Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Automobiles
ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಎಸ್ಎಲ್: ಚೆನ್ನೈಯಿನ್ ಎಫ್ಸಿ vs ಎಸ್ಸಿ ಈಸ್ಟ್ ಬೆಂಗಾಲ್, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರಿನಲ್ಲಿ ಡಾನ್ಸ್ ಇಂಡಿಯಾ ಡಾನ್ಸ್ ಆಡಿಷನ್
ಭಾರತೀಯ ಕಿರುತೆರೆ ಇತಿಹಾಸದಲ್ಲಿ ಸಂಚಲನ ಮೂಡಿಸಿರುವ ಝಿ ಟಿವಿಯ ಸುಪ್ರಸಿದ್ಧ ರಿಯಾಲಿಟಿ ಶೋ ಡಾನ್ಸ್ ಇಂಡಿಯಾ ಡಾನ್ಸ್ ತನ್ನ ನಾಲ್ಕನೇ ಅವತರಣಿಕೆ ಪ್ರಾರಂಭಿಸಲು ಇದೀಗ ಸಿದ್ಧತೆ ನಡೆಸಿದೆ. ಹೊಸ ಅವತರಣಿಕೆಗೆ ಡಾನ್ಸ್ ಇಂಡಿಯಾ ಡಾನ್ಸ್ ಡಬಲ್ಸ್ ಎಂದು ಹೆಸರಿಡಲಾಗಿದ್ದು ಈಗಾಗಲೇ ಇದಕ್ಕಾಗಿ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಇಬ್ಬರ ಜೋಡಿ ಭಾಗವಹಿಸಬಹುದಾಗಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಡಿಷನ್ ಆಯೋಜಿಸಲಾಗಿದೆ.
ಇದೇ ನವಂಬರ್, 25ರ ಗುರುವಾರ ಆಡಿಷನ್ ಹಮ್ಮಿಕೊಳ್ಳಲಾಗಿದ್ದು 16 ರಿಂದ 35 ವರ್ಷ ವಯೋಮಾನದವರು ಭಾಗವಹಿಸಬಹುದು. ಆಡಿಷನ್ ನಡೆಯುವ ವಿಳಾಸ ಪ್ರೆಸಿಡೆನ್ಸಿ ಜೂನಿಯರ್ ಕಾಲೇಜ್, ನಂ. 161/ಎ, 2ನೇ ಕ್ರಾಸ್, 3ನೇ ಹಂತ, ಜೆ ಪಿ ನಗರ, ಬೆಂಗಳೂರು 560078. ಇಲ್ಲಿ ಆಯ್ಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ.
ಡಾನ್ಸ್ ಇಂಡಿಯಾ ಡಾನ್ಸ್‌ನ ಎರಡನೇ ಅವತರಣಿಕೆಯಲ್ಲಿ ಭಾಗವಹಿಸಿದ್ದ ಕೃತಿ, ಧರ್ಮೇಶ್ ಹಾಗೂ ಕುನ್ವರ್ ಅಮರ್ ಅವರು ಈ ಆಡಿಷನ್‌ನ ವೇಳೆ ಹಾಜರಿದ್ದ ಹೊಸ ಅಭ್ಯರ್ಥಿಗಳಿಗೆ ಶುಭ ಹಾರೈಸಲಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್‌ನ ಕಳೆದ ಮೂರು ಅವತರಣಿಕೆಗಳಲ್ಲಿ ಲುಕ್ಕಿಂಗ್ ಪಾಪಿಂಗ್, ಬಿ ಬಾಯಿಂಗ್, ಛಾ ಛಾ ಛಾ, ರುಂಬಾ, ಜೆವಿ, ಕಾಂಟೆಂಪ್ರರಿ, ಆಫ್ರೋ ಜಾಸ್ ಹಾಗೂ ಇತರೆ ನೃತ್ಯ ಪ್ರಾಕಾರಗಳಿಗೆ ಒತ್ತು ನೀಡಲಾಗಿದ್ದು, ಹೊಸ ಅವತರಣಿಕೆಯಲ್ಲಿ ದಿ ಫ್ಯಾಷನ್, ದಿ ಫ್ರೆನ್ಸಿ, ದಿ ಕೆಮರಾಯ್ಡರಿ ಹಾಗೂ ಇತರೆ ಪ್ರಾಕಾರಗಳಿಗೆ ಒತ್ತು ನೀಡಲಿದೆ.
ಕಳೆದ ಮೂರು ಅವತರಣಿಕೆಗಳಲ್ಲಿ ಸಲ್ಮಾನ್, ಶಕ್ತಿ ಮೋಹನ್, ಧರ್ಮೇಶ್ ಮತ್ತು ಬಿನ್ನಿಯಂತಹ ಅದ್ಭುತ ನೃತ್ಯ ಪ್ರತಿಭೆಗಳನ್ನು ದೇಶಕ್ಕೆ ಪರಿಚಯಿಸಿದ್ದು ಈ ಸೀಸನ್‌ನಲ್ಲಿ ಇಬ್ಬರು ಪ್ರತಿಭಾನ್ವಿತ ನೃತ್ಯಪಟುಗಳನ್ನು ಪರಿಚಯಿಸಲಿದ್ದು ಅವರ ಭವಿಷ್ಯ ಉಜ್ವಲವಾಗಲಿದೆ.
ಡಾನ್ಸ್ ಇಂಡಿಯಾ ಡಾನ್ಸ್‌ನ ಆಡಿಷನ್ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಅಜ್ಞಾತವಾಗಿರುವ ಪ್ರತಿಭೆಗಳನ್ನು ಹುಡುಕುವ ಸುವರ್ಣ ಅವಕಾಶವಾಗಿದ್ದು ಇದನ್ನು ನೃತ್ಯ ಪಟುಗಳು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಈಗಾಗಲೇ ಅನೇಕರು ಆಡಿಷನ್‌ಗಾಗಿ ನೊಂದಾಯಿಸಿಕೊಂಡಿದ್ದು ಬೆಂಗಳೂರಿನ ಆಡಿಷನ್ ನಂತರ ಮುಂಬೈನಲ್ಲಿ ಮೆಘಾ ಆಡಿಷನ್ ನಡೆಯಲಿದೆ.