twitter
    For Quick Alerts
    ALLOW NOTIFICATIONS  
    For Daily Alerts

    ಜಾಹೀರಾತುಗಳಿಲ್ಲದೆ ಬಸವಳಿದ ದೂರದರ್ಶನ

    By Rajendra
    |

    ವಿವಾದಗಳಿಂದ ಹೈರಾಣಾಗಿದ್ದ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಕ್ರೀಡಾಕೂಟದ ಪ್ರಸಾರದ ಹಕ್ಕನ್ನು ಪಡೆದಿರುವ ಸರಕಾರಿ ಸ್ವಾಮ್ಯದ ದೂರದರ್ಶನಕ್ಕೆ ಜಾಹೀರಾತುಗಳೆ ಇಲ್ಲದಂತಾಗಿದೆ. ದೂರದರ್ಶನದಲ್ಲಿ ಜಾಹೀರಾತು ನೀಡಲು ಕಂಪನಿಗಳು ಮುಂದೆ ಬರುತ್ತಿಲ್ಲ.

    ಅಕ್ಟೋಬರ್ 3 ರಿಂದ 14ರವರೆಗೆ ಒಟ್ಟು 12 ದಿನಗಳ ಕಾಲ ಕ್ರೀಡಾ ಕೂಟ ನಡೆಯಲಿದೆ. ಈ ಕ್ರೀಡಾಕೂಟದ ನೇರಪ್ರಸಾರದ ಮೂಲಕ ಜಾಹೀರಾತಿನಲ್ಲಿ ರು.200 ಕೋಟಿ ಗಳಿಸಬೇಕು ಎಂಬುದು ದೂರದರ್ಶನದ ಗುರಿ. ಆದರೆ ಜಾಹೀರಾತು ನೀಡಲು ಕಂಪನಿಗಳು ಹಿಂದೇಟು ಹಾಕಿವೆ. ಹಾಗಾಗಿ ದೂರದರ್ಶನ ತನ್ನ ಗುರಿಯನ್ನು ರು.100 ಕೋಟಿಗೆ ನಿಗದಿಪಡಿಸಿಕೊಂಡಿದೆ.

    ಸರ್ಕಾರಿ ಸ್ವಾಮ್ಯದ ಎನ್ ಟಿಪಿಸಿ ಹಾಗೂ ಪವರ್ ಗ್ರಿಡ್ ಕಂಪನಿಗಳು ಸಹ ಕ್ರೀಡಾಕೂಟಕ್ಕೆ ನೀಡಿದ್ದ ಪ್ರಾಯೋಜಕತ್ವವನ್ನು ಹಿಂದಕ್ಕೆ ಪಡೆದಿವೆ. ಇದರಿಂದ ಬಸವಳಿದಿರುವ ದೂರದರ್ಶನ ಜಾಹೀರಾತು ದರವನ್ನು ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ಪ್ರಸಾರ ಭಾರತಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

    ಈ ಹಿಂದೆ ಪ್ಯಾಕೇಜ್ ಒಂದಕ್ಕೆ ರು.25 ಕೋಟಿಗೂ ಹೆಚ್ಚು ಹಣ ನಿಗದಿಪಡಿಸಲಾಗಿತ್ತು. ಕಂಪನಿಗಳು ಮುಂದೆ ಬಾರದೆ ಇದ್ದ ಕಾರಣ ಈಗ ರು.5 ಕೋಟಿ ಯಿಂದ ರು.10 ಕೋಟಿಗೆ ಜಾಹೀರಾತು ದರವನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಒಂದೊಂದೆ ಕಂಪನಿಗಳು ಮುಂದಡಿಯಿಡುತ್ತಿತ್ತು ದೂರದರ್ಶನ ಜಾಹೀರಾತು ವ್ಯಾಪಾರ ಸುಧಾರಿಸುತ್ತಿದೆ.

    ಚಂದನ ಸೇರಿದಂತೆ ಒಟ್ಟು 16 ಪ್ರಾದೇಶಿಕ ಭಾಷೆಗಳಲ್ಲಿ ಹಾಗೂ ಆರು ರಾಷ್ಟ್ರೀಯ ವಾಹಿನಿಗಳಲ್ಲಿ ಕಾಮನ್ ವೆಲ್ತ್ ಕ್ರೀಡೆಗಳನ್ನು ದೂರದರ್ಶನ ನೇರ ಪ್ರಸಾರ ಮಾಡಲಿದೆ. ಹತ್ತು ಸೆಕೆಂಡ್ ಗಳ ಜಾಹೀರಾತಿನ ಸ್ಲಾಟ್ ಗೆ ರು.1 ಲಕ್ಷ ನಿಗದಿಪಡಿಸಲಾಗಿದ್ದು ಜಾಹೀರಾತುದಾರರು ಚಾನೆಲ್ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

    Tuesday, August 24, 2010, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X