»   » ಉದಯೋನ್ಮುಖ ನೃತ್ಯಪಟುಗಳಿಗೆ ಜೀ ಕನ್ನಡ ಕರೆ

ಉದಯೋನ್ಮುಖ ನೃತ್ಯಪಟುಗಳಿಗೆ ಜೀ ಕನ್ನಡ ಕರೆ

Posted By:
Subscribe to Filmibeat Kannada

ಕನ್ನಡದ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ವಿಭಿನ್ನತೆ ಹಾಗೂ ಹೊಸತನ ಮೂಡಿಸಿದ ಜೀ ಕನ್ನಡ ಈಗ ನೂತನ ಡಾನ್ಸ್ ಶೋ ಒಂದನ್ನು ಕರ್ನಾಟಕದ ಯುವಜನತೆಗಾಗಿ ಅರ್ಪಿಸುತ್ತಿದೆ. ಪ್ರತಿಯೊಬ್ಬರಲ್ಲಿಯೂ ತನ್ನದೇ ಆದ ಪ್ರತಿಭೆಗಳಿರುತ್ತವೆ ಎಂಬುದನ್ನು ಮನಗಂಡಿರುವ ಜೀ ಕನ್ನಡ ಕರ್ನಾಟಕದ ಯುವಜನತೆಯಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನು ಹುಡುಕುವ ನಿಟ್ಟಿನಲ್ಲಿ 'ಡಾನ್ಸ್ ಕರ್ನಾಟಕ ಡಾನ್ಸ್' ಎಂಬ ನೂತನ ರಿಯಾಲಿಟಿ ಶೋ ಒಂದನ್ನು ಆರಂಭಿಸುತ್ತಿದ್ದು ಇದಕ್ಕಾಗಿ ಉದಯೋನ್ಮುಖ ನೃತ್ಯ ಪಟುಗಳಿಗಾಗಿ ಶೋಧನೆ ಆರಂಭಿಸಿದೆ.

ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ವೈವಿಧ್ಯಮ ಹಾಗೂ ಅದ್ಧೂರಿ ರಿಯಾಲಿಟಿ ಶೋಗೆ ಚಾಲನೆ ನೀಡುತ್ತಿದ್ದು 18 ರಿಂದ 26 ವರ್ಷ ವಯೋಮಾನದ ನೃತ್ಯಪಟುಗಳು ಜೋಡಿಯಾಗಿ (ಹುಡುಗ ಹುಡುಗಿ) ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ಸ್ವವಿವರ ಹಾಗೂ ತಮ್ಮ ಪ್ರದರ್ಶನದ ಸಿಡಿ ಅಥವಾ ಡಿವಿಡಿಯನ್ನು ನಮಗೆ ಕಳುಹಿಸತಕ್ಕದ್ದು.

ತಮ್ಮ ವಿವರಗಳನ್ನು ಡಾನ್ಸ್ ಕರ್ನಾಟಕ ಡಾನ್ಸ್, ಪೋಸ್ಟ್ ಬಾಕ್ಸ್ ನಂ. 5199, ಜೀ ನ್ಯೂಸ್ ಲಿಮಿಟೆಡ್, ಜೀ ಕನ್ನಡ, ಬೆಂಗಳೂರು-01 ಈ ವಿಳಾಸಕ್ಕೆ ಕಳುಹಿಸಬಹುದು. ಆಯ್ಕೆಯಾದವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ದೊರೆಯಲಿದ್ದು, ಅಂತಿಮ ವಿಜೇತರಿಗೆ 'ಡಾನ್ಸ್ ಕರ್ನಾಟಕ ಡಾನ್ಸ್' ಬಿರುದನ್ನು ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆ 95388 29111 ಸಂಪರ್ಕಿಸಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada