»   » ಸುವರ್ಣ ಸಂಭ್ರಮದಲ್ಲಿ 'ಇದ್ದರೆ ಇರಬೇಕು ನಿನ್ಹಾಂಗ'

ಸುವರ್ಣ ಸಂಭ್ರಮದಲ್ಲಿ 'ಇದ್ದರೆ ಇರಬೇಕು ನಿನ್ಹಾಂಗ'

Posted By:
Subscribe to Filmibeat Kannada

ಉತ್ತರ ಕರ್ನಾಟಕ ಸತ್ಯಕಥೆಯೊಂದನ್ನು ಆಧರಿಸಿ 'ಇದ್ದರೆ ಇರಬೇಕು ನಿನ್ನಹಾಂಗ' ದೈನಿಕ ಧಾರಾವಾಹಿಯು ಇದೇ ರಥಸಪ್ತಮಿ ಜನವರಿ 22 ರಂದು ಸುವರ್ಣವಾಹಿನಿಯಲ್ಲಿ ಸುವರ್ಣ ಮಹೋತ್ಸವ ಆಚರಿಸಲಿದೆ. ಒಬ್ಬ ಭ್ರಷ್ಠ ಅಧಿಕಾರಿ ಹಾಗೂ ಸ್ವಾಭಿಮಾನಿ ಹೆಣ್ಣೊಬ್ಬಳ ಸುತ್ತ ಹೆಣೆದ ಕಥೆ ಈ ಧಾರಾವಾಹಿ.

ಹಾವೇರಿ, ದೇವಗಿರಿ ಕರ್ಜಗಿ ಸುತ್ತಮುತ್ತ ನಿರಂತರವಾಗಿ ಚಿತ್ರೀಕರಣ ನಡೆದಿದ್ದು ಅಲ್ಲಿನ ಸ್ಥಳೀಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 50 ಕಂತುಗಳನ್ನು ಪೂರೈಸಿ ಮುನ್ನುಗ್ಗಿರುರುವ ಈ ಧಾರಾವಾಹಿಯು ಮೌನಿ ಆರ್ಟ್ ಲಾಂಛನದಲ್ಲಿ ಭಗವಾನ್ ಸಾರಂಗ್ ನಿರ್ಮಿಸುತ್ತಿದ್ದು, ಮಹೇಶ್ ಸಾರಂಗ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಪ್ರಮುಖ ತಾರಾಗಣದಲ್ಲಿ ಶ್ರೀನಿವಾಸ್ ಪ್ರಭು, ಉಮೇಶ್ ಹೆಗ್ಗಡೆ, ಪೂರ್ಣಿಮಾ ಸಾರಂಗ್, ಅಶೋಕ್ ಹೆಗಡೆ, ಪೂರ್ಣ ಚಂದ್ರ ತೇಜಸ್ವಿ, ಮಾಲತಿಶ್ರೀ, ಲಕ್ಷ್ಮಿ ಹೆಗ್ಗಡೆ, ಸಂಜೀವ್ ಅಲ್ಲದೆ ಹಿರಿಯ ಕಲಾವಿದರಾದ ಜಿ.ಕೆ. ಗೋವಿಂದರಾವ್ ಮುಂತಾದವರಿದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada