»   » ರಾಖಿ ಕಾ ಸ್ವಯಂವರ ಆಯ್ತು ಈಗ ರಾಖಿ ಕಿ ಶಾದಿ

ರಾಖಿ ಕಾ ಸ್ವಯಂವರ ಆಯ್ತು ಈಗ ರಾಖಿ ಕಿ ಶಾದಿ

Posted By:
Subscribe to Filmibeat Kannada

ಬಾಲಿವುಡ್ ನಟಿ ರಾಖಿ ಸಾವಂತ್ ಗೆ ಒಂಟಿ ಜೀವನ ಸಾಕಾಗಿ ಹೋಗಿದೆಯಂತೆ. ಆದಷ್ಟು ಬೇಗ ತಾಳಿಕಟ್ಟಿಸಿಕೊಳ್ಳುವುದಾಗಿ ಆಕೆ ಘೋಷಿಸಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವರು ಯಾರು? ಎಂಬಂತೆ ರಾಖಿಗೆ ತಾಳಿ ಕಟ್ಟುವ ಗಂಡ್ಯಾರು ಎಂಬ ಪ್ರಶ್ನೆ ಬಾಲಿವುಡ್ ಚಿತ್ರ ಜಗತ್ತಿನಲ್ಲಿ ಉಧ್ಬವಿಸಿದೆ.

ಈಗಾಗಲೆ ಸ್ವಯಂವರ ಏರ್ಪಡಿಸಿ ಹಲವು ಯುವಕರಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ರಾಖಿ ಇದೀಗ ಮತ್ತೊಮ್ಮೆ ಸ್ವಯಂವರ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಬಾರಿಯೂ ರಾಖಿಯ ನೆರೆವಿಗೆ ಇಮಾಜಿನ್ ಟಿವಿ ಬಂದಿದೆ. ಈ ಸಲ ಸೂಕ್ತ ವರನನ್ನು ಹುಡುಕಿಯೇ ತೀರುತ್ತೇನೆ ಎನ್ನುತ್ತಿದ್ದಾರೆ ರಾಖಿ ಎದೆ ತಟ್ಟಿ ಹೇಳಿದ್ದಾರೆ.

ಇದೀಗ ಮತ್ತೊಂದು ಸ್ವಯಂವರ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಈ ಹಿಂದೆ ನಡೆಸಿದ ಕಾರ್ಯಕ್ರಮವನ್ನೇ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಹೊಸ ಸ್ವಯಂವರ ನಡೆಸಲು ಸಿದ್ಧತೆ ನಡೆಯುತ್ತ್ತಿದೆ. ಈ ವಿಭಿನ್ನ ಕಾರ್ಯಕ್ರಮಕ್ಕೆ 'ರಾಖಿ ಕಿ ಶಾದಿ' ಎಂದು ಹೆಸರಿಡಲಾಗಿದೆ. ಟಿಆರ್ ಪಿ ರೇಟನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇಮ್ಯಾಜಿನ್ ಟಿವಿ ಮುಂದಡಿ ಇಟ್ಟಿದೆ.

'ರಾಖಿ ಕಾ ಸ್ವಯಂವರ'ದಲ್ಲಿ ಇಲೇಶ್ ಪರುಂಜುವಾಲಾಗೆ ಹಾಕಿದ ಮಾಲೆ ಆತನ ಪಾಲಿಗೆ ಉರುಳಾಗಿ ಪರಿಣಮಿಸಿತು. ರಾಖಿ ಕೈಕೊಟ್ಟ ಕಾರಣ ಆತನ ಪರಿಸ್ಥಿತಿ ಶೋಚನೀಯವಾಗಿದೆ. ಈಗ ಆತ ಭಗ್ನ ಪ್ರೇಮಿ. ಇದೀಗ ಮತ್ತೊಬ್ಬ ಯುವಕನ ಬಲಿಗಾಗಿ 'ರಾಖಿ ಕಿ ಶಾದಿ' ಎಂಬ ಬಲಿಪೀಠ ಸಿದ್ಧವಾಗಿದೆ.

Please Wait while comments are loading...