For Quick Alerts
  ALLOW NOTIFICATIONS  
  For Daily Alerts

  ಯಾರಾಗಲಿದ್ದಾರೆ ಡಾನ್ಸ್ ಕರ್ನಾಟಕ ಡಾನ್ಸ್ ಚಾಂಪಿಯನ್?

  By Rajendra
  |

  ಕನ್ನಡದ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ವಿಭಿನ್ನತೆ ಹಾಗೂ ಹೊಸತನ ಮೂಡಿಸಿದ ಜೀ ಕನ್ನಡದ ಅದ್ದೂರಿ ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' ಇದೀಗ ಅಂತಿಮ ಘಟ್ಟ ತಲುಪಿದೆ. ಕಳೆದ ಮೂರು ತಿಂಗಳ ಹಿಂದೆ ಆರಂಭವಾದ ಈ ಕಾರ್ಯಕ್ರಮ ನಾಡಿನ ಪ್ರತಿಭಾವಂತ ನೃತ್ಯಪಟುಗಳಿಗೆ ವೇದಿಕೆ ಒದಗಿಸಿದ್ದು ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ವಿವಿಧ ಹಂತಗಳನ್ನು ದಾಟಿ ಬಂದಿರುವ ಡಾನ್ಸ್ ಕರ್ನಾಟಕ ಡಾನ್ಸ್‌ನ ಫೈನಲ್ ಸಂಚಿಕೆ ಸೆಪ್ಟೆಂಬರ್ 25ರ ಶನಿವಾರ ಹಾಗೂ ಭಾನುವಾರ(ಸೆ.26) ರಾತ್ರಿ 9 ಗಂಟೆಯಿಂದ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

  ಕನ್ನಡಿಗರಿಗೆ ಅದ್ದೂರಿ ಕಾರ್ಯಕ್ರಮಗಳನ್ನು ನೀಡುತ್ತಿರುವ ಜೀ ಕನ್ನಡ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮವನ್ನು ಸಹ ಬಾರಿ ಅದ್ಧೂರಿಯಾಗಿ ಆರಂಭಿಸಿತ್ತು. ಸುಮಾರು 32 ಸಂಚಿಕೆಗಳಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೃತ್ಯಪಟುಗಳಿಂದ ರಾಜ್ಯದಾದ್ಯಂತ ಅರ್ಜಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತಿಯಿಂದ ಸಾವಿರಾರು ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು ಆದರೆ ಅಂತಿಮವಾಗಿ ಆಯ್ಕೆಯಾಗಿದ್ದವರು 12 ಜನ ಮಾತ್ರ.

  ಇವರ ನಡುವೆ ಕಠಿಣ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೊದಲ ಸುತ್ತಿಗೆ ಆಯ್ಕೆಯಾಗಿದ್ದವರ ಪೈಕಿ ಇದೀಗ ನೃತ್ಯಪಟುಗಳಷ್ಟೇ ಫೈನಲ್ ಪ್ರವೇಶಿಸಿದ್ದು ಇವರ ನಡುವ ಬಾರಿ ಹಣಾಹಣಿ ನಿರೀಕ್ಷಿಸಲಾಗಿದೆ. ಅಂತಿಮ ಹಂತಕ್ಕೆ ಭೂಷಣ್, ವಿನಯ್, ರಮ್ಯಾ ಹಾಗೂ ಆಶಿಕಾ ಅವರು ಪ್ರವೇಶ ಪಡೆದಿದ್ದಾರೆ.

  ಡಾನ್ಸ್ ಕರ್ನಾಟಕ ಡಾನ್ಸ್‌ನ ಅಂತಿಮ ಸಂಚಿಕೆಗಳು ಅತ್ಯಾಕರ್ಷಕವಾಗಿದ್ದು ಕನ್ನಡದ ಹಿಪ್ ಹಾಪ್ ಹಾಡುಗಳಿಗೆ ಸ್ಪರ್ಧಿಗಳು ಹೆಜ್ಜೆ ಹಾಕಿದ್ದಾರೆ. ಜೊತೆಗೆ ವಿಶೇಷ ನೃತ್ಯ ಪ್ರದರ್ಶನಗಳು ತೆರೆಯಲ್ಲಿ ಅನಾವರಣಗೊಳ್ಳಲಿವೆ. ಈ ನಡುವೆ ಸಂಚಿಕೆಯ ಉದ್ದಕ್ಕೂ ಮೂಡಿಬಂದ ಅನುಶ್ರೀ ಹಾಗೂ ವಿನಯ್ ಅವರ ಗಾಸಿಪ್‌ಗೂ ತೆರೆಬೀಳಲಿದೆ.

  ಈ ವೈವಿಧ್ಯಮಯ ನೃತ್ಯ ಕಾರ್ಯಕ್ರಮಕ್ಕೆ ಖ್ಯಾತ ನಟಿ ಸಂಜನಾ ಹಾಗೂ ನೃತ್ಯ ನಿರ್ದೇಶಕ ಇಮ್ರಾನ್ ತೀರ್ಪುಗಾರರಾಗಿದ್ದು ಅಂತಿಮ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಅಂತಿಮ ಸಂಚಿಕೆಗೆ ಖ್ಯಾತ ನಿರೂಪಕಿ ಅನುಶ್ರೀ ಅವರ ಲವಲವಿಕೆಯ ನಿರೂಪಣೆ ಇದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X