»   »  ಸೀತಾರಾಮ್ ರ ಮಾಡು ಸಿಕ್ಕದಲ್ಲ ಧಾರಾವಾಹಿ

ಸೀತಾರಾಮ್ ರ ಮಾಡು ಸಿಕ್ಕದಲ್ಲ ಧಾರಾವಾಹಿ

Posted By:
Subscribe to Filmibeat Kannada
T N Seetharam
ಈ ಟಿವಿ ಕನ್ನಡ ವಾಹಿನಿಯಲ್ಲಿ ಜೂನ್ 1ರಿಂದ ಟಿ ಎನ್ ಸೀತಾರಾಮ್ ಅವರ ಹೊಸ ಮೆಗಾ ಧಾರಾವಾಹಿ 'ಮಾಡು ಸಿಕ್ಕದಲ್ಲ' ಪ್ರಸಾರವಾಗಲಿದೆ. ಈಗಾಗಲೇ ಈ ಟಿವಿ ಕನ್ನಡ ವಾಹಿನಿಯನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರಿಗೆ ಈ ಸುದ್ದಿ ಹೊಸದಲ್ಲ. ಪ್ರತಿದಿನ ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ...ಎಂಬ ಹಾಡು ಅದಾಗಲೇ ಕೇಳಿ ಕೇಳಿ ಹಲವಾರು ಮಂದಿಗೆ ಅದು ಕಂಠಪಾಠವಾಗಿ ಹೋಗಿದೆ! ಅಷ್ಟರ ಮಟ್ಟಿಗೆ ಟಿ ಎನ್ ಸೀತಾರಾಮ್ ಅವರ ಧಾರಾವಾಹಿ ಪ್ರಭಾವ ಬೀರಿದೆ.

ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ ಎಂಬುದು ಬದುಕಿನ ನಶ್ವರತೆಯನ್ನು ಸಾರುವ ದಾಸರ ಪದ. ಟಿ ಎನ್ ಸೀತಾರಾಮ್ ಇದನ್ನು ಆಧಾರವಾಗಿಟ್ಟುಕೊಂಡು ಭೂಮಿಕಾ ಕ್ರಿಯೇಷನ್ಸ್ ನಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಜೂನ್ 1ರಿಂದ ಸೋಮವಾರದಿಂದ ಶುಕ್ರವಾರದ ತನಕ ರಾತ್ರಿ 8.30ರಿಂದ 9 ಗಂಟೆಯ ವರೆಗೆ ಪ್ರಸಾರವಾಗಲಿದೆ.

ಎರಡು ಕುಟುಂಬಗಳು ತಮ್ಮಕನಸನ್ನು ನನಸಾಗಿಸಿಕೊಳ್ಳಲು ನಡೆಸುವ ಪ್ರಯತ್ನವೇ ಧಾರಾವಾಹಿಯ ಕಥಾವಸ್ತು.ವೈದ್ಯರ ಮತ್ತು ಸಾಫ್ಟ್ ವೇರ್ ಕುಟುಂಬಗಳ ನಡುವೆ ಕತೆ ಸಾಗಲಿದೆ. ವೈದ್ಯರ ಕುಟುಂಬದಲ್ಲಿ ಅಜ್ಜಿಯ ಜತೆ ಬೆಳೆಯುವ ಮೂರು ಮಕ್ಕಳು ಹಾಗೂ ಸಾಫ್ಟ್ ವೇರ್ ಕುಟುಂಬದಲ್ಲಿ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮತ್ತು ಅವರ ತಂದೆ ತಾಯಿ ಇದ್ದಾರೆ.

ಮಾಡು ಸಿಕ್ಕದಲ್ಲ ಪಾತ್ರವರ್ಗದಲ್ಲಿ ಪೂರ್ಣಿಮಾ ಪ್ರಭಾಕರ್, ರೂಪಾ, ಹೇಮಾ ಬೆಳ್ಳೂರು, ರೇಣುಕಾ, ಪದ್ಮಾ ಕುಮಟ, ಆರ್ ಟಿ ರಮಾ ಮುಂತಾದವರು ಇದ್ದಾರೆ. ಧಾರಾವಾಹಿಗೆ ವಿ .ಮನೋಹರ್ ಅವರ ಸಂಗೀತವಿದೆ. ಗಿರೀಶ್ ಯಲ್ಲಾಪುರ ಮತ್ತು ವಿನೋದ ದೊಂಡಾಲೆ ನಿರ್ದೇಶನದಲ್ಲಿ ಧಾರಾವಾಹಿ ಮೂಡಿಬರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada