»   » ಕೋಟ್ಯಾಧಿಪತಿ : ಗೋಲ್ಡನ್ ಗರ್ಲ್ ರಮ್ಯ ಸಂದರ್ಶನ

ಕೋಟ್ಯಾಧಿಪತಿ : ಗೋಲ್ಡನ್ ಗರ್ಲ್ ರಮ್ಯ ಸಂದರ್ಶನ

Posted By: *ಪ್ರಕಾಶ್ ಉಪಾಧ್ಯಾಯ
Subscribe to Filmibeat Kannada
Puneeth and Ramya
ಗುರುವಾರದ (ಮಾ 29 ) ಪುನೀತ್ ರಾಜಕುಮಾರ್ ನಡೆಸಿ ಕೊಡುವ ಕನ್ನಡದ ಕೋಟ್ಯಾಧಿಪತಿ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಗೋಲ್ಡನ್ ಗರ್ಲ್ ರಮ್ಯಾ ನಮ್ಮ ಸಿನಿ ವರದಿಗಾರರಿಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಸೆಲೆಬ್ರಿಟಿ ನೀವು, ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಅನಿಸಿಕೆ?
ರಮ್ಯ: I had a lot of fun. ಈ ಕಾರ್ಯಕ್ರಮದಿಂದ ಕಲಿಯುವುದು ಬಹಳಷ್ಟು ಇದೆ. ನಮ್ಮ ತಿಳುವಳಿಕೆಯ ಶಕ್ತಿಗೆ ಕೆಲಸ ಕೊಡುವ ಕಾರ್ಯಕ್ರಮ. ಕೋಟ್ಯಾಧಿಪತಿ ತಂಡ ಮತ್ತು ಅಪ್ಪು ನನ್ನನ್ನು ಚೆನ್ನಾಗಿ ನೋಡಿಕೊಂಡರು. Really I had a blast.

ಪ್ರ: ಈ ಹಿಂದೆ ಪುನೀತ್ ಜೊತೆ ಸಿನಿಮಾದಲ್ಲಿ ನಟಿಸಿದ್ದೀರಿ, ಆದರೆ ಇದು ಬೇರೆ ಗೇಮ್ ಶೋ. ಸಿನಿಮಾಗೂ ಈ ಶೋಗೂ ಏನು ವ್ಯತ್ಯಾಸ ನಿಮ್ಮ ಪ್ರಕಾರ?
ರಮ್ಯ: ಅಪ್ಪು ನಾನು ಯಾವಾಗಲೂ ಮೆಚ್ಚುವ ವ್ಯಕ್ತಿ. ಉತ್ತಮ ನಟ ಮತ್ತೆ ಈಗ ಉತ್ತಮ ನಿರೂಪಕರಾಗಿ ಕೂಡಾ ಹೊರ ಹೊಮ್ಮುತ್ತಿದ್ದಾರೆ. ಪುನೀತ್ ಅವರಿಂದಾಗಿ ಈ ಶೋ ಮತ್ತಷ್ಟು ಜನಪ್ರಿಯ ಆಗುವುದರಲ್ಲಿ ಸಂಶಯವೇ ಇಲ್ಲ.

ಪ್ರ: ನಿಮ್ಮ ಸಿನಿಮಾ ವೃತ್ತಿ ಜೀವನ ಆಗಿದ್ದು ಪುನೀತ್ ಹೀರೋ ಆಗಿರುವ ಚಿತ್ರದ ಮೂಲಕ, ಈಗ ಕೋಟ್ಯಾಧಿಪತಿ ಶೋಗೆ ಸೆಲೆಬ್ರಿಟಿ ಆಗಿ ಬರುತ್ತಿರುವವರು ನೀವೇ ಮೊದಲು. ಈ ಶೋಗೆ ನಿಮ್ಮ ಹೆಸರನ್ನು ಯಾರು ಸೂಚಿಸಿದರು?
ರಮ್ಯ: ಅಪ್ಪು, ಸುವರ್ಣ ವಾಹಿನಿಯ ಅನೂಪ್ ಸೇರಿ ನನ್ನ ಹೆಸರನ್ನು ಸೂಚಿಸಿರಬಹುದು.

ಪ್ರ: ಈ ಶೋನಲ್ಲಿ ಎಷ್ಟು ಹಣ ಗೆದ್ರಿ?
ರಮ್ಯ: Watch the show...

ಪ್ರ: ಈ ಶೋನಲ್ಲಿ ಗೆದ್ದ ಹಣವನ್ನು ನೀವು ಕನ್ನಡ ಚಿತ್ರರಂಗಕ್ಕೆ ಶ್ರಮಿಸಿದವರಿಗೆ ನೀಡುತ್ತೀರಿ ಎಂದು ತಿಳಿಯಿತು.ನಿಮ್ಮ ಈ ನಿರ್ಧಾರಕ್ಕೆ ಕಾರಣ?
ರಮ್ಯ: ಕನ್ನಡ ಚಿತ್ರರಂಗ ಇಂದು ಈ ಮಟ್ಟಕ್ಕೆ ಬೆಳೆಯಲು ಬಹಳ ಜನರ ಪರಿಶ್ರಮವಿದೆ. ಒಬ್ಬ ವ್ಯಕ್ತಿ ಗೆದ್ದಾಗಿ ಎಲ್ಲರೂ ಜೊತೆಗಿರುತ್ತಾರೆ ಆದರೆ ಸೋತಾಗ ಯಾರೂ ಇರೋಲ್ಲ. ಸಿನಿಮಾರಂಗ ಎನ್ನವುದು ಕುಟುಂಬ ಇದ್ದ ಹಾಗೆ. ನಮ್ಮ ಕುಟುಂಬದವರನ್ನು ನಾವು ಮರೆಯಬಾರದು. I want to change that. ಹಾಗಾಗಿ ಈ ಹಣವನ್ನು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ನಮ್ಮ ಸಿನಿಮಾ ಕುಟುಂಬದವರಿಗೆ ನೀಡಲು ನಿರ್ಧರಿಸಿದ್ದೇನೆ

English summary
Ramya has become the first celebrity guest to grace the popular game show, Kannadada Kotyadhipati hosted by Puneet Rajkumar on Asianet Suvarna TV. ( Monday to Thursday) Ramya Exclusive interview with OneIndia, by Prakash Upadhyaya.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X