»   » 'ವೀಕೆಂಡ್' ಸಾಧಕರ ಸೀಟಿನಲ್ಲಿ 2 ಬಾರಿ ಕುಳಿತ ಏಕೈಕ ಅತಿಥಿ ಗಣೇಶ್

'ವೀಕೆಂಡ್' ಸಾಧಕರ ಸೀಟಿನಲ್ಲಿ 2 ಬಾರಿ ಕುಳಿತ ಏಕೈಕ ಅತಿಥಿ ಗಣೇಶ್

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಇದುವರೆಗೂ ಹಲವು ಸಾಧಕರು ಕೂತಿದ್ದಾರೆ. ಆದ್ರೆ, ಒಂದು ಸಲ ಸಾಧಕರ ಕುರ್ಚಿಯಲ್ಲಿ ಕುಳಿತುಕೊಂಡ ಅತಿಥಿಗಳು ಮತ್ತೆ ಎರಡನೇ ಸಲ ಈ ಸೀಟಿನಲ್ಲಿ ಕುಳಿತಿಲ್ಲ, ಕುಳಿತ ಉದಾಹರಣೆಯೂ ಇಲ್ಲ. ಆದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಅವರ ವಿಚಾರದಲ್ಲಿ ಇದು ಸಾಧ್ಯವಾಗಿದೆ.

'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯ ಫಿನಾಲೆಯಲ್ಲಿ ಅತಿಥಿಯಾಗಿ ಆಗಮಿಸಿದ್ದ ಗಣೇಶ್, ಇದಕ್ಕೂ ಮುಂಚೆಯೇ ಒಂದು ಸಲ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತಿದ್ದರು. ಇದು ಆಶ್ಚರ್ಯವೆನಿಸಿದರು ನಂಬಲೇಬೇಕು. ಹೌದು, ಎರಡನೇ ಸಲ ನಿಜವಾಗಲೂ ಅತಿಥಿಯಾಗಿದ್ದ ಗಣೇಶ್, ತಮ್ಮ ಸಿನಿಮಾಗಾಗಿ ಮೊದಲನೇ ಸಲ ಕೂತಿದ್ದರು.

ಅಪ್ಪಿ-ತಪ್ಪಿ ಗಣೇಶ್ 'ಕಾಮಿಡಿ ಟೈಮ್' ಅವಕಾಶವನ್ನ ಕೈ ಬಿಟ್ಟಿದ್ದರೆ.?!

Actor Ganesh Participated Twice in Weekend With Ramesh

ಗಣೇಶ್ ಅಭಿನಯದ 'ಸುಂದರಾಂಗ ಜಾಣ' ಸಿನಿಮಾ ನೋಡಿದವರಿಗೆ ಇದು ನೆನಪಾಗುತ್ತೆ. ಈ ಚಿತ್ರವನ್ನ ರಮೇಶ್ ಅರವಿಂದ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ನಾಯಕ ಮರೆಗುಳಿಯಾಗಿರುತ್ತಾನೆ. ಹೀಗಾಗಿ, ಸನ್ನಿವೇಶವೊಂದರಲ್ಲಿ ತಾನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿ ಆಗಿದ್ದೀನಿ ಎಂದು ಕನಸು ಕಾಣುತ್ತಾನೆ. ಈ ದೃಶ್ಯದಲ್ಲಿ ಗೋಲ್ಡನ್ ಸ್ಟಾರ್ ಮೊದಲನೇ ಸಲ ವೀಕೆಂಡ್ ಸಾಧಕರ ಸೀಟಿನಲ್ಲಿ ಕೂತಿದ್ದರು. ಈಗ ಎರಡನೇ ಬಾರಿ ನಿಜವಾಗಲೂ ಅತಿಥಿಯಾಗಿದ್ದರು.

ವೀಕೆಂಡ್ ಸಾಧಕರ ಕುರ್ಚಿಯಲ್ಲಿ ಕೂರುವ ಮುಂಚೆ ಗಣೇಶ್ ಏನಂದ್ರು?

ಹೀಗಾಗಿ, ಇದೊಂದು ರೀತಿ ವಿಶೇಷವೆನಿಸಿಕೊಂಡಿದೆ. ಇನ್ನು ಮೂರನೇ ಆವೃತ್ತಿಯ ಮೊದಲ ಅತಿಥಿಯಾಗಿ ಆಗಮಿಸುತ್ತೇನೆ ಎಂದು ಹೇಳಿದ್ದ ಗಣಿ, ಕೊನೆಯ ಅತಿಥಿಯಾಗಿ ಆಗಮಿಸುವುದರ ಮೂಲಕ ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದರು.

English summary
Kannada Actor Ganesh Participated Twice in Zee Kannada Channels Weekend With Ramesh-3. Wondering How? Read The Article to Know.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada