಜಾ ಅವರು ತಮಗಾದ ಅನ್ಯಾಯದ ಕತೆ ಹೇಳತೊಡಗಿದರು. ಅದರ ಮುಖ್ಯಾಂಶ ಇಂತಿದೆ...

  * ಬೆಳೆಗೆರೆ ಅವರಿಂದ ನೊಂದ ಹೆಂಗಸರು ತಿರುಗಿ ಬೀಳಿ ಎಂದು ನಟ ವಿಜಯ್ ಅವರು ಕರೆ ನೀಡಿದ್ದು ಸರಿಯಾಗೇ ಇದೆ.
  * ನಾನು 2 ವಾರ ಕಾದೆ. ಅವರು ಬರೆದಿರುವ ಸುಳ್ಳು ಸುದ್ದಿ ಬಗ್ಗೆ ಕ್ಷಮಾಪಣೆ ಅಲ್ಲದಿದ್ದರೂ ಸ್ಪಷ್ಟನೆ ಕೊಡುತ್ತಾರೆ ಎಂದು ಆದರೆ, ಒಂದು ಸಾಲು ಕೂಡಾ ಬರೆದಿಲ್ಲ.
  * ಹೀಗಾಗಿ ವಿಶ್ವೇಶ್ವರ ಭಟ್ ಅವರನ್ನು ಸಂಪರ್ಕಿಸಿ.. ನನ್ನ ನೋವನ್ನು ಜನತೆ ಮುಂದಿಡುತ್ತಿದ್ದೇನೆ.
  * ಶೃಂಗೇರಿ ಪೂಜಾ ಎಂದು ಏಕೆ ಬರೆದರು? ಯಾರು ಅವರಿಗೆ ಮಾಹಿತಿ ನೀಡಿದರೋ ಗೊತ್ತಿಲ್ಲ. ನಮ್ಮ ತಂದೆ ಊರು ಶೃಂಗೇರಿ. ಅಮ್ಮನದು ಶ್ರೀಲಂಕಾ. ಇಬ್ಬರು ಅಲಹಾಬಾದ್ ವಿವಿಯಲ್ಲಿ ಭೇಟಿ ಆದಾಗ ಪ್ರೀತಿಸಿ ಮದುವೆಯಾದರು.
  * ಮನೆಯಲ್ಲಿ ನಾನು ನನ್ನ ಸೋದರ ಕನ್ನಡದಲ್ಲೇ ಮಾತನಾಡುವುದು. ಸಿಂಹಳಿ ಸಿನಿಮಾಗಳಲ್ಲೂ ನಟಿಸಿದ್ದೇನೆ.
  * ಈ ವರದಿ ಬಂದ ದಿನ ಅಪ್ಪ ಶೃಂಗೇರಿಯಲ್ಲಿ ನನ್ನ ಕಸಿನ್ ಮದುವೆಗೆ ಹೊರಡಲು ಸಿದ್ಧರಾಗಿದ್ದರು. ನಾನು ಶ್ರೀಲಂಕಾದಲ್ಲಿ ಸಿನಿಮಾ ಶೂಟಿಂಗ್ ನಲ್ಲಿದ್ದೆ. ಅಪ್ಪ ಒಂದೇ ಸಮ ಅಳುತ್ತಿದ್ದರು. ಶೃಂಗೇರಿಯಂಥ ಪುಟ್ಟ ಊರಲ್ಲಿ ತಲೆ ಎತ್ತಿ ಓಡಾಡಲು ಅಪ್ಪನಿಗೆ ಕಷ್ಟವಾಗಬೇಕಾದರೆ, ನನಗೆ ಬೆಂಗಳೂರಿನಲ್ಲಿ ಹೇಗೆ ಓಡಾಡಲಿ.

  * ನಾನು ಹೆಣ್ಣೂರಿನಲ್ಲಿ ವಾಸವಾಗಿದ್ದೇನೆ. ಸಾಧಾರಣವಾಗಿ ಬಸ್ ನಲ್ಲೇ ಓಡಾಡೋದು. ಈ ಸುಳ್ಳು ವರದಿ ನಂತರ ನನ್ನ ಸ್ವಾತಂತ್ರ್ಯ ಕಿತ್ತುಕೊಂಡ ಹಾಗೇ ಆಗಿದೆ.
  * ಶ್ರೀಲಂಕಾದಲ್ಲಿರುವ ನನ್ನಜ್ಜನಿಗೆ 95 ವರ್ಷ, ಅಜ್ಜಿಗೆ 90 ವರ್ಷ ಅವರಿಗೆ ಈ ಸುಳ್ಳು ಸುದ್ದಿ ತಿಳಿದರೆ ಏನಾಗಬೇಡ. ಅಮ್ಮನಿಗೆ ಸಮಾಧಾನ ಮಾಡಲು ಆಗುತ್ತಿಲ್ಲ.

  ನನ್ನ ಪ್ರಶ್ನೆಗೆ ಉತ್ತರಿಸಿ: ಸಿನಿಮಾ ತೆಗೆಯುವ ಮುನ್ನ ಸೌಜನ್ಯಕ್ಕಾದರೂ ನನ್ನನ್ನು ಸಂಪರ್ಕಿಸಬೇಕಿತ್ತು ಎಂದು ಹೇಳುವ ರವಿ ಬೆಳೆಗೆರೆ ಅವರು ಈ ಬಂಡಲ್ ವರದಿ ಪ್ರಕಟಿಸುವ ಮುನ್ನ ನನ್ನನ್ನು ಏಕೆ ಪ್ರಶ್ನಿಸಲಿಲ್ಲ.

  ಶೃಂಗೇರಿಯಲ್ಲಿ ಉಮಾಶಂಕರ್ ಮಗಳು ಎಂದರೆ ಸಾಕಿತ್ತು. ತಮಿಳು ಚಿತ್ರರಂಗದ ನಟ, ನಟಿಯರ ಸಂಘದ ಅಧ್ಯಕ್ಷ ಶರತ್ ಕುಮಾರ್ ಗೆ ಕಾಲ್ ಮಾಡಬಹುದಿತ್ತು. ಆದರೆ, ಮಾಡಿಲ್ಲ ಏಕೆಂದರೆ ಅದು ಅವರಿಗೆ ಬೇಕಿಲ್ಲ. 14 ರುಗೆ ಕಳೆದ ಮಾನ ಮತ್ತೆ ಕೊಡಿಸಲು ಸಾಧ್ಯವಿಲ್ಲ.

  * ಪೇಪರ್ ಸೇಲ್ ಆಗಬೇಕು ಎಂದರೆ ತಮ್ಮ ಕಥೆಯನ್ನೇ ರೋಚಕವಾಗಿ ಬರೆದು 100 ರು ಗೆ ಮಾರಲಿ. ನಾನೇ ಕೊಂಡುಕೊಳ್ಳುತ್ತೇನೆ
  * ಇದು ನನ್ನೊಬ್ಬಳ ಕಥೆಯಲ್ಲ. ನೊಂದ ಎಷ್ಟೊ ಹುಡುಗಿಯರು ಸಿಡಿದೇಳಬೇಕಿದೆ.

  ಸುವರ್ಣ ಸುದ್ದಿ ವಾಹಿನಿ ಆರಂಭಿಸಿರುವ ಈ ಅಭಿಯಾನ ಇಲ್ಲಿಗೆ ಕೊನೆಗೊಳ್ಳದಿರಲಿ.. ನನ್ನಂಥ ಅನೇಕ ಯುವತಿಯರ ಕಂಬನಿಗೆ ದನಿಯಾಗಲಿ ಎಂದು ಪೂಜಾ ಕೊನೆಯಲ್ಲಿ ಮನವಿ ಮಾಡಿಕೊಂಡರು.

  English summary
  Popular South Indian Actress Pooja Umashankar denied Hi Bangalore Tabloid report about her acted in a blue film. Pooja condemned the report and editor Ravi Belagere during the panel discussion held in Suvarna News Channel on Apr.17.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X