ಪ್ರಳಯ ತಡೆಗೆ ಬೃಹತ್ ಬ್ರಹ್ಮಾಂಡ ಬಳಗದಿಂದ ದೀಪೋತ್ಸವ

ಜಗತ್ತು ಪ್ರಳಯದ ಭೀತಿ ಅನುಭವಿಸುತ್ತಿದ್ದು ಇದರಿಂದ ಪಾರಾಗುವ ಸಲುವಾಗಿ ಮಂಗಳವಾರದ(ಫೆ.22) ಶುಭ ದಿವಸದಂದು ಸಂಜೆ 7 ರಿಂದ 7.30 ಗಂಟೆಯವರೆಗೂ ರಾಜ್ಯದಾದ್ಯಂತ ದೀಪೋತ್ಸವ ನೆರವೇರಿಸಿದರೆ ಜಗತ್ತಿಗೆ ಶ್ರೇಯಸ್ಸು ಲಭಿಸಲಿದೆ ಎಂಬ ದೃಷ್ಟಿಯಿಂದ ಈ ಕಾರ್ಯ ನೆರವೇರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಈ ಸಲುವಾಗಿ ಅವರು ಈಗಾಗಲೇ ಅವರು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದು ದೀಪೋತ್ಸವ ಕುರಿತಾದ ಮಾಹಿತಿ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರಮಾಣದ ದೀಪೋತ್ಸವ ನೆರವೇರಲಿದೆ. ಲೋಕ ಕಲ್ಯಾಣದ ದೂರದೃಷ್ಠಿ ಹೊಂದಿರುವ ದೀಪೋತ್ಸವದಲ್ಲಿ ರಾಜ್ಯದ ಜನತೆ ಅಪಾರ ಪ್ರಮಾಣದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಜೀ ಕನ್ನಡದ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಲ್ಲಿ ದೀಪೋತ್ಸವ ನಡೆಯುವ ಸ್ಥಳಗಳ ವಿವರ ಇಂತಿದೆ. ಶ್ರೀ ಬಂಡಿ ಮಹಾಕಾಳಿ ದೇವಸ್ಥಾನ ಕೆಂಪೇಗೌಡ ನಗರ; ಶ್ರೀ ಮುಕ್ತಿನಾಗ ದೇವಸ್ಥಾನ, ರಾಮೋಹಳ್ಳಿ; ಶ್ರೀ ಗಂಗಮ್ಮ ದೇವಸ್ಥಾನ, ಮಲ್ಲೇಶ್ವರಂ; ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಅಲಸೂರು; ಶ್ರೀ ಬನಶಂಕರಿ ದೇವಸ್ಥಾನ, ಬನಶಂಕರಿ. ಒಟ್ಟು 27 ಜಿಲ್ಲೆಗಳಲ್ಲಿ ದೀಪೋತ್ಸವ ನಡೆಯಲಿದೆ.


Click it and Unblock the Notifications











